ಬುಧವಾರ, ಫೆಬ್ರವರಿ 15, 2023

ಬದನೆಕಾಯಿ ಬಜ್ಜಿ (ಬದನೆ ಕಾಯಿ ಮೊಸರು ಬಜ್ಜಿ/ರಾಯ್ತ)


(ಹವ್ಯಕರ ಸಾಂಪ್ರದಾಯಿಕ ಅಡುಗೆ)

ಬೇಕಾಗುವ ಸಾಮಗ್ರಿ :
ಬದನೆಕಾಯಿ - 2 ರಿಂದ 3 (ಸಣ್ಣದು)
ಈರುಳ್ಳಿ - 1
ಒಣಮೆಣಸು - 2
ಕೊಬ್ಬರಿ ಎಣ್ಣೆ - 2 ಚಮಚ 
ಸಾಸಿವೆ - 1 ಚಮಚ 
ಕಾಯಿತುರಿ - 1/2 ಕಪ್
ಮೊಸರು - 2 ರಿಂದ 3 ಸೌಟು (1/2 ಕಪ್)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬದನೆಕಾಯಿಯನ್ನು ಗ್ಯಾಸ್ ಸ್ಟೋವ್ ನ ಮೇಲೆ ಇಟ್ಟು ಸುಡಬೇಕು.
ತಣ್ಣಗಾದ ನಂತರ ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಬೇಕು. (ಸ್ಮಾಶ್ ಕೂಡ ಮಾಡಬಹುದು)
ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಬೇಕು.
ಕಾಯಿತುರಿ ನುಣ್ಣಗೆ ರುಬ್ಬಿ ಸೇರಿಸಬೇಕು. ಜಾಸ್ತಿ ನೀರು ಸೇರಿಸಬಾರದು. ಸ್ವಲ್ಪ ದಪ್ಪವಾಗಿಯೇ ಇರಲಿ. 
ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೊಸರು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಬೇಕು. 
ಇದಕ್ಕೆ ಸಾಸಿವೆ ಕಾಳು ಹಾಗೂ ಒಣ ಮೆಣಸಿನ ಒಗ್ಗರಣೆ ಕೊಬ್ಬರಿ ಎಣ್ಣೆಯಲ್ಲಿ ಕೊಡಬೇಕು.
ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್.

(ಬೇಕಾದರೆ ಕೊತ್ತಂಬರಿ ಸೊಪ್ಪು ಹೆಚ್ಚಿ ಸೇರಿಸಬಹುದು. ನಾನು ಹಾಕಿಲ್ಲ. ಸಾಂಪ್ರದಾಯಿಕ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸುವುದಿಲ್ಲ.) 

ವೇದಾವತಿ ಭಟ್ಟ 
ಮುಂಬೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ