ಶುಕ್ರವಾರ, ಜುಲೈ 9, 2021

ಮಾಡ ಹಾಗಿಲು ಕಾಯಿ (Spiny Gourd) ಪಲ್ಯ




ಕಂಟೋಳ

ಬಹಳ ಸರಳವಾದ ರೆಸಿಪಿ ಇದು. ಯಾವುದೇ ಮಸಾಲೆಯನ್ನು ಬಳಸದೆ ಮಾಡಿದ್ದೇನೆ. ಮಹಾರಾಷ್ಟ್ರದಲ್ಲಿ ಕಂಟೋಳ ಎಂದು ಹೇಳುತ್ತಾರೆ. ಈ ಮಳೆಗಾಲದ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಸಾಮಾನ್ಯ ನೆಗಡಿ-ಶೀತ ಬರುವುದಿಲ್ಲ ಎಂದು ಹೇಳುತ್ತಾರೆ.

ಬೇಕಾಗುವ ಸಾಮಗ್ರಿ :
ಮಾಡ ಹಾಗಿಲು ಕಾಯಿ - 20/25
ಕಾಯಿತುರಿ - 1/2 ಕಪ್
ಈರುಳ್ಳಿ - 1
ಕೊಬ್ಬರಿ ಎಣ್ಣೆ - 4 ಚಮಚ
ಸಾಸಿವೆ ಕಾಳು - 1/2 ಚಮಚ
ಅರಿಶಿಣ - 1 ಚಿಟಿಕೆ
ಇಂಗು - 1 ಚಿಟಿಕೆ
ಹಸಿಮೆಣಸಿನಕಾಯಿ - 1
ಹುಳಿಪುಡಿ - 1/2 ಚಮಚ
(ಹುಣಸೆ ರಸ ಅಥವಾ ಆಮ್ಚೂರ್ ಬಳಸಬಹುದು)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮಾಡ ಹಾಗಿಲು ಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಅರಿಶಿಣ, ಸಾಸಿವೆ ಕಾಳು, ಹಸಿ ಮೆಣಸಿನ ಕಾಯಿ ಹಾಕಿ ಸಾಸಿವೆ ಸಿಡಿಸಬೇಕು.
ನಂತರ ಹೆಚ್ಚಿದ ಮಾಡ ಹಾಗಿಲು ಕಾಯಿ ಹೋಳನ್ನು ಹಾಕಿ ಹುರಿಯಬೇಕು. ಉಪ್ಪು ಮತ್ತು ಹುಳಿ ಪುಡಿ ಸೇರಿಸಿ ಮತ್ತೂ ಸ್ವಲ್ಪ ಹುರಿಯಬೇಕು.
ನಂತರ ಕಾಯಿತುರಿ ಸೇರಿಸಿ ಸ್ವಲ್ಪ ಸಮಯದ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಹುರಿಯಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ