ಭಾನುವಾರ, ಜುಲೈ 16, 2023

ಹರಿವೆ ಸೊಪ್ಪಿನ ಬಜೆ ( ದಂಟಿನ ಸೊಪ್ಪು)


ಬೇಕಾಗುವ ಸಾಮಗ್ರಿ :
ಹರಿವೆ ಸೊಪ್ಪು -  25 ರಿಂದ 30
ಕಡಲೆ ಹಿಟ್ಟು -   ಒಂದು ಕಪ್
ಬೆಳ್ಳುಳ್ಳಿ -  6 ರಿಂದ 8 ಎಸಳು
ಜೀರಿಗೆ -  2 ಚಮಚ
ಓಂ ಕಾಳು - 1 ಚಮಚ
ಕೊತ್ತಂಬರಿ ಸೊಪ್ಪು -  ಸ್ವಲ್ಪ
ಕೆಂಪು ಮೆಣಸಿನ ಪುಡಿ - 1 ಚಮಚ ( ಕಾರ ಬೇಕಾದಲ್ಲಿ ಜಾಸ್ತಿ ಹಾಕಿಕೊಳ್ಳಬಹುದು)
ಹಸಿ ಮೆಣಸಿನಕಾಯಿ - 1 ರಿಂದ 2
ಇಂಗು - 1/2  ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
👉 ಮೊದಲು ಮಿಕ್ಸರ್ ಜಾರ್ ಗೆ ಬೆಳ್ಳುಳ್ಳಿ ಎಸಳು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಓಂ ಕಾಳು, ಮೆಣಸಿನ ಪುಡಿ ಮತ್ತು ಇಂಗು ಎಲ್ಲವನ್ನು ಸೇರಿಸಿ ಮಿಕ್ಸಿ ಮಾಡಿಕೊಳ್ಳಬೇಕು.
(ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು)
👉 ನಂತರ ಈ ಮಿಶ್ರಣವನ್ನು ಒಂದು ಬೌಲ್ ಗೆ ಹಾಕಿ ಬೇಕಾದಷ್ಟು ಉಪ್ಪು ಮತ್ತು ಕಡಲೆ ಹಿಟ್ಟನ್ನು ಹಾಕಿ ನೀರು ಸೇರಿಸುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
(ಬೇಕಾದಲ್ಲಿ ಒಂದು ಚಿಟಿಕೆ ಅಡಿಗೆ ಸೋಡವನ್ನು ಸೇರಿಸಬಹುದು.)
👉 ಹರಿವೆ ಸೊಪ್ಪಿನ ಎಲೆಯನ್ನ ಉಪ್ಪಿನ ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ಇಟ್ಟುಕೊಂಡಿರಬೇಕು.
👉 ಒಂದು ಫ್ರೈಯಿಂಗ್ ಪ್ಯಾನಿಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು.
👉 ನಂತರ ಹರಿವೆ ಸೊಪ್ಪನ್ನ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಚೆನ್ನಾಗಿ ಕರಿದು ತೆಗೆಯಬೇಕು.
👉 ಕ್ರಿಸ್ಪಿಯಾದ ರುಚಿಕರವಾದ ಹರಿವೆ ಸೊಪ್ಪಿನ ಬಜೆ ಸಿದ್ಧವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ