ಮಂಗಳವಾರ, ಜುಲೈ 13, 2021

ತೊಂಡೆ ಕಾಯಿ-ಕಾಜು ಮಸಾಲ



ಬೇಕಾಗುವ ಸಾಮಗ್ರಿ :
ತೊಂಡೆಕಾಯಿ - 1/4 ಕೆ.ಜಿ
ಗೋಡಂಬಿ - 1/2 ಕಪ್
ಟೊಮಾಟೊ - 3
ಈರುಳ್ಳಿ - 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಜೀರಿಗೆ - 1 ಚಮಚ
ಅರಿಶಿಣ - 1 ಚಿಟಿಕೆ
ಗರಂ ಮಸಾಲ - 1/2 ಚಮಚ
ಮೆಣಸಿನ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಚಕ್ಕೆ - 1/4 ಇಂಚು
ಪಲಾವ್ ಎಲೆ - 1
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 6 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಸೂರಿ ಮೇಥಿ - ಸ್ವಲ್ಪ
ಸಕ್ಕರೆ - 1/4 ಚಮಚ

ಮಾಡುವ ವಿಧಾನ :
🍇 ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಹುರಿದುಕೊಳ್ಳಬೇಕು.
🍇 ಗೋಲಾಕಾರವಾಗಿ ಹೆಚ್ಚಿದ ತೊಂಡೆಕಾಯಿ ಹೋಳುಗಳನ್ನು 2 ಚಮಚ ಎಣ್ಣೆ ಹಾಕಿ ಹುರಿದು ಪಕ್ಕಕ್ಕೆ ಇಡಬೇಕು.
🍇 ಮತ್ತೆ ಅದೇ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಬಾಡಿಸಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಬೇಕು.
🍇 ಸಣ್ಣಗೆ ಹೆಚ್ಚಿದ ಟೊಮಾಟೊ ಹೋಳುಗಳನ್ನೂ ಸೇರಿಸಿ ಚೆನ್ನಾಗಿ ಬಾಡಿಸಿ ತಣಿಯಲು ಬಿಡಬೇಕು.
🍇 ತಣ್ಣಗಾದ ನಂತರ ಈ ಮಿಶ್ರಣಕ್ಕೆ 5/6 ಗೋಡಂಬಿ ಸೇರಿಸಿ ರುಬ್ಬಿಕೊಳ್ಳಬೇಕು.
🍇 ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಚಕ್ಕೆ ಮತ್ತು ಪಲಾವ್ ಎಲೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಬೇಕು. ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಬೇಕು.
🍇 ಹುರಿದ ಗೋಡಂಬಿ ಮತ್ತು ತೊಂಡೆಕಾಯಿ ಸೇರಿಸಬೇಕು.
🍇 ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
🍇 ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲ ಪುಡಿ ಸೇರಿಸಿ ಕುದಿಸಬೇಕು.
🍇 1 ಚಮಚ ಕ್ರೀಮ್ ಸೇರಿಸಬೇಕು.
🍇 ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಮತ್ತು ಸಕ್ಕರೆ ಸೇರಿಸಬೇಕು.
🍇 ಚಪಾತಿ ಅಥವಾ ರೊಟ್ಟಿ ಜೊತೆಗೆ ಸವಿಯಲು ತೊಂಡೆಕಾಯಿ-ಕಾಜು ಮಸಾಲ ಸಿದ್ಧವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ