ಭಾನುವಾರ, ಜುಲೈ 16, 2023

ಹರಿವೆ ಸೊಪ್ಪಿನ ಬಜೆ ( ದಂಟಿನ ಸೊಪ್ಪು)


ಬೇಕಾಗುವ ಸಾಮಗ್ರಿ :
ಹರಿವೆ ಸೊಪ್ಪು -  25 ರಿಂದ 30
ಕಡಲೆ ಹಿಟ್ಟು -   ಒಂದು ಕಪ್
ಬೆಳ್ಳುಳ್ಳಿ -  6 ರಿಂದ 8 ಎಸಳು
ಜೀರಿಗೆ -  2 ಚಮಚ
ಓಂ ಕಾಳು - 1 ಚಮಚ
ಕೊತ್ತಂಬರಿ ಸೊಪ್ಪು -  ಸ್ವಲ್ಪ
ಕೆಂಪು ಮೆಣಸಿನ ಪುಡಿ - 1 ಚಮಚ ( ಕಾರ ಬೇಕಾದಲ್ಲಿ ಜಾಸ್ತಿ ಹಾಕಿಕೊಳ್ಳಬಹುದು)
ಹಸಿ ಮೆಣಸಿನಕಾಯಿ - 1 ರಿಂದ 2
ಇಂಗು - 1/2  ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
👉 ಮೊದಲು ಮಿಕ್ಸರ್ ಜಾರ್ ಗೆ ಬೆಳ್ಳುಳ್ಳಿ ಎಸಳು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಓಂ ಕಾಳು, ಮೆಣಸಿನ ಪುಡಿ ಮತ್ತು ಇಂಗು ಎಲ್ಲವನ್ನು ಸೇರಿಸಿ ಮಿಕ್ಸಿ ಮಾಡಿಕೊಳ್ಳಬೇಕು.
(ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು)
👉 ನಂತರ ಈ ಮಿಶ್ರಣವನ್ನು ಒಂದು ಬೌಲ್ ಗೆ ಹಾಕಿ ಬೇಕಾದಷ್ಟು ಉಪ್ಪು ಮತ್ತು ಕಡಲೆ ಹಿಟ್ಟನ್ನು ಹಾಕಿ ನೀರು ಸೇರಿಸುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
(ಬೇಕಾದಲ್ಲಿ ಒಂದು ಚಿಟಿಕೆ ಅಡಿಗೆ ಸೋಡವನ್ನು ಸೇರಿಸಬಹುದು.)
👉 ಹರಿವೆ ಸೊಪ್ಪಿನ ಎಲೆಯನ್ನ ಉಪ್ಪಿನ ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ಇಟ್ಟುಕೊಂಡಿರಬೇಕು.
👉 ಒಂದು ಫ್ರೈಯಿಂಗ್ ಪ್ಯಾನಿಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು.
👉 ನಂತರ ಹರಿವೆ ಸೊಪ್ಪನ್ನ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಚೆನ್ನಾಗಿ ಕರಿದು ತೆಗೆಯಬೇಕು.
👉 ಕ್ರಿಸ್ಪಿಯಾದ ರುಚಿಕರವಾದ ಹರಿವೆ ಸೊಪ್ಪಿನ ಬಜೆ ಸಿದ್ಧವಾಯಿತು.

ಕ್ಯಾರೆಟ್ ಹೋಳಿಗೆ


ಬೇಕಾಗುವ ಸಾಮಗ್ರಿ :
ಕಣಕಕ್ಕೆ :
ಗೋಧಿ ಹಿಟ್ಟು - ೧ ಕಪ್
ಎಣ್ಣೆ - ೧ ದೊಡ್ಡ ಸೌಟು
ಉಪ್ಪು ರುಚಿಗೆ ತಕ್ಕಷ್ಟು
ನೀರು

ಹೂರಣಕ್ಕೆ :
ಕ್ಯಾರೆಟ್ ತುರಿ - ೨ ಕಪ್ (೨ ರಿಂದ ೩ ಕ್ಯಾರೆಟ್ ತುರಿ)
ಬೆಲ್ಲ - ೧/೨ ಕಪ್
ಏಲಕ್ಕಿ ಪುಡಿ - ೧/೪ ಚಿಟಿಕೆ
ತುಪ್ಪ -‌ ೨ ಚಮಚ

ಮಾಡುವ ವಿಧಾನ :
☘️ಗೋಧಿ ಹಿಟ್ಟುಗೆ ಎಣ್ಣೆ, ನೀರು, ಉಪ್ಪು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆದುವಾಗಿ ಕಲೆಸಿಕೊಳ್ಳಬೇಕು.
☘️ಕಲೆಸಿದ ಮಿಶ್ರಣವನ್ನು ಅರ್ಧ ಗಂಟೆಗಳ ಕಾಲ ಹಾಗೆ ಬಿಡಬೇಕು.
ಕ್ಯಾರೆಟ್ ತುರಿಯನ್ನು ತುಪ್ಪದಲ್ಲಿ ಸರಿಯಾಗಿ ಹುರಿದು ನಂತರ ಅದಕ್ಕೆ ಬೆಲ್ಲವನ್ನು ಸೇರಿಸಿ ಪಾಕ ಮಾಡಿಕೊಳ್ಳಬೇಕು.
(ಉಂಡೆ ಕಟ್ಟುವ ಹದಕ್ಕೆ ಬರಬೇಕು)
☘️ಕೊನೆಯಲ್ಲಿ  ಏಲಕ್ಕಿ ಪುಡಿಯನ್ನು ಸೇರಿಸಬೇಕು.
ಗೋಧಿ ಹಿಟ್ಟಿನ ಉಂಡೆ ಮಾಡಿ ಅದರಲ್ಲಿ ಕ್ಯಾರೆಟ್ ಮಿಶ್ರಣವನ್ನ ಸೇರಿಸಿ ಹಿಟ್ಟನ್ನು ಸವರಿ ಚಪಾತಿಯಂತೆ ಲಟ್ಟಿಸಬೇಕು.
☘️ಕಾದ ತವಾದ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ಕ್ಯಾರೆಟ್ ಹೋಳಿಗೆ ಸವಿಯಲು ಸಿದ್ಧ.

ಮಂಗಳವಾರ, ಜೂನ್ 20, 2023

ಮಾವಿನ ಹಣ್ಣಿನ ಶಿರಾ


ಬೇಕಾಗುವ ಸಾಮಗ್ರಿ : 
ಚಿರೋಟಿ ರವಾ - 1 ಕಪ್
ಸಕ್ಕರೆ - 1 ಕಪ್
ಬಿಸಿ ನೀರು - 2 ಕಪ್
ಏಲಕ್ಕಿ ಪುಡಿ - 1/4 ಚಮಚ 
ತುಪ್ಪ - 3/4 ಕಪ್
ಮಾವಿನ ಹಣ್ಣಿನ ರಸ - 1/2 ಕಪ್ (1 ಮಾವಿನ ಹಣ್ಣಿನ ರಸ)
ಗೋಡಂಬಿ - ಸ್ವಲ್ಪ 
ಉಪ್ಪು - 1 ಚಿಟಿಕೆ

ಮಾಡುವ ವಿಧಾನ : 
ಮೊದಲು ಮಾವಿನ ಹಣ್ಣಿನ ಹೋಳು ಮಾಡಿ ಮಿಕ್ಸಿ ಜಾರ್ ಗೆ ಹಾಕಿ ರಸ ಮಾಡಿಕೊಳ್ಳಬೇಕು.
ಒಂದು ಬಾಣಲೆಯಲ್ಲಿಚಿರೋಟಿ ರವಾ ಹಾಕಿ ತುಪ್ಪ ಸೇರಿಸಿ ಕೆಂಪಗಾಗಿ ಒಳ್ಳೆಯ ಘಮ ಬಿಡುವವರೆಗೆ ಹುರಿದುಕೊಳ್ಳಬೇಕು.
ಒಂದು ಚಿಟಿಕೆ ಉಪ್ಪು ಮತ್ತು ಗೋಡಂಬಿ ಚೂರುಗಳನ್ನು ಸೇರಿಸಬೇಕು.
ನಂತರ ಬಿಸಿ ನೀರು ಸೇರಿಸಿ ಕೈಯಾಡಿಸಿ ಸರಿಯಾಗಿ ಬೇಯಿಸಿಕೊಂಡು ಸಕ್ಕರೆ ಸೇರಿಸಬೇಕು.
ತಳ ಬಿಡುವವರೆಗೆ ಕೈಯಾಡಿಸಿ ಗ್ಯಾಸ್ ಆಫ್ ಮಾಡಿದರೆ ಮಾವಿನ ಹಣ್ಣಿನ ಶಿರಾ ಸವಿಯಲು ಸಿದ್ಧ.


ದಾಳಿಂಬೆ ಸಿಪ್ಪೆಯ ತಂಬುಳಿ


ಬೇಕಾಗುವ ಸಾಮಗ್ರಿ :
ದಾಳಿಂಬೆ ಸಿಪ್ಪೆ - ಚಿಕ್ಕ ಹಣ್ಣಾದರೆ ಅರ್ಧ ಹಣ್ಣಿನ ಸಿಪ್ಪೆ
ಕಾಯಿತುರಿ - 1/2 ಕಪ್
ಜೀರಿಗೆ - 1 ಚಮಚ + 1 ಚಮಚ 
ಗಾಂಧಾರಿ ಮೆಣಸು (ಜೀರಿಗೆ ಮೆಣಸು) - 1/2
ಮಜ್ಜಿಗೆ - 1/2 ಲೋಟ
ಎಣ್ಣೆ - 1 ಚಮಚ 
ಸಾಸಿವೆ - 1/2 ಚಮಚ 
ಕರಿಬೇವಿನ ಸೊಪ್ಪು - 4/5 ಎಲೆ

ಮಾಡುವ ವಿಧಾನ : 
ದಾಳಿಂಬೆ ಸಿಪ್ಪೆಯನ್ನು ಬೇಯಿಸಿ ನೀರು ಬಸಿದುಕೊಳ್ಳಬೇಕು.
ಕಾಯಿತುರಿಗೆ ದಾಳಿಂಬೆ ಸಿಪ್ಪೆ, ಜೀರಿಗೆ, ಗಾಂಧಾರಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಬೇಕು.
ಇದಕ್ಕೆ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಕದಡಬೇಕು.
ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಬೇಕು.
ಆರೋಗ್ಯಕರವಾದ, ಬೇಸಿಗೆ ಕಾಲಕ್ಕೆ ಹಿತವಾದ ದಾಳಿಂಬೆ ತಂಬುಳಿ ಅನ್ನದ ಜೊತೆಗೆ ಸವಿಯಲು ಸಿದ್ಧ.

ವೇದಾವತಿ ಭಟ್ಟ 
ಮುಂಬೈ

ಕಾಯಿ ಬಿಸ್ಕತ್ (ಕಾಯಿ ಅತ್ರಾಸ)



ಬೇಕಾಗುವ ಸಾಮಗ್ರಿ :
ಕಾಯಿತುರಿ - ಒಂದು ಕಾಯಿಯದ್ದು
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು 
ಸಕ್ಕರೆ - 3/4 ರಿಂದ 1 ಕಪ್
ಉಪ್ಪು - 1/4 ಚಮಚ 
ಎಣ್ಣೆ - ಕರಿಯಲು

ಮಾಡುವ ವಿಧಾನ :
ಕಾಯಿತುರಿಯನ್ನು ಮಿಕ್ಸಿ ಮಾಡಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಒಂದು ಗಂಟೆ ನೀರಾಗಲು ಬಿಡಬೇಕು.
ನಂತರ ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ಕಲಸಿ ಅರ್ಧ ಗಂಟೆ ಬಿಡಬೇಕು.
ನಂತರ ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಅತ್ರಾಸದಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ ಬಿಸ್ಕತ್ ರೆಡಿ.

ವೇದಾವತಿ ಭಟ್ಟ 
ಮುಂಬೈ



ಸ್ಟ್ರಾಬೆರ್ರಿ ಮಿಲ್ಕ್ ಶೇಕ್


ಬೇಕಾಗುವ ಸಾಮಗ್ರಿ :
ತಣ್ಣನೆಯ ಹಾಲು - 1 ಕಪ್
ಸ್ಟ್ರಾಬೆರ್ರಿ - 5/6
ಸಕ್ಕರೆ - 3 ಚಮಚ

ಮಾಡುವ ವಿಧಾನ :
ಮೊದಲು ಮಿಕ್ಸಿ ಜಾರ್ ಗೆ ಸ್ಟ್ರಾಬೆರ್ರಿ ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ತಣ್ಣನೆಯ ಹಾಲಿಗೆ ಈ ಮಿಶ್ರಣ ಸೇರಿಸಬೇಕು. ದಪ್ಪ ಎನಿಸಿದರೆ ನೀರು, ಸಿಹಿ ಬೇಕಾದರೆ ಸಕ್ಕರೆ ಸೇರಿಸಬೇಕು. 
(1/2 ಗ್ಲಾಸ್ ನೀರು ಸೇರಿಸಿದ್ದೇನೆ)
ಗ್ಲಾಸ್ ಗೆ ಹಾಕಿ ಸ್ಟ್ರಾಬೆರ್ರಿಯಿಂದ ಬೇಕಾದರೆ ಅಲಂಕರಿಸಿದರೆ ತಣ್ಣನೆಯ ಮಿಲ್ಕ್ ಶೇಕ್ ರೆಡಿ.

ವೇದಾವತಿ ಭಟ್ಟ 
ಮುಂಬೈ

ಗುರುವಾರ, ಜೂನ್ 15, 2023

ಹುಳಿ ಮಾವಿನ ಹಣ್ಣಿನ ನೀರ್ಗೊಜ್ಜು


ಬೇಕಾಗುವ ಸಾಮಗ್ರಿ : 
ಹುಳಿ ಮಾವಿನ ಹಣ್ಣು - 4 
ಬೆಲ್ಲ - 2/3 ಸೌಟು (ಹುಳಿ ಇದ್ದರೆ ಹೆಚ್ಚು ಬೆಲ್ಲ ಹಾಕಬಹುದು)
ಕೊಬ್ಬರಿ ಎಣ್ಣೆ - 3 ಚಮಚ
ಬೆಳ್ಳುಳ್ಳಿ - 6/7 ಎಸಳು
ಸಾಸಿವೆ ಕಾಳು - 1 ಚಮಚ 
ಬ್ಯಾಡಗಿ ಮೆಣಸಿನ ಕಾಯಿ - 3/4
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : 
ಮಾವಿನ ಹಣ್ಣಿನ ಸಿಪ್ಪೆ ಸುಲಿದು ತೆಗೆದು ಗೊರಟೆ ಸಮೇತ ಒಂದು ಪಾತ್ರೆಗೆ ಹಾಕಬೇಕು.
ಇದಕ್ಕೆ ಉಪ್ಪ ಮತ್ತು ಬೆಲ್ಲ ಸೇರಿಸಿ ಕಿವುಚಿಕೊಳ್ಳಬೇಕು.
(ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು)
ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಕಾಳು, ಬ್ಯಾಡಗಿ ಮೆಣಸಿನ ಕಾಯಿ, ಜಜ್ಜಿದ ಬೆಳ್ಳುಳ್ಳಿ ಎಸಳು ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ಮೇಲೆ ಸಿದ್ಧ ಪಡಿಸಿದ ಮಿಶ್ರಣಕ್ಕೆ ಸೇರಿಸಬೇಕು.
ಹುಳಿ ಸಿಹಿಯಾದ ನೀರ್ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ.

ಮಂಗಳವಾರ, ಮಾರ್ಚ್ 14, 2023

ಬಾಳೆ ಹಣ್ಣಿನ ಬನ್ಸ್


ಬೇಕಾಗುವ ಸಾಮಗ್ರಿ :
ಬಾಳೆ ಹಣ್ಣು - 4
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
ಮೊಸರು - 1 ಸೌಟು
ಸಕ್ಕರೆ - 3 ಚಮಚ 
ಜೀರಿಗೆ - 1/2 ಚಮಚ 
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬಾಳೆಹಣ್ಣನ್ನು ಮಿಕ್ಸಿ ಮಾಡಿ ಸಕ್ಕರೆ, ಉಪ್ಪು ಮತ್ತು ಮೊಸರು ಸೇರಿಸಿ ಕಲಸಬೇಕು.
ಈ ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ಹಿಟ್ಟು ಸೇರಿಸಿ ಚಪಾತಿ ಹಿಟ್ಟಿಗಿಂತ ಮೆದುವಾಗಿ ಕಲಸಬೇಕು.
ಇದನ್ನು 5 ರಿಂದ 6 ಗಂಟೆ ಹಾಗೆಯೇ ಬಿಡಬೇಕು.
ನಂತರ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ ಕೈಯಿಂದ ಬೇಕಾದ ಆಕಾರ ಮತ್ತು ಗಾತ್ರದಲ್ಲಿ ತಟ್ಟಿ ಬಿಸಿ ಎಣ್ಣೆಯಲ್ಲಿ ತಟ್ಟಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಬೇಕು.

ವೇದಾವತಿ ಭಟ್ಟ 
ಮುಂಬೈ

ಭಾನುವಾರ, ಮಾರ್ಚ್ 5, 2023

ಹೀರೆಕಾಯಿ ಪಲ್ಯ


ಬೇಕಾಗುವ ಸಾಮಗ್ರಿ -
ಹೀರೆಕಾಯಿ - 1 (ಸಣ್ಣದು)
ತೊಗರಿ ಬೇಳೆ - 1/4 ಕಪ್
ಹಸಿ ಮೆಣಸಿನ ಕಾಯಿ - 1
ಬೆಳ್ಳುಳ್ಳಿ - 2
ಈರುಳ್ಳಿ - 1 (ಸಣ್ಣದು)
ಇಂಗು - 1 ಚಿಟಿಕೆ
ಎಣ್ಣೆ - 2 ಚಮಚ 
ಸಾಸಿವೆ - 1/2 ಚಮಚ
ಅರಿಶಿಣ - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಜೀರಿಗೆ - 1 ಚಮಚ 
ಪಾವ್ ಬಾಜಿ ಮಸಾಲ - 1/2 ಚಮಚ 
ಹುಣಸೆ ಹಣ್ಣು - ಸಣ್ಣದು
ಕೊತ್ತಂಬರಿ ಸೊಪ್ಪು - ಸ್ವಲ್ಪ 

ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ತೊಗರಿ ಬೇಳೆಯನ್ನು ನೆನೆಸಿಟ್ಟುಕೊಳ್ಳಬೇಕು.
ಹೀರೆಕಾಯಿ ಸಿಪ್ಪೆ ತೆಗೆದು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಗೆ ಎಣ್ಣೆ ಹಾಕಿ ಅರಿಶಿಣ, ಸಾಸಿವೆ, ಹಸಿ ಮೆಣಸಿನ ಕಾಯಿ ಹಾಕಿ ಕೈಯಾಡಿಸಿ ಬೆಳ್ಳುಳ್ಳಿ, ಜೀರಿಗೆ ಸೇರಿಸಿ ಕೈಯಾಡಿಸಬೇಕು.
ನಂತರ ನೆನೆಸಿದ ತೊಗರಿ ಬೇಳೆ ಸೇರಿಸಿ ಬೇಕಾದಷ್ಟು ನೀರು ಸೇರಿಸಿ ಬೇಯಿಸಬೇಕು.
ಹೆಚ್ಚಿದ ಹೀರೆಕಾಯಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಳಿ ಸೇರಿಸಿ ಬೇಯಿಸಬೇಕು.
ಕೊನೆಯಲ್ಲಿ ಪಾವ್ ಬಾಜಿ ಮಸಾಲ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಇಳಿಸಿದರೆ ಪಲ್ಯ ಸಿದ್ಧವಾಯಿತು.
ಚಪಾತಿಯ ಜೊತೆಗೆ ಬಹಳ ಒಳ್ಳೆಯ ಕಾಂಬಿನೇಷನ್.

ವೇದಾವತಿ ಭಟ್ಟ 
ಮುಂಬೈ

ಗುರುವಾರ, ಫೆಬ್ರವರಿ 16, 2023

ಮಟರ್ (ಹಸಿರು ಬಟಾಣಿ) ಪರೋಟಾ


ಬೇಕಾಗುವ ಸಾಮಗ್ರಿ : 
ಮಟರ್ - 1 ಕಪ್
ಬೆಳ್ಳುಳ್ಳಿ - 4/5 ಎಸಳು
ಈರುಳ್ಳಿ - 1 
ಅರಿಶಿಣ - 1/4 ಚಮಚ 
ಕೊತ್ತಂಬರಿ ಸೊಪ್ಪು - ಸ್ವಲ್ಪ 
ಕಡಲೆ ಹಿಟ್ಟು - 3 ದೊಡ್ಡ ಚಮಚ 
ಜೀರಿಗೆ - 1 ಚಮಚ 
ಎಣ್ಣೆ - 2 ಚಮಚ 
ಹಸಿ ಮೆಣಸಿನ ಕಾಯಿ - 2 
ಗರಂ ಮಸಾಲ - 1 ಚಮಚ 
ಗೋಧಿ ಹಿಟ್ಟು - 1 1/2 ಕಪ್ (ಸ್ವಲ್ಪ ಹೆಚ್ಚು ಕಡಿಮೆ ತೆಗೆದುಕೊಳ್ಳಬಹುದು)
ಎಣ್ಣೆ - 1 ಸೌಟು
ರವಾ - 2 ದೊಡ್ಡ ಚಮಚ 
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ರವಾ ಮತ್ತು ಗೋಧಿ ಹಿಟ್ಟನ್ನು ಉಪ್ಪು, ಎಣ್ಣೆ ಸೇರಿಸಿ ಕಲಸಬೇಕು.
ನಂತರ ಬೇಕಾದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಬಿಡಬೇಕು.
ಒಂದು ಬಾಣಲೆಯಲ್ಲಿ ಕಡಲೆ ಹಿಟ್ಟನ್ನುಎಣ್ಣೆ, ತುಪ್ಪ ಏನೂ ಹಾಕದೇ ಹುರಿದು ಕೊಳ್ಳಬೇಕು. 
ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಮಟರ್ ನ್ನು ಹಸಿಯಾಗಿಯೇ (ಬೇಯಿಸುವ ಅಗತ್ಯವಿಲ್ಲ) ಮಿಕ್ಸಿ ಜಾರ್ ಗೆ ಹಾಕಿ ನೀರು ಸೇರಿಸದೇ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. 
ಒಂದು ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಮೇಲೆ ಜೀರಿಗೆ ಹಾಕಿ ಕೈಯಾಡಿಸಿ ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಹುರಿಯಬೇಕು.
ನಂತರ ಇದಕ್ಕೆ ರುಬ್ಬಿದ ಮಟರ್ ಮತ್ತು ಹುರಿದ ಕಡಲೆ ಹಿಟ್ಟು ಸೇರಿಸಬೇಕು.
ಅರಿಶಿಣ, ಗರಂ ಮಸಾಲ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಒಲೆ ಆರಿಸಿ ತಣ್ಣಗಾಗಲು ಬಿಡಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಬೇಕು.
ಇದನ್ನು ಮೊದಲೇ ಕಲಸಿದ ಗೋಧಿ ಹಿಟ್ಟಿನ ಉಂಡೆಯ ಒಳಗೆ ಸೇರಿಸಿ ಲಟ್ಟಿಸಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಬೇಕು.

(ಹಸಿರು ಚಟ್ನಿ, ಕೆಂಪು ಚಟ್ನಿ ಅಥವಾ ಸಾಸ್ ಇದರ ಜೊತೆಗೆ ಒಳ್ಳೆಯ ಕಾಂಬಿನೇಷನ್)

ವೇದಾವತಿ ಭಟ್ಟ 
ಮುಂಬೈ

ಬುಧವಾರ, ಫೆಬ್ರವರಿ 15, 2023

ಬದನೆಕಾಯಿ ಬಜ್ಜಿ (ಬದನೆ ಕಾಯಿ ಮೊಸರು ಬಜ್ಜಿ/ರಾಯ್ತ)


(ಹವ್ಯಕರ ಸಾಂಪ್ರದಾಯಿಕ ಅಡುಗೆ)

ಬೇಕಾಗುವ ಸಾಮಗ್ರಿ :
ಬದನೆಕಾಯಿ - 2 ರಿಂದ 3 (ಸಣ್ಣದು)
ಈರುಳ್ಳಿ - 1
ಒಣಮೆಣಸು - 2
ಕೊಬ್ಬರಿ ಎಣ್ಣೆ - 2 ಚಮಚ 
ಸಾಸಿವೆ - 1 ಚಮಚ 
ಕಾಯಿತುರಿ - 1/2 ಕಪ್
ಮೊಸರು - 2 ರಿಂದ 3 ಸೌಟು (1/2 ಕಪ್)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬದನೆಕಾಯಿಯನ್ನು ಗ್ಯಾಸ್ ಸ್ಟೋವ್ ನ ಮೇಲೆ ಇಟ್ಟು ಸುಡಬೇಕು.
ತಣ್ಣಗಾದ ನಂತರ ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಬೇಕು. (ಸ್ಮಾಶ್ ಕೂಡ ಮಾಡಬಹುದು)
ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಬೇಕು.
ಕಾಯಿತುರಿ ನುಣ್ಣಗೆ ರುಬ್ಬಿ ಸೇರಿಸಬೇಕು. ಜಾಸ್ತಿ ನೀರು ಸೇರಿಸಬಾರದು. ಸ್ವಲ್ಪ ದಪ್ಪವಾಗಿಯೇ ಇರಲಿ. 
ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೊಸರು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಬೇಕು. 
ಇದಕ್ಕೆ ಸಾಸಿವೆ ಕಾಳು ಹಾಗೂ ಒಣ ಮೆಣಸಿನ ಒಗ್ಗರಣೆ ಕೊಬ್ಬರಿ ಎಣ್ಣೆಯಲ್ಲಿ ಕೊಡಬೇಕು.
ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್.

(ಬೇಕಾದರೆ ಕೊತ್ತಂಬರಿ ಸೊಪ್ಪು ಹೆಚ್ಚಿ ಸೇರಿಸಬಹುದು. ನಾನು ಹಾಕಿಲ್ಲ. ಸಾಂಪ್ರದಾಯಿಕ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸುವುದಿಲ್ಲ.) 

ವೇದಾವತಿ ಭಟ್ಟ 
ಮುಂಬೈ

ವೆಜ್ ಕಟ್ಲೆಟ್



ಬೇಕಾಗುವ ಸಾಮಗ್ರಿ :
ಹಸಿರು ಬಟಾಣಿ - 1 ಕಪ್
ಆಲೂಗಡ್ಡೆ - 2 (ದೊಡ್ಡದು)
ಕ್ಯಾರೆಟ್ - 2 ರಿಂದ 3
ಬೀಟ್ರೂಟ್ - 2
ಬೆಳ್ಳುಳ್ಳಿ - 5/6
ಶುಂಠಿ - 1/2 ಇಂಚು
ಹಸಿ ಮೆಣಸಿನ ಕಾಯಿ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಬ್ರೆಡ್ ಪೌಡರ್ - 1 ಕಪ್
ರವಾ - 1/2 ಕಪ್
ಎಣ್ಣೆ - 2 ಚಮಚ
ಅರಿಶಿಣ - 1 ಚಿಟಿಕೆ
ಸಾಸಿವೆ - 1 ಚಮಚ
ಗರಂ ಮಸಾಲ - 1 ಚಮಚ
ಕಡಲೆ ಹಿಟ್ಟು - 1/4 ಕಪ್

ಮಾಡುವ ವಿಧಾನ :
ಬಟಾಣಿ ಮತ್ತು ಆಲೂಗಡ್ಡೆಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬೇಕು.
ಕ್ಯಾರೆಟ್ ಮತ್ತು ಬೀಟ್ರೂಟ್ ನ್ನು ತುರಿದಿಟ್ಟುಕೊಳ್ಳಬೇಕು.
ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಳ್ಳಬೇಕು.
ರವಾವನ್ನು ಹುರಿದುಕೊಳ್ಳಬೇಕು.
ಒಂದು ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಸಾಸಿವೆ ಮತ್ತು ಅರಿಶಿಣ ಸೇರಿಸಿ ಕೈಯಾಡಿಸಬೇಕು.
ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಬೇಕು.
ನಂತರ ತುರಿದ ಮತ್ತು ಬೇಯಿಸಿದ ತರಕಾರಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಬೇಕು.
ಕೊನೆಯಲ್ಲಿ ಗರಂ ಮಸಾಲ ಮತ್ತು ಬ್ರೆಡ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಬೇಕು.
ಕಡಲೆ ಹಿಟ್ಟಿಗೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ತೆಳುವಾದ ಮಿಶ್ರಣ ಮಾಡಬೇಕು.
ನಂತರ ಈ ಮಿಶ್ರಣಕ್ಕೆ ಬೇಕಾದ ಆಕಾರ ಕೊಟ್ಟು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ರವಾದಲ್ಲಿ ಹೊರಳಿಸಿ ಡೀಪ್ ಫ್ರೈ ಅಥವಾ ಶಾಲೋ ಫ್ರೈ ಮಾಡಿದರೆ ವೆಜ್ ಕಟ್ಲೆಟ್ ರೆಡಿ.

(ನಾನು ಮೈದಾನ ಬದಲು ಕಡಲೆ ಹಿಟ್ಟಿನ ಮಿಶ್ರಣ ಮಾಡಿದ್ದೇನೆ.)

ಕಟ್ಲೆಟ್ ಜೊತೆಗೆ ಕೆಂಪು ಚಟ್ನಿ ಮತ್ತು ಗ್ರೀನ್ ಚಟ್ನಿ

ವೇದಾವತಿ ಭಟ್ಟ
ಮುಂಬೈ

ಶುಕ್ರವಾರ, ಫೆಬ್ರವರಿ 10, 2023

ಮೆಂತ್ಯ ಹಿಟ್ಟು



ಬಹಳ ಆರೋಗ್ಯಕರವಾದ ಒಂದು ಸಾಂಪ್ರದಾಯಿಕವಾದ ರೆಸಿಪಿ. ಬಿಸಿ ಅನ್ನದ ಜೊತೆಗೆ ಉಪ್ಪು, ತುಪ್ಪ ಸೇರಿಸಿ ಊಟ ಮಾಡಿದರೆ ಅದ್ಭುತ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಡುಗೆ ಮಾಡಲು ಸಮಯವಿಲ್ಲ ಅಂದಾಗಲೂ ಸಹ ಇದು ಸಹಾಯಕ. ಮಕ್ಕಳಿಂದ ವಯಸ್ಸಾದವರವರೆಗೂ, ಬಾಣಂತಿಯರಿಗೂ ಇದು ಬಹಳ ಒಳ್ಳೆಯದು.

ಬೇಕಾಗುವ ಸಾಮಗ್ರಿ :
ಕಡಲೆ ಬೇಳೆ - 2 ಕಪ್
ಉದ್ದಿನ ಬೇಳೆ - 1 ಕಪ್ 
ಹೆಸರು ಬೇಳೆ - 3/4 ಚಮಚ
ರಾಗಿ - 2 ದೊಡ್ಡ ಚಮಚ
ಮೆಂತ್ಯ - 2 ದೊಡ್ಡ ಚಮಚ
ಜೀರಿಗೆ - 1 ಚಮಚ
ಕೊತ್ತಂಬರಿ - 1/2 ಚಮಚ
ಅರಿಶಿಣ - 1/4 ಚಮಚ
ಇಂಗು - 1/2 ಚಮಚ
ಒಣ ಮೆಣಸು - 4/5
ಉಪ್ಪು - 1/2 ಚಮಚ
ಮಾಡುವ ವಿಧಾನ :
ಉಪ್ಪು ಮತ್ತು ಇಂಗನ್ನು ಬಿಟ್ಟು ಉಳಿದೆಲ್ಲ ಪದಾರ್ಥವನ್ನು ಬೇರೆಬೇರೆಯಾಗಿ ಚೆನ್ನಾಗಿ ಹುರಿದುಕೊಳ್ಳಬೇಕು.
ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ನುಣ್ಣಗೆ ಪುಡಿ ಮಾಡಬೇಕು.
ಗಾಳಿಯಾಡದ ಡಬ್ಬದಲ್ಲಿ ಈ ಪುಡಿಯನ್ನು ಎರಡರಿಂದ ಮೂರು ತಿಂಗಳವರೆಗೂ ಕೆಡದಂತೆ ಇಡಬಹುದು.

ವೇದಾವತಿ ಭಟ್ಟ
ಮುಂಬೈ

ಗುರುವಾರ, ಫೆಬ್ರವರಿ 9, 2023

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಲಡ್ಡು


ಬೇಕಾಗುವ ಸಾಮಗ್ರಿ :
ಖರ್ಜೂರ - 1/2 kg
ಬಾದಾಮಿ - 50 g
ಗೋಡಂಬಿ - 50g
ಒಣ ದ್ರಾಕ್ಷಿ - 1 ಕಪ್
ಮೆಲನ್ ಸೀಡ್ - 100 g
ಗಸಗಸೆ - 2 ಚಮಚ
ಪಿಸ್ತಾ - 50 g

ಮಾಡುವ ವಿಧಾನ :
ಬಾದಾಮಿಯನ್ನು ಸ್ವಲ್ಪ ಹುರಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
ಗೋಡಂಬಿ, ಪಿಸ್ತಾವನ್ನು ಸಹ ಚಿಚ್ಕದಾಗಿ ಕತ್ತರಿಸಿಕೊಳ್ಳಬೇಕು.
ಗಸಗಸೆಯನ್ನು ಹುರಿದು ಇಟ್ಟುಕೊಳ್ಳಬೇಕು.
ಮೆಲನ್ ಸೀಡ್ ನ್ನು ಸ್ವಲ್ಪ ಬೆಚ್ಚಗೆ ಮಾಡಿ ಇಟ್ಟುಕೊಳ್ಳಬೇಕು.
ಖರ್ಜೂರವನ್ನು ಬೀಜ ತೆಗೆದು ಮಿಕ್ಸಿ ಮಾಡಿ ದಪ್ಪ ತಳದ ಪಾತ್ರೆಗೆ ಹಾಕಬೇಕು.
ಒಲೆಯ ಮೇಲಿಟ್ಟು ಸರಿಯಾಗಿ ಪಾಕ ಬರುವವರೆಗೆ ಕೈಯಾಡಿಸಬೇಕು.
ನಂತರ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಸೇರಿಸಬೇಕು.
ಹುರಿದ ಮೆಲನ್ ಸೀಡ್, ಒಣ ದ್ರಾಕ್ಷಿ ಎಲ್ಲವನ್ನೂ ಸೇರಿಸಿ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಬೇಕು.
ಮಿಶ್ರಣ ತಣ್ಣಗಾದ ನಂತರ ಉಂಡೆ ಮಾಡಬೇಕು.
ಹುರಿದ ಗಸಗಸೆಯ ಮೇಲೆ ಹೊರಳಾಡಿಸಿದರೆ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಲಡ್ಡು ರೆಡಿ.

(ವಾಲ್ ನಟ್ ಕೂಡ ಬಳಸಬಹುದು. ನಾನು ಬಳಸಿಲ್ಲ.)

ವೇದಾವತಿ ಭಟ್ಟ
ಮುಂಬೈ