ಗುರುವಾರ, ಜುಲೈ 15, 2021

ನೆಲ ನೆಲ್ಲಿ ತಂಬುಳಿ (Phyllanthus Niruri)



ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾದ ಸಸ್ಯ. ಕಾಮಾಲೆ, ಬೇಧಿ ಇವುಗಳಿಗೆ ಔಷಧವಾಗಿ ಬಳಕೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ :
ನೆಲನೆಲ್ಲಿ ಸೊಪ್ಪು - ಒಂದು ಮುಷ್ಟಿ
ಜೀರಿಗೆ - 1 ಚಮಚ
ಕಾಳು ಮೆಣಸು - 1/2 ಚಮಚ
ಮಜ್ಜಿಗೆ - 1 ಕಪ್
ಕಾಯಿತುರಿ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಕೊಬ್ಬರಿ ಎಣ್ಣೆ - 3 ಚಮಚ
ಸಾಸಿವೆ ಕಾಳು - 1/2 ಚಮಚ

ಮಾಡುವ ವಿಧಾನ :
ತೊಳೆದು ಸ್ವಚ್ಛಗೊಳಿಸಿದ ನೆಲನೆಲ್ಲಿ ಸೊಪ್ಪನ್ನು 2 ಚಮಚ ಕೊಬ್ಬರಿ ಎಣ್ಣೆ ಹುರಿಯಬೇಕು.
ಸ್ವಲ್ಪ ಹುರಿದ ನಂತರ ಕಾಳಮೆಣಸು ಹಾಕಿ ಹುರಿದು ಕೊನೆಯಲ್ಲಿ ಜೀರಿಗೆ ಹಾಕಿ ಹುರಿಯಬೇಕು.
ನಂತರ ಕಾಯಿತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಬೇಕು.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಬೇಕು.
ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಸೇರಿಸಿದರೆ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ