ಶನಿವಾರ, ಡಿಸೆಂಬರ್ 8, 2018

ರಸ ಮಲೈ

ಇದು ಬೆಂಗಾಲಿ ಸಿಹಿತಿನಿಸು.

ಬೇಕಾಗುವ ಸಾಮಗ್ರಿ :
ಹಾಲು - 1 ಲೀಟರ್
ಹಾಲು - 1/2 ಲೀಟರ್  (ರಬಡಿಗೆ)
ಸಕ್ಕರೆ - 1 ಕಪ್
ಸಕ್ಕರೆ - 1/2 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಕೇಸರಿ - 4/5 ದಳ
ಲಿಂಬು - 1ಕಡಿಮೆ
ಗೋಡಂಬಿ ಮತ್ತು ಬಾದಾಮಿ ಚೂರುಗಳು - 1/4 ಕಪ್

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು.
ಇದಕ್ಕೆ ನಿಂಬುರಸ ಸೇರಿಸಿ ಕೈಯಾಡಿಸುತ್ತಾ ಮತ್ತೂ 30 ನಿಮಿಷಗಳ ಕಾಲ ಕುದಿಸಬೇಕು.
ಹಾಲು ಒಡೆಯಲು ಪ್ರಾರಂಭವಾಗುತ್ತದೆ.
ಈ ಒಡೆದ ಹಾಲನ್ನು ಒಂದು ಬಟ್ಟೆಗೆ ಹಾಕಿ ನೀರನ್ನು ಸೋಸಿಕೊಳ್ಳಬೇಕು.
ನಂತರ ದೊರೆತ ಪನ್ನೀರ್ ಗೆ ತಂಪಾದ ನೀರು ಹಾಕಿ ಬಟ್ಟೆಯನ್ನು ಕಟ್ಟಿ ನೀರು ಬಸಿಯಲು ಅರ್ಧ ಗಂಟೆ ಬಿಡಬೇಕು.
ನಂತರ ಪನ್ನೀರ್ ನ್ನು ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆ ಮಾಡಿ ಸ್ವಲ್ಪ ಚಪ್ಪಟೆ ಮಾಡಬೇಕು.
1 ಕಪ್ ಸಕ್ಕರೆಗೆ 2 ಲೋಟ ನೀರು ಸೇರಿಸಿ 10 ನಿಮಿಷ ಕುದಿಸಬೇಕು.
ಈ ಸಕ್ಕರೆ ಪಾಕದಲ್ಲಿ ಉಂಡೆಗಳನ್ನು ಹಾಕಿ ಮತ್ತೆ 15 ನಿಮಿಷ ಕುದಿಸಿ ಪಾಕದಿಂದ ತೆಗೆಯಬೇಕು.

ರಬಡಿ
1/2 ಲೀಟರ್ ಹಾಲನ್ನು ಕಾಯಿಸಿ 1/2 ಕಪ್ ಸಕ್ಕರೆ ಸೇರಿಸಿ ಕುದಿಸಬೇಕು.
ಸ್ವಲ್ಪ ದಪ್ಪವಾಗುವವರೆಗೂ ಕುದಿಸಿ ಕೇಸರಿ ಮತ್ತು ಏಲಕ್ಕಿ ಪುಡಿ ಸೇರಿಸಿ ತಣ್ಣಗಾಗಲು ಬಿಡಬೇಕು.
ನಂತರ ಫ್ರಿಡ್ಜ್ ನಲ್ಲಿ ಇಡಬೇಕು

ರಬಡಿಗೆ ಮಲೈಯನ್ನು ಸೇರಿಸಿ ಗೋಡಂಬಿ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಬೇಕು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ