ಶುಕ್ರವಾರ, ನವೆಂಬರ್ 30, 2018

ಹಾಗಿಲಕಾಯಿ ಪಲ್ಯ

ಬೇಕಾಗುವ ಸಾಮಗ್ರಿ :
ಹಾಗಿಲಕಾಯಿ - 3/4
ಕಾಯಿತುರಿ - 1/2 ಕಪ್
ಸೂಜಿಮೆಣಸು - 6/7
(ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಈರುಳ್ಳಿ - 2
ಸಾಸಿವೆ - 1 ಚಮಚ
ಜೀರಿಗೆ - 2 ಚಮಚ
ಎಣ್ಣೆ - 1 ಸೌಟು
ಅರಿಸಿಣ - 1 ಚಿಟಿಕೆ
ಹುಳಿಪುಡಿ - 3 ಚಮಚ
(ಇಲ್ಲವಾದಲ್ಲಿ ಹುಣಸೇಹಣ್ಣು ಬಳಸಬಹುದು)
ಉಪ್ಪು - ರುಚಿಗೆ

ಮಾಡುವ ವಿಧಾನ :
ಹಾಗಿಲಕಾಯಿಯನ್ನು ಸಣ್ಣಗೆ ಹೆಚ್ಚಿ ಉಪ್ಪು ಮತ್ತು ಎರಡು ಚಮಚ ಹುಳಿಪುಡಿ ಹಾಕಿ ಕಲಸಿ 5 ನಿಮಿಷ ಬಿಡಬೇಕು. ನಂತರ ಹಿಂಡಿ ನೀರು ತೆಗೆದಿಟ್ಟುಕೊಳ್ಳಬೇಕು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ  ಸಿಡಿಸಿ ಅರಿಸಿಣ, ಸೂಜಿಮೆಣಸು, ಜೀರಿಗೆ ಹಾಕಿ ಕೈಯಾಡಿಸಿ ಅದಕ್ಕೆ ಹೆಚ್ಚಿ ಸಿದ್ಧಪಡಿಸಿದ ಹಾಗಿಲಕಾಯಿ ಹೋಳು ಸೇರಿಸಬೇಕು.
ಚೆನ್ನಾಗಿ ಹುರಿದ ನಂತರ ಕಾಯಿತುರಿ, ಹೆಚ್ಚಿದ ಈರುಳ್ಳಿ, ಉಪ್ಪು ಮತ್ತು 1 ಚಮಚ ಹುಳಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿದರೇ ಹಾಗಿಲಕಾಯಿ ಪಲ್ಯ ಸಿದ್ಧವಾಯಿತು.

ಅನ್ನ ಮತ್ತು ದೋಸೆಯ ಜೊತೆಗೆ ಒಳ್ಳೆಯ ಕಾಂಬಿನೇಷನ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ