ಶುಕ್ರವಾರ, ನವೆಂಬರ್ 30, 2018

ಕೆಸುವಿನ ಸೊಪ್ಪಿನ ಗೊಜ್ಜು

ಬೇಕಾಗುವ ಸಾಮಗ್ರಿ :
ಕೆಸುವಿನ ಸೊಪ್ಪು - 5/6 (ದೊಡ್ಡದು)
ಕಾಯಿತುರಿ - 1/2 ಕಪ್
ಸಣಮೆಣಸು - 5/6
(ಇಲ್ಲವಾದಲ್ಲಿ  ಹಸಿಮೆಣಸನ್ನು ಬಳಸಬಹುದು)
ಜೀರಿಗೆ - 2 ಚಮಚ
ಬೆಳ್ಳುಳ್ಳಿ - 6/8
ಎಣ್ಣೆ - 2 ಚಮಚ
ಸಾಸಿವೆ - 2 ಚಮಚ
ಉಪ್ಪು - ರುಚಿಗೆ
ಹುಳಿಪುಡಿ - 2 ಚಮಚ
(ಇಲ್ಲವಾದಲ್ಲಿ ಹುಣಸೇ ಹಣ್ಣು ಬಳಸಬಹುದು)

ಮಾಡುವ ವಿಧಾನ :
ಕೆಸುವಿನ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ ಉಪ್ಪು ಮತ್ತು ಹುಳಿಪುಡಿ ಸೇರಿಸಿ ಬೇಯಿಸಬೇಕು. ಇದನ್ನು ತಣಿಸಿ ನೀರು ಬಸಿದು ಕಾಯಿತುರಿ, ಜೀರಿಗೆ, ಸಣಮೆಣಸು ಸೇರಿಸಿ ನುಣ್ಣಗೆ ರುಬ್ಬಬೇಕು.
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಮತ್ತು ಸಾಸಿವೆ ಕಾಳಿನ ಒಗ್ಗರಣೆ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹುಳಿ ಸೇರಿಸಿದರೆ ಕೆಸುವಿನ ಸೊಪ್ಪಿನ ಗೊಜ್ಜು ಸಿದ್ಧವಾಯಿತು.
ಅನ್ನ ಮತ್ತು ದೋಸೆಯ ಜೊತೆಗೆ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ