ಬುಧವಾರ, ಫೆಬ್ರವರಿ 15, 2023

ವೆಜ್ ಕಟ್ಲೆಟ್



ಬೇಕಾಗುವ ಸಾಮಗ್ರಿ :
ಹಸಿರು ಬಟಾಣಿ - 1 ಕಪ್
ಆಲೂಗಡ್ಡೆ - 2 (ದೊಡ್ಡದು)
ಕ್ಯಾರೆಟ್ - 2 ರಿಂದ 3
ಬೀಟ್ರೂಟ್ - 2
ಬೆಳ್ಳುಳ್ಳಿ - 5/6
ಶುಂಠಿ - 1/2 ಇಂಚು
ಹಸಿ ಮೆಣಸಿನ ಕಾಯಿ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಬ್ರೆಡ್ ಪೌಡರ್ - 1 ಕಪ್
ರವಾ - 1/2 ಕಪ್
ಎಣ್ಣೆ - 2 ಚಮಚ
ಅರಿಶಿಣ - 1 ಚಿಟಿಕೆ
ಸಾಸಿವೆ - 1 ಚಮಚ
ಗರಂ ಮಸಾಲ - 1 ಚಮಚ
ಕಡಲೆ ಹಿಟ್ಟು - 1/4 ಕಪ್

ಮಾಡುವ ವಿಧಾನ :
ಬಟಾಣಿ ಮತ್ತು ಆಲೂಗಡ್ಡೆಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬೇಕು.
ಕ್ಯಾರೆಟ್ ಮತ್ತು ಬೀಟ್ರೂಟ್ ನ್ನು ತುರಿದಿಟ್ಟುಕೊಳ್ಳಬೇಕು.
ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಳ್ಳಬೇಕು.
ರವಾವನ್ನು ಹುರಿದುಕೊಳ್ಳಬೇಕು.
ಒಂದು ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಸಾಸಿವೆ ಮತ್ತು ಅರಿಶಿಣ ಸೇರಿಸಿ ಕೈಯಾಡಿಸಬೇಕು.
ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಬೇಕು.
ನಂತರ ತುರಿದ ಮತ್ತು ಬೇಯಿಸಿದ ತರಕಾರಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಬೇಕು.
ಕೊನೆಯಲ್ಲಿ ಗರಂ ಮಸಾಲ ಮತ್ತು ಬ್ರೆಡ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಬೇಕು.
ಕಡಲೆ ಹಿಟ್ಟಿಗೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ತೆಳುವಾದ ಮಿಶ್ರಣ ಮಾಡಬೇಕು.
ನಂತರ ಈ ಮಿಶ್ರಣಕ್ಕೆ ಬೇಕಾದ ಆಕಾರ ಕೊಟ್ಟು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ರವಾದಲ್ಲಿ ಹೊರಳಿಸಿ ಡೀಪ್ ಫ್ರೈ ಅಥವಾ ಶಾಲೋ ಫ್ರೈ ಮಾಡಿದರೆ ವೆಜ್ ಕಟ್ಲೆಟ್ ರೆಡಿ.

(ನಾನು ಮೈದಾನ ಬದಲು ಕಡಲೆ ಹಿಟ್ಟಿನ ಮಿಶ್ರಣ ಮಾಡಿದ್ದೇನೆ.)

ಕಟ್ಲೆಟ್ ಜೊತೆಗೆ ಕೆಂಪು ಚಟ್ನಿ ಮತ್ತು ಗ್ರೀನ್ ಚಟ್ನಿ

ವೇದಾವತಿ ಭಟ್ಟ
ಮುಂಬೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ