ಶುಕ್ರವಾರ, ನವೆಂಬರ್ 30, 2018

ಜೋಳದ ಮಂಚೂರಿ

ಬೇಕಾಗುವ ಸಾಮಗ್ರಿ :
ಜೋಳದ ಕುಂಡಿಗೆ - 2
ಕಡಲೇ ಹಿಟ್ಟು - 1/2 ಕಪ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ
ಮೆಣಸಿನಪುಡಿ - 1/2 ಚಮಚ
ಸೋಯಾಸಾಸ್ - 4 ಚಮಚ
ಚಿಲ್ಲಿ ಸಾಸ್ - 3/4 ಚಮಚ
ಟೊಮೆಟೋ ಕೆಚಪ್ - 5/6 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2/3 ಚಮಚ
ಈರುಳ್ಳಿ (ಹೆಚ್ಚಿದ್ದು) - 2/3
ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ :
ಮೊದಲು ಜೋಳವನ್ನು ಕುಂಡಿಗೆಯಿಂದ ಬಿಡಿಸಿ ಮಿಕ್ಸಿಯಲ್ಲಿ ತರಿಯಾಗಿ ಬೀಸಿಕೊಳ್ಳಬೇಕು. ಇದಕ್ಕೆ ಕಡಲೆಹಿಟ್ಟು, ಉಪ್ಪು ಮತ್ತು ಮೆಣಸಿನಪುಡಿ ಹಾಕಿ ಉಂಡೆಮಾಡಲು ಬರುವಂತೆ  ಕಲಸಬೇಕು. ಬೇಕಾದರೆ ಸ್ವಲ್ಪವೇ ನೀರು ಸೇರಿಸಬಹುದು.

ಎಣ್ಣೆ ಬಿಸಿಯಾದ ನಂತರ ಕಲಸಿಟ್ಟ ಸಿಟ್ಟಿನಿಂದ ಚಿಕ್ಕ ಉಂಡೆ ಮಾಡಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿಯಬೇಕು.

ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಕೈಯಾಡಿಸಬೇಕು. ನಂತರ ಸೋಯಾಸಾಸ್ ಹಾಕಿ ಕರಿದದ್ದನ್ನು ಹಾಕಿ ಕೈಯಾಡಿಸಿ ಚಿಲ್ಲಿ ಸಾಸ್ ಮತ್ತು ಟೊಮೆಟೊ ಕೆಚಪ್ ಸೇರಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಇಳಿಸಬೇಕು.

ರುಚಿಯಾದ ಜೋಳದ ಮಂಚೂರಿ ರೆಡಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ