ಶನಿವಾರ, ಡಿಸೆಂಬರ್ 8, 2018

ಬಾಳೆಕಾಯಿ ಪಲ್ಯ

ಬೇಕಾಗುವ ಸಾಮಗ್ರಿ :
ಬಾಳೆಕಾಯಿ - 3
ಕಡ್ಲೇ ಬೇಳೆ - 1/4 ಕಪ್ (ನೆನೆಸಿದ್ದು)
ಕಡ್ಲೇ ಬೇಳೆ - 1 ಚಮಚ
ಕಾಯಿತುರಿ - 1/2 ಕಪ್
ಉದ್ದಿನ ಬೇಳೆ - 1 ಚಮಚ
ಎಣ್ಣೆ - 2 ಚಮಚ
ಸಾಸಿವೆ - 2 ಚಮಚ
ಕರಿಬೇವು - 1 ಎಸಳು
ಒಣಮೆಣಸಿನಕಾಯಿ - 2/3
ಕೊತ್ತಂಬರಿ ಸೊಪ್ಪು - ಸ್ವಲ್ಪ
ಜೀರಿಗೆ - 1 ಚಮಚ
ಉಪ್ಪು - ರುಚಿಗೆ
ಲಿಂಬೆ ರಸ - 2/3 ಚಮಚ

ಮಾಡುವ ವಿಧಾನ :
ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ನೀರಿನಲ್ಲಿ ನೆನೆಸಿಡಬೇಕು.
ಕಾಯಿತುರಿ, ನೆನೆಸಿದ ಕಡ್ಲೇ ಬೇಳೆ, ಜೀರಿಗೆ, ಒಣಮೆಣಸಿನಕಾಯಿ ಸೇರಿಸಿ ಸ್ವಲ್ಪ ನೀರು ಸೇರಿಸಿ  ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವು, ಉದ್ದಿನ ಬೇಳೆ, ಕಡ್ಲೇ ಬೇಳೆ ಹಾಕಿ ಹೆಚ್ಚಿದ ಬಾಳೆಕಾಯಿ ಹೋಳು ಸೇರಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಸೇರಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಪಲ್ಯ ಸಿದ್ಧವಾಯಿತು.

ಶಾಹಿ ತುಕಡಾ

ಬೇಕಾಗುವ ಸಾಮಗ್ರಿ :
ರಬಡಿಗೆ -
ಹಾಲು - 1 ಲೀಟರ್
ಸಕ್ಕರೆ - 1/4 ಕಪ್
ಕೇಸರಿ ಹಾಲು - 2 ಚಮಚ (5/6 ಕೇಸರಿ ದಳ)
ಏಲಕ್ಕಿ ಪುಡಿ - 1/2 ಚಮಚ
ಕಂಡೆನ್ಸ್ಡ ಮಿಲ್ಕ್ - 1/2 ಕಪ್  (ಬೇಕಾದಲ್ಲಿ)

ಸಕ್ಕರೆ ಪಾಕಕ್ಕೆ-
ಸಕ್ಕರೆ - 1/2 ಕಪ್
ನೀರು - 1/2 ಕಪ್
ಕೇಸರಿ ದಳ - 2/3

ಬ್ರೆಡ್ - 4 (ಒಂದು ಬ್ರೆಡ್ ನಲ್ಲಿ 2 ಭಾಗ)
ತುಪ್ಪ - ಫ್ರೈ ಮಾಡಲು / ಕರಿಯಲು

ಅಲಂಕಾರಕ್ಕೆ -
ಬಾದಾಮಿ, ಗೋಡಂಬಿ ಚೂರುಗಳು.

ಮಾಡುವ ವಿಧಾನ :
ಮೊದಲು ದಪ್ಪ ತಳದಲ್ಲಿ ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕಾಯಿಸಬೇಕು.
ನಂತರ ಸಕ್ಕರೆ ಮತ್ತು ಕೇಸರಿ ಹಾಲು ಸೇರಿಸಿ ಇನ್ನೂ
ದಪ್ಪವಾಗುವವರೆಗೆ ಕಾಯಿಸಬೇಕು.
ನಂತರ ಸಕ್ಕರೆ, ನೀರು ಸೇರಿಸಿ ಕರಗಿಸಿ ಕೇಸರಿ ದಳ ಸೇರಿಸಿ 5 ನಿಮಿಷ ಕುದಿಸಬೇಕು
ಬ್ರೆಡ್ಡನ್ನು ಎರಡು ಭಾಗ ಮಾಡಿ ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಬೇಕು.
ಈ ಬ್ರೆಡ್ ಗೆ ರಬಡಿ ಹಾಕಿ ಬಾದಾಮಿ, ಗೋಡಂಬಿ ಚೂರಗಳಿಂದ ಅಲಂಕರಿಸಬೇಕು.


ರಸ ಮಲೈ

ಇದು ಬೆಂಗಾಲಿ ಸಿಹಿತಿನಿಸು.

ಬೇಕಾಗುವ ಸಾಮಗ್ರಿ :
ಹಾಲು - 1 ಲೀಟರ್
ಹಾಲು - 1/2 ಲೀಟರ್  (ರಬಡಿಗೆ)
ಸಕ್ಕರೆ - 1 ಕಪ್
ಸಕ್ಕರೆ - 1/2 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಕೇಸರಿ - 4/5 ದಳ
ಲಿಂಬು - 1ಕಡಿಮೆ
ಗೋಡಂಬಿ ಮತ್ತು ಬಾದಾಮಿ ಚೂರುಗಳು - 1/4 ಕಪ್

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು.
ಇದಕ್ಕೆ ನಿಂಬುರಸ ಸೇರಿಸಿ ಕೈಯಾಡಿಸುತ್ತಾ ಮತ್ತೂ 30 ನಿಮಿಷಗಳ ಕಾಲ ಕುದಿಸಬೇಕು.
ಹಾಲು ಒಡೆಯಲು ಪ್ರಾರಂಭವಾಗುತ್ತದೆ.
ಈ ಒಡೆದ ಹಾಲನ್ನು ಒಂದು ಬಟ್ಟೆಗೆ ಹಾಕಿ ನೀರನ್ನು ಸೋಸಿಕೊಳ್ಳಬೇಕು.
ನಂತರ ದೊರೆತ ಪನ್ನೀರ್ ಗೆ ತಂಪಾದ ನೀರು ಹಾಕಿ ಬಟ್ಟೆಯನ್ನು ಕಟ್ಟಿ ನೀರು ಬಸಿಯಲು ಅರ್ಧ ಗಂಟೆ ಬಿಡಬೇಕು.
ನಂತರ ಪನ್ನೀರ್ ನ್ನು ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆ ಮಾಡಿ ಸ್ವಲ್ಪ ಚಪ್ಪಟೆ ಮಾಡಬೇಕು.
1 ಕಪ್ ಸಕ್ಕರೆಗೆ 2 ಲೋಟ ನೀರು ಸೇರಿಸಿ 10 ನಿಮಿಷ ಕುದಿಸಬೇಕು.
ಈ ಸಕ್ಕರೆ ಪಾಕದಲ್ಲಿ ಉಂಡೆಗಳನ್ನು ಹಾಕಿ ಮತ್ತೆ 15 ನಿಮಿಷ ಕುದಿಸಿ ಪಾಕದಿಂದ ತೆಗೆಯಬೇಕು.

ರಬಡಿ
1/2 ಲೀಟರ್ ಹಾಲನ್ನು ಕಾಯಿಸಿ 1/2 ಕಪ್ ಸಕ್ಕರೆ ಸೇರಿಸಿ ಕುದಿಸಬೇಕು.
ಸ್ವಲ್ಪ ದಪ್ಪವಾಗುವವರೆಗೂ ಕುದಿಸಿ ಕೇಸರಿ ಮತ್ತು ಏಲಕ್ಕಿ ಪುಡಿ ಸೇರಿಸಿ ತಣ್ಣಗಾಗಲು ಬಿಡಬೇಕು.
ನಂತರ ಫ್ರಿಡ್ಜ್ ನಲ್ಲಿ ಇಡಬೇಕು

ರಬಡಿಗೆ ಮಲೈಯನ್ನು ಸೇರಿಸಿ ಗೋಡಂಬಿ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಬೇಕು.


ಶುಕ್ರವಾರ, ನವೆಂಬರ್ 30, 2018

ಹೀರೆಕಾಯಿ ಬಜೆ

ಬೇಕಾಗುವ ಸಾಮಗ್ರಿ :
ಹೀರೆಕಾಯಿ - 1 (ದೊಡ್ಡದು)
ಕಡಲೇ ಹಿಟ್ಟು - 1 ಕಪ್
ಬೆಳ್ಳುಳ್ಳಿ - 10/12 ಎಸಳು
ಹಸಿಮೆಣಸಿನ ಕಾಯಿ - 2
ಮೆಣಸಿನ ಪುಡಿ - 1/2 ಚಮಚ
ಉಪ್ಪು - ರುಚಿಗೆ
ನೀರು - ಅಗತ್ಯಕ್ಕೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - 1 ಕಟ್ಟು
ಜೀರಿಗೆ - 1 ಚಮಚ
ಓಂಕಾಳು - 1/4 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ :
ಹೀರೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಗೋಲಾಕಾರದಲ್ಲಿ ಹೆಚ್ಚಿಕೊಳ್ಳಬೇಕು.
ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪ, ಜೀರಿಗೆ, ಓಂಕಾಳು ಎಲ್ಲವನ್ನೂ ಸೇರಿಸಿ ರುಬ್ಬಿಟ್ಟುಕೊಳ್ಳಬೇಕು.
ಕಡಲೇ ಹಿಟ್ಟಿಗೆ ರುಬ್ಬಿದ ಮಿಶ್ರಣ, ಉಪ್ಪು, ಮೆಣಸಿನ ಪುಡಿ ಸೇರಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ಈ ಹಿಟ್ಟಿನಲ್ಲಿ ಕತ್ತರಿಸಿಟ್ಪ ಹೀರೆಕಾಯಿಯ ಹೋಳನ್ನು ಅದ್ದಿನ್ಗ್ ಕರಿಯಬೇಕು.

ಅರಿಶಿಣ ಕೊಂಬಿನ ಗೊಜ್ಜು

ಬೇಕಾಗುವ ಸಾಮಗ್ರಿ :
ಅರಿಶಿಣ ಕೊಂಬು - 4
ಕಾಯಿತುರಿ - 2 ಕಪ್
ಕೊತ್ತಂಬರಿ - 1ಚಮಚ
ಒಣಮೆಣಸಿನಕಾಯಿ - 3/4
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 3/4 ಸೌಟು
ಹುಳಿಪುಡಿ - ರುಚಿಗೆ ತಕ್ಕಷ್ಟು
ಎಣ್ಣೆ - 2 ಚಮಚ

ಮಾಡುವ ವಿಧಾನ :
ಅರಿಶಿಣ ಕೊಂಬನ್ನು ತೊಳೆದು ನೀರಿನಲ್ಲಿ ಅಥವಾ ಕೆಂಡ ಸಿಗುವಂತಿದ್ದರೆ ಕೆಂಡದಲ್ಲಿ ಬೇಯಿಸಿಕೊಳ್ಳಬೇಕು.
ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸಿನಕಾಯಿ ಮತ್ತು ಕೊತ್ತಂಬರಿಯನ್ನು ಹುರಿದುಕೊಳ್ಳಬೇಕು.
ಬೇಯಿಸಿದ ಅರಿಶಿಣ ಹುರಿದ ಪದಾರ್ಥ ಹಾಗೂ ಕಾಯಿತುರಿ ಸೇರಿಸಿ ರುಬ್ಬಬೇಕು.
ಇದಕ್ಕೆ ಉಪ್ಪು, ಹುಳಿಪುಡಿ, ಬೆಲ್ಲ ಸೇರಿಸಿ ಕುದಿಸಬೇಕು.

ಸೂಚನೆ :
ಉಪ್ಪು, ಹುಳಿಪುಡಿ, ಬೆಲ್ಲವನ್ನು ರುಚಿಗೆತಕ್ಕಷ್ಟು ಸೇರಿಸಿಕೊಳ್ಳಬಹುದು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಬಹುದು.
ಹುಳಿಪುಡಿಗೆ ಬದಲು ಹುಣಸೇಹಣ್ಣು ಬಳಸಬಹುದು.


ಹಾಗಿಲಕಾಯಿ ಪಲ್ಯ

ಬೇಕಾಗುವ ಸಾಮಗ್ರಿ :
ಹಾಗಿಲಕಾಯಿ - 3/4
ಕಾಯಿತುರಿ - 1/2 ಕಪ್
ಸೂಜಿಮೆಣಸು - 6/7
(ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಈರುಳ್ಳಿ - 2
ಸಾಸಿವೆ - 1 ಚಮಚ
ಜೀರಿಗೆ - 2 ಚಮಚ
ಎಣ್ಣೆ - 1 ಸೌಟು
ಅರಿಸಿಣ - 1 ಚಿಟಿಕೆ
ಹುಳಿಪುಡಿ - 3 ಚಮಚ
(ಇಲ್ಲವಾದಲ್ಲಿ ಹುಣಸೇಹಣ್ಣು ಬಳಸಬಹುದು)
ಉಪ್ಪು - ರುಚಿಗೆ

ಮಾಡುವ ವಿಧಾನ :
ಹಾಗಿಲಕಾಯಿಯನ್ನು ಸಣ್ಣಗೆ ಹೆಚ್ಚಿ ಉಪ್ಪು ಮತ್ತು ಎರಡು ಚಮಚ ಹುಳಿಪುಡಿ ಹಾಕಿ ಕಲಸಿ 5 ನಿಮಿಷ ಬಿಡಬೇಕು. ನಂತರ ಹಿಂಡಿ ನೀರು ತೆಗೆದಿಟ್ಟುಕೊಳ್ಳಬೇಕು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ  ಸಿಡಿಸಿ ಅರಿಸಿಣ, ಸೂಜಿಮೆಣಸು, ಜೀರಿಗೆ ಹಾಕಿ ಕೈಯಾಡಿಸಿ ಅದಕ್ಕೆ ಹೆಚ್ಚಿ ಸಿದ್ಧಪಡಿಸಿದ ಹಾಗಿಲಕಾಯಿ ಹೋಳು ಸೇರಿಸಬೇಕು.
ಚೆನ್ನಾಗಿ ಹುರಿದ ನಂತರ ಕಾಯಿತುರಿ, ಹೆಚ್ಚಿದ ಈರುಳ್ಳಿ, ಉಪ್ಪು ಮತ್ತು 1 ಚಮಚ ಹುಳಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿದರೇ ಹಾಗಿಲಕಾಯಿ ಪಲ್ಯ ಸಿದ್ಧವಾಯಿತು.

ಅನ್ನ ಮತ್ತು ದೋಸೆಯ ಜೊತೆಗೆ ಒಳ್ಳೆಯ ಕಾಂಬಿನೇಷನ್.


ಕೆಸುವಿನ ಸೊಪ್ಪಿನ ಗೊಜ್ಜು

ಬೇಕಾಗುವ ಸಾಮಗ್ರಿ :
ಕೆಸುವಿನ ಸೊಪ್ಪು - 5/6 (ದೊಡ್ಡದು)
ಕಾಯಿತುರಿ - 1/2 ಕಪ್
ಸಣಮೆಣಸು - 5/6
(ಇಲ್ಲವಾದಲ್ಲಿ  ಹಸಿಮೆಣಸನ್ನು ಬಳಸಬಹುದು)
ಜೀರಿಗೆ - 2 ಚಮಚ
ಬೆಳ್ಳುಳ್ಳಿ - 6/8
ಎಣ್ಣೆ - 2 ಚಮಚ
ಸಾಸಿವೆ - 2 ಚಮಚ
ಉಪ್ಪು - ರುಚಿಗೆ
ಹುಳಿಪುಡಿ - 2 ಚಮಚ
(ಇಲ್ಲವಾದಲ್ಲಿ ಹುಣಸೇ ಹಣ್ಣು ಬಳಸಬಹುದು)

ಮಾಡುವ ವಿಧಾನ :
ಕೆಸುವಿನ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ ಉಪ್ಪು ಮತ್ತು ಹುಳಿಪುಡಿ ಸೇರಿಸಿ ಬೇಯಿಸಬೇಕು. ಇದನ್ನು ತಣಿಸಿ ನೀರು ಬಸಿದು ಕಾಯಿತುರಿ, ಜೀರಿಗೆ, ಸಣಮೆಣಸು ಸೇರಿಸಿ ನುಣ್ಣಗೆ ರುಬ್ಬಬೇಕು.
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಮತ್ತು ಸಾಸಿವೆ ಕಾಳಿನ ಒಗ್ಗರಣೆ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹುಳಿ ಸೇರಿಸಿದರೆ ಕೆಸುವಿನ ಸೊಪ್ಪಿನ ಗೊಜ್ಜು ಸಿದ್ಧವಾಯಿತು.
ಅನ್ನ ಮತ್ತು ದೋಸೆಯ ಜೊತೆಗೆ ಚೆನ್ನಾಗಿರುತ್ತದೆ.

ತಂಬಿಟ್ಟು

ಬೇಕಾಗುವ ಸಾಮಗ್ರಿ :
ಅಕ್ಕಿ - 1 ಕಪ್
ಶೇಂಗಾ - 1 ಕಪ್
ಹುರಿಗಡಲೆ - 1/2 ಕಪ್
ಕಾಯಿತುರಿ - 1/2 ಕಪ್
ಎಳ್ಳು - 1/4 ಕಪ್
ಗಸಗಸೆ - 4 ಚಮಚ
ಗೋಡಂಬಿ - 1/4 ಕಪ್
ಏಲಕ್ಕಿ ಪುಡಿ - 1/2 ಚಮಚ
ಬೆಲ್ಲ - 1 ಕಪ್
ನೀರು - 1 ಕಪ್

ಮಾಡುವ ವಿಧಾನ :
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಬೇರೆ ಬೇರೆಯಾಗಿ ಘಮ್ಮನೇ ಪರಿಮಳ ಬರುವವರೆಗೆ ಹುರಿದು ತಣ್ಣಗಾಗಲು ಬಿಡಬೇಕು.
ಅಕ್ಕಿ ಮತ್ತು ಹುರಿಗಡಲೆಯನ್ನು ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಶೇಂಗಾವನ್ನು ತರಿತರಿಯಾಗಿ ಮಿಕ್ಸಿಮಾಡಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ನೀರು ಹಾಕಿ ಸಣ್ಣ ಉರಿಯಲ್ಲಿ ಬೆಲ್ಲವನ್ನು ಕರಗಿಸಿ 5 ನಿಮಿಷ ಪಾಕಬರದಂತೆ ಕುದಿಸಿ ಅದಕ್ಕೆ ಹುರಿದು ಪುಡಿಮಾಡಿದ ಅಕ್ಕಿ ಮತ್ತು ಹುರಿಗಡಲೆ ಪುಡಿ, ಶೇಂಗಾ, ಹುರಿದ ಎಳ್ಳು ಮತ್ತು ಗಸಗಸೆ, ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ತಣ್ಣಗಾದ ಮೇಲೆ ಚೆನ್ನಾಗಿ ಕಲಸಿ ಉಂಡೆಕಟ್ಟಬೇಕು.


ಬೇಸನ್ ಲಾಡು

ಬೇಕಾಗುವ ಸಾಮಗ್ರಿ :
ಕಡಲೇ ಹಿಟ್ಟು - 1 ಕಪ್
ಸಕ್ಕರೆ ಪುಡಿ - 1/2 ಕಪ್
ತುಪ್ಪ - 1/4 ಕಪ್
ಏಲಕ್ಕಿ ಪುಡಿ - 1/4 ಚಮಚ

ಮಾಡುವ ವಿಧಾನ :
ಒಂದು ಬಾಣಲೆಗೆ ತುಪ್ಪ ಹಾಕಿ ಕರಗಿದ ಮೇಲೆ ಅದಕ್ಕೆ ಕಡಲೇ ಹಿಟ್ಟು ಹಾಕಿ ತುಪ್ಪ ತಳ ಬಿಡುವವರೆಗೆ ಕೈಯಾಡಿಸಬೇಕು. ಸುಮಾರು 20 ರಿಂದ 25 ನಿಮಿಷ ಬೇಕಾಗುತ್ತದೆ. ನಂತರ ಸಕ್ಕರೆ ಪುಡಿ ಸೇರಿಸಿ ಕೈಯಾಡಿಸಿ ಸ್ವಲ್ಪ ತಣ್ಣಗಾದ ಮೇಲೆ ಉಂಡೆ ಮಾಡಬೇಕು.


ಸೆವೆನ್ಸ್ ಕಪ್ ಸ್ವೀಟ್

ಬೇಕಾಗುವ ಸಾಮಗ್ರಿ :
ಕಾಯಿತುರಿ - 1ಕಪ್
ಕಡಲೆ ಹಿಟ್ಟು - 1ಕಪ್
ಹಾಲು - 1ಕಪ್
ತುಪ್ಪ -1ಕಪ್
ಸಕ್ಕರೆ - 3 ಕಪ್

ಮಾಡುವ ವಿಧಾನ :
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಬರ್ಫಿಯ ಪಾಕ ಬರುವವರೆಗೆ ಕೈಯಾಡಿಸಿ ಬಿಸಿ ಇರುವಾಗಲೇ ತುಪ್ಪ ಸವರಿದ ಬಟ್ಟಲಿನಲ್ಲಿ ಹರಡಿ ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಸೆವೆನ್ ಕಪ್ ಸ್ವೀಟ್ ರೆಡಿ.

ಟೊಮ್ಯಾಟೋ ಸೂಪ್

ಬೇಕಾಗುವ ಸಾಮಗ್ರಿ :
ಟೊಮ್ಯಾಟೋ - 4
ಈರುಳ್ಳಿ - 2
ಮೈದಾಹಿಟ್ಟು - 1 ಚಮಚ
ಟೊಮ್ಯಾಟೋ ಸಾಸ್ - 2 ಚಮಚ
ಕಾಳುಮೆಣಸಿನ ಪುಡಿ - 1 ಚಮಚ
ಮೆಣಸಿನ ಪುಡಿ - 1/2 ಚಮಚ
ಸಕ್ಕರೆ - 2 ಚಮಚ
ಉಪ್ಪು - ರುಚಿಗೆ
ನೀರು - 4 ಕಪ್
ಹಾಲಿನ ಕೆನೆ - 2 ಚಮಚ
(ಪೇಟೆಗಳಲ್ಲಿ ಸಿಗುವ ಕ್ರೀಂ ಬಳಸಬಹುದು)
ಬೆಣ್ಣೆ - 4 ಚಮಚ
ಲವಂಗ - 4
ಫ್ರೈಮಾಡಿದ ಬ್ರೆಡ್ ಸ್ಲೈಸ್ - 16/20

ಮಾಡುವ ವಿಧಾನ :
ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೋ ಹೋಳನ್ನು ಬಾಡಿಸಿಕೊಳ್ಳಬೇಕು.
ಇದಕ್ಕೆ ಲವಂಗ ಸೇರಿಸಬೇಕು.
2 ಕಪ್ ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಬೇಕು.
ಇದನ್ನು ತಣಿಯಲು ಬಿಡಬೇಕು.
ನಂತರ ಮಿಕ್ಸಿ ಮಾಡಿ ಸೋಸಿ ರಸ ತೆಗೆದುಕೊಳ್ಳಬೇಕು.
ಇದಕ್ಕೆ ಮೈದಾಹಿಟ್ಟನ್ನು ನೀರಿನಲ್ಲಿ ಕದಡಿ ಸೇರಿಸಬೇಕು.
ಉಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ, ಹಾಲಿನ ಕೆನೆ, ಟೊಮ್ಯಾಟೋ ಸಾಸ್ ಮತ್ತು 2 ಕಪ್ ನೀರು ಸೇರಿಸಿ ಕುದಿಸಬೇಕು.
(ದಪ್ಪವೆನಿಸಿದರೆ ಮತ್ತೂ ನೀರು ಸೇರಿಸಬಹುದು)
ಬಿಸಿಯಾಗಿರುವಾಗಲೇ ಬೌಲ್ ಗೆ ಹಾಕಿ ಮೇಲಿನಿಂದ ಬ್ರೆಡ್ ಸ್ಲೈಸ್ ಹಾಕಿ ಸವಿಯಬೇಕು.


ಬಾಳೆದಿಂಡಿನ ಪಲ್ಯ

ಬೇಕಾಗುವ ಸಾಮಗ್ರಿ :
ಸಣ್ಣಗೆ ಹೆಚ್ಚಿದ ಬಾಳೆದಿಂಡು - 1 ರಿಂದ 1/2 ಕಪ್
ಕಾಯಿತುರಿ - 1 ಕಪ್
ಬೇವಿನ ಸೊಪ್ಪು - 1 ಎಸಳು
ಹಿಂಗು - 1 ಚಿಟಿಕೆ
ನಿಂಬೆಹಣ್ಣು - 1
ಉಪ್ಪು - ರುಚಿಗೆ
ಎಣ್ಣೆ - 2 ಚಮಚ
ಸಾಸಿವೆ - 1 ಚಮಚ
ಜೀರಿಗೆ - 1 ಚಮಚ
ಪಲ್ಯದ ಪುಡಿ - 1 ಚಮಚ
ಮೆಣಸಿನ ಪುಡಿ - 1/2 ಚಮಚ
ಹಸಿಮೆಣಸಿನಕಾಯಿ - 1
ಅರಿಸಿಣ - 1 ಚಿಟಿಕೆ
ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ :
ಹೆಚ್ಚಿದ ಹೋಳಿಗೆ ನಿಂಬೆರಸ ಹಾಕಿ 5 ನಿಮಿಷ ನೆನೆಸಿ ಹಿಂಡಿಟ್ಟುಕೊಳ್ಳಬೇಕು.
ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಅರಿಸಿಣ, ಹೆಚ್ಚಿದ ಹಸಿಮೆಣಸಿನಕಾಯಿ, ಬೇವಿನ ಸೊಪ್ಪು ಮತ್ತು ಜೀರಿಗೆ ಹಾಕಿ ಕೈಯಾಡಿಸಬೇಕು.
ಕಾಯಿತುರಿ ಸೇರಿಸಿ ಉಪ್ಪು ಹಾಕಬೇಕು.
ಪಲ್ಯದ ಪುಡಿ, ಮೆಣಸಿನ ಪುಡಿ ಸೇರಿಸಿ ಸೇರಿಸಬೇಕು.
ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿದರೆ ಪಲ್ಯ ಸಿದ್ಧವಾಯಿತು.

ಬ್ರೆಡ್ ಪಕೋಡ

ಬೇಕಾಗುವ ಸಾಮಗ್ರಿ :
ಬ್ರೆಡ್ - 5
ಕಡಲೆಹಿಟ್ಟು - 1/2 ಕಪ್
ಉಪ್ಪು - ರುಚಿಗೆ
ಬೆಳ್ಳುಳ್ಳಿ - 10/15
ಜೀರಿಗೆ - 2 ಚಮಚ
ಕೊತ್ತಂಬರಿ ಸೊಪ್ಪು - 1 ಕಟ್ಟು
ಹಸಿಮೆಣಸಿನಕಾಯಿ - 2
ಎಣ್ಣೆ - ಕರಿಯಲು

ಮಾಡುವ ವಿಧಾನ :
ಮೊದಲು ಬ್ರೆಡ್ ನ್ನು ನಾಲ್ಕು ಭಾಗ ಮಾಡಿಟ್ಟುಕೊಳ್ಳಬೇಕು.
ನಂತರ ಕಡಲೇಹಿಟ್ಟಿಗೆ ಬೇಕಾದಷ್ಟು ನೀರು ಮತ್ತು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ಮಿಕ್ಸಿ ಜಾರ್ ಗೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಬೆಳ್ಳುಳ್ಳಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.
ಬ್ರೆಡ್ ತುಂಡಿಗೆ ರುಬ್ಬಿಟ್ಟ ಮಿಶ್ರಣವನ್ನು ಹಚ್ಚಿ ಮತ್ತೊಂದು ಬ್ರೆಡ್ ನಿಂದ ಮುಚ್ಚಿ ಸ್ವಲ್ಪ ಒತ್ತಿ ಕಲಸಿಟ್ಟ ಕಡಲೇಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು.
ಚಟ್ನಿ ಅಥವಾ ಸಾಸ್ ನ ಜೊತೆ ಸವಿಯಲು ಚೆನ್ನಾಗಿರುತ್ತದೆ.

ಕಾಂಡ್ವಿ

ಗುಜರಾತಿ ಸ್ಪೆಷಲ್ ಕಾಂಡ್ವಿ

ಶ್ರಾವಣ ಗೌರಿ ನೋಡಲು ಒಂದು ಗುಜರಾತಿ ಕುಟುಂಬಕ್ಕೆ ಕರೆದಿದ್ದರು. ಶ್ರಾವಣ ಮಾಸದಲ್ಲಿ ಒಂಬತ್ತು ದಿನಗಳ ಕಾಲ ಗೌರಿಯ ಮೂರ್ತಿಯನ್ನು ಇಟ್ಟು ಪೂಜಿಸಿ ನಂತರ ವಿಸರ್ಜನೆ ಮಾಡುತ್ತಾರೆ ಅಂದರೆ ನೀರಿಗೆ ಬಿಡುವ ಪದ್ಧತಿ ಇದೆ. ಅಲ್ಲಿ ಕಾಫಿಯ ಜೊತೆಗೆ ಅವರ ಕೆಲವು ಪ್ರಸಿದ್ಧ ತಿಂಡಿಗಳನ್ನು ಇಟ್ಟಿದ್ದರು. ಅದರಲ್ಲಿ ಈ ಕಾಂಡ್ವಿ ಎನ್ನುವ ತಿಂಡಿ ನನ್ನನ್ನು ಬಹಳವೇ ಆಕರ್ಷಿಸಿತು. ಈ ತಿನಿಸು ಮೋದಿಗೂ ಬಹಳ ಪ್ರಿಯವಂತೆ..

ನೋಡಲು ಬಹಳವೇ ಸುಂದರವಾಗಿತ್ತು. ತಿಂದು ನೋಡಿದಾಗಲೂ ರುಚಿ ಹಿಡಿಸಿತು. ಅವರ ಬಳಿ ಮಾಡುವ ವಿಧಾನ ಕೇಳಿಯೂ ಆಯಿತು. ಇದರ ಜೊತೆಗೆ ಗೂಗಲ್ ನ ಕೃಪೆಯೊಂದಿಗೆ ಮನೆಯಲ್ಲಿ ಈ ಕಾಂಡ್ವಿಯನ್ನು ತಯಾರಿಸಿದೆ. ನೋಡಲು ಹಾಗೆಯೇ ಇತ್ತು ಜೊತೆಗೆ ರುಚಿಯೂ ಸಹ ಇತ್ತು.

ಬೇಕಾಗುವ ಸಾಮಗ್ರಿ :
ಕಡಲೆಹಿಟ್ಟು : 3/4 ಕಪ್
ನೀರು : 1 ಕಪ್
ಮೊಸರು : 3/4 ಕಪ್
ಇಂಗು : 1/4 ಚಮಚ
ಅರಿಸಿಣ : 1 ಚಿಟಿಕೆ
ಶುಂಠಿ & ಹಸಿಮೆಣಸಿನಕಾಯಿ ಪೇಸ್ಟ್ : 1 ಚಮಚ
ಉಪ್ಪು : ರುಚಿಗೆ

ಒಗ್ಗರಣೆಗೆ :
ಸಾಸಿವೆ : 1 ಚಮಚ
ಎಳ್ಳು : 1 ಚಮಚ
ಇಂಗು : 1 ಚಿಟಿಕೆ
ಒಣಮೆಣಸಿನಕಾಯಿ : 1
ಎಣ್ಣೆ : 2 ಚಮಚ

ಅಲಂಕಾರಕ್ಕೆ :
ಹೆಚ್ಚಿದ ಕೊತ್ತಂಬರಿ ಸೊಪ್ಪು : ಸ್ವಲ್ಪ
ಕಾಯಿತುರಿ : ಸ್ವಲ್ಪ

ಮಾಡುವ ವಿಧಾನ :
ಒಂದು ಪ್ಯಾನ್ ಗೆ ಕಡಲೇಹಿಟ್ಟು, ನೀರು, ಮೊಸರು, ಉಪ್ಪು, ಶುಂಠಿ & ಹಸಿಮೆಣಸಿನಕಾಯಿ ಪೇಸ್ಟ್, ಇಂಗು, ಅರಿಸಿಣ ಎಲ್ಲವನ್ನು ಗಂಟಿಲ್ಲದಂತೆ ಸರಿಯಾಗಿ ಕಲಸಿಕೊಳ್ಳಬೇಕು.
ನಂತರ ಒಲೆಯ ಮೇಲಿಟ್ಟು ತಳಬಿಡುವವರೆಗೆ ಕೈಯಾಡಿಸಬೇಕು.
ಎಷ್ಟು ಬಟ್ಟಲು ಅಗತ್ಯವೋ ಅಷ್ಟು ಬಟ್ಟಲಿನ ಮೇಲೆ ಎಣ್ಣೆ ಸವರಿಟ್ಟುಕೊಳ್ಳಬೇಕು. ಒಲೆಯಿಂದ ಇಳಿಸಿದ ತಕ್ಷಣವೇ ಬಟ್ಟಲಿನ ಮೇಲೆ ಹಪ್ಪಳದ ರೀತಿ ಚಮಚದ ಸಹಾಯದಿಂದ ಹರವಬೇಕು.
ಚಾಕುವಿನಿಂದ ಉದ್ದಕ್ಕೆ ಕತ್ತರಿಸಬೇಕು. 5 ನಿಮಿಷ ಬಿಟ್ಟು ಸುರುಳಿ ಮಾಡುತ್ತಾ ಬಟ್ಟಲಿನಿಂದ ಎತ್ತಬೇಕು.
ಮೇಲೆ ಹೇಳಿದ ಸಾಮಗ್ರಿಗಳಿಂದ ಈ ರೋಲ್ ಗಳಿಗೆ ಒಗ್ಗರಣೆ ಮಾಡಬೇಕು. ನಂತರ ಮೇಲಿನ ಸಾಮಗ್ರಿಗಳಿಂದ ಅಲಂಕರಿಸಬೇಕು.

ಗುಜರಾತಿ ಸ್ಪೆಷಲ್ ಕಾಂಡ್ವಿ ಸವಿಯಲು ಸಿದ್ಧ.

ಜೋಳದ ಮಂಚೂರಿ

ಬೇಕಾಗುವ ಸಾಮಗ್ರಿ :
ಜೋಳದ ಕುಂಡಿಗೆ - 2
ಕಡಲೇ ಹಿಟ್ಟು - 1/2 ಕಪ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ
ಮೆಣಸಿನಪುಡಿ - 1/2 ಚಮಚ
ಸೋಯಾಸಾಸ್ - 4 ಚಮಚ
ಚಿಲ್ಲಿ ಸಾಸ್ - 3/4 ಚಮಚ
ಟೊಮೆಟೋ ಕೆಚಪ್ - 5/6 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2/3 ಚಮಚ
ಈರುಳ್ಳಿ (ಹೆಚ್ಚಿದ್ದು) - 2/3
ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ :
ಮೊದಲು ಜೋಳವನ್ನು ಕುಂಡಿಗೆಯಿಂದ ಬಿಡಿಸಿ ಮಿಕ್ಸಿಯಲ್ಲಿ ತರಿಯಾಗಿ ಬೀಸಿಕೊಳ್ಳಬೇಕು. ಇದಕ್ಕೆ ಕಡಲೆಹಿಟ್ಟು, ಉಪ್ಪು ಮತ್ತು ಮೆಣಸಿನಪುಡಿ ಹಾಕಿ ಉಂಡೆಮಾಡಲು ಬರುವಂತೆ  ಕಲಸಬೇಕು. ಬೇಕಾದರೆ ಸ್ವಲ್ಪವೇ ನೀರು ಸೇರಿಸಬಹುದು.

ಎಣ್ಣೆ ಬಿಸಿಯಾದ ನಂತರ ಕಲಸಿಟ್ಟ ಸಿಟ್ಟಿನಿಂದ ಚಿಕ್ಕ ಉಂಡೆ ಮಾಡಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿಯಬೇಕು.

ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಕೈಯಾಡಿಸಬೇಕು. ನಂತರ ಸೋಯಾಸಾಸ್ ಹಾಕಿ ಕರಿದದ್ದನ್ನು ಹಾಕಿ ಕೈಯಾಡಿಸಿ ಚಿಲ್ಲಿ ಸಾಸ್ ಮತ್ತು ಟೊಮೆಟೊ ಕೆಚಪ್ ಸೇರಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಇಳಿಸಬೇಕು.

ರುಚಿಯಾದ ಜೋಳದ ಮಂಚೂರಿ ರೆಡಿ...