ಗುರುವಾರ, ಜುಲೈ 15, 2021

ನೆಲ ನೆಲ್ಲಿ ತಂಬುಳಿ (Phyllanthus Niruri)



ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾದ ಸಸ್ಯ. ಕಾಮಾಲೆ, ಬೇಧಿ ಇವುಗಳಿಗೆ ಔಷಧವಾಗಿ ಬಳಕೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ :
ನೆಲನೆಲ್ಲಿ ಸೊಪ್ಪು - ಒಂದು ಮುಷ್ಟಿ
ಜೀರಿಗೆ - 1 ಚಮಚ
ಕಾಳು ಮೆಣಸು - 1/2 ಚಮಚ
ಮಜ್ಜಿಗೆ - 1 ಕಪ್
ಕಾಯಿತುರಿ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಕೊಬ್ಬರಿ ಎಣ್ಣೆ - 3 ಚಮಚ
ಸಾಸಿವೆ ಕಾಳು - 1/2 ಚಮಚ

ಮಾಡುವ ವಿಧಾನ :
ತೊಳೆದು ಸ್ವಚ್ಛಗೊಳಿಸಿದ ನೆಲನೆಲ್ಲಿ ಸೊಪ್ಪನ್ನು 2 ಚಮಚ ಕೊಬ್ಬರಿ ಎಣ್ಣೆ ಹುರಿಯಬೇಕು.
ಸ್ವಲ್ಪ ಹುರಿದ ನಂತರ ಕಾಳಮೆಣಸು ಹಾಕಿ ಹುರಿದು ಕೊನೆಯಲ್ಲಿ ಜೀರಿಗೆ ಹಾಕಿ ಹುರಿಯಬೇಕು.
ನಂತರ ಕಾಯಿತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಬೇಕು.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಬೇಕು.
ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಸೇರಿಸಿದರೆ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಮಂಗಳವಾರ, ಜುಲೈ 13, 2021

ತೊಂಡೆ ಕಾಯಿ-ಕಾಜು ಮಸಾಲ



ಬೇಕಾಗುವ ಸಾಮಗ್ರಿ :
ತೊಂಡೆಕಾಯಿ - 1/4 ಕೆ.ಜಿ
ಗೋಡಂಬಿ - 1/2 ಕಪ್
ಟೊಮಾಟೊ - 3
ಈರುಳ್ಳಿ - 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಜೀರಿಗೆ - 1 ಚಮಚ
ಅರಿಶಿಣ - 1 ಚಿಟಿಕೆ
ಗರಂ ಮಸಾಲ - 1/2 ಚಮಚ
ಮೆಣಸಿನ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಚಕ್ಕೆ - 1/4 ಇಂಚು
ಪಲಾವ್ ಎಲೆ - 1
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 6 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಸೂರಿ ಮೇಥಿ - ಸ್ವಲ್ಪ
ಸಕ್ಕರೆ - 1/4 ಚಮಚ

ಮಾಡುವ ವಿಧಾನ :
🍇 ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಹುರಿದುಕೊಳ್ಳಬೇಕು.
🍇 ಗೋಲಾಕಾರವಾಗಿ ಹೆಚ್ಚಿದ ತೊಂಡೆಕಾಯಿ ಹೋಳುಗಳನ್ನು 2 ಚಮಚ ಎಣ್ಣೆ ಹಾಕಿ ಹುರಿದು ಪಕ್ಕಕ್ಕೆ ಇಡಬೇಕು.
🍇 ಮತ್ತೆ ಅದೇ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಬಾಡಿಸಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಬೇಕು.
🍇 ಸಣ್ಣಗೆ ಹೆಚ್ಚಿದ ಟೊಮಾಟೊ ಹೋಳುಗಳನ್ನೂ ಸೇರಿಸಿ ಚೆನ್ನಾಗಿ ಬಾಡಿಸಿ ತಣಿಯಲು ಬಿಡಬೇಕು.
🍇 ತಣ್ಣಗಾದ ನಂತರ ಈ ಮಿಶ್ರಣಕ್ಕೆ 5/6 ಗೋಡಂಬಿ ಸೇರಿಸಿ ರುಬ್ಬಿಕೊಳ್ಳಬೇಕು.
🍇 ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಚಕ್ಕೆ ಮತ್ತು ಪಲಾವ್ ಎಲೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಬೇಕು. ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಬೇಕು.
🍇 ಹುರಿದ ಗೋಡಂಬಿ ಮತ್ತು ತೊಂಡೆಕಾಯಿ ಸೇರಿಸಬೇಕು.
🍇 ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
🍇 ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲ ಪುಡಿ ಸೇರಿಸಿ ಕುದಿಸಬೇಕು.
🍇 1 ಚಮಚ ಕ್ರೀಮ್ ಸೇರಿಸಬೇಕು.
🍇 ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಮತ್ತು ಸಕ್ಕರೆ ಸೇರಿಸಬೇಕು.
🍇 ಚಪಾತಿ ಅಥವಾ ರೊಟ್ಟಿ ಜೊತೆಗೆ ಸವಿಯಲು ತೊಂಡೆಕಾಯಿ-ಕಾಜು ಮಸಾಲ ಸಿದ್ಧವಾಯಿತು.

ಡೋಕ್ಲ

ಡೋಕ್ಲ

ಇದು ಗುಜರಾತಿನ ಪ್ರಸಿದ್ಧ ತಿನಿಸು. ಕಡಲೆ ಹಿಟ್ಟಿನಿಂದ ಬಗೆಬಗೆಯ ಖಾದ್ಯ ತಯಾರಿಸುವುದು ಅವರ ವಿಶೇಷತೆ ಎನ್ನಬಹುದು.

ಬೇಕಾಗುವ ಸಾಮಗ್ರಿ :
ಕಡಲೆ ಹಿಟ್ಟು - 1.5 ಕಪ್
ಚಿರೋಟಿ ರವಾ - 3 ಚಮಚ
ನೀರು - 1 ಕಪ್
ಉಪ್ಪು - 3/4 ಚಮಚ
ನಿಂಬೆ ರಸ - 1 ಚಮಚ
ಸಕ್ಕರೆ - 1 ಚಮಚ
ಎಣ್ಣೆ - 1 ಚಮಚ
ಅರಿಶಿಣ - 1 ಚಿಟಿಕೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಹಸಿಮೆಣಸಿನ ಕಾಯಿ - 1
ಏನೋ - 1 ಚಮಚ

ಒಗ್ಗರಣೆಗೆ :
ಎಣ್ಣೆ - 1 ಚಮಚ
ನೀರು - 1/2 ಕಪ್
ನಿಂಬೆ ರಸ - 1 ಚಮಚ
ಜೀರಿಗೆ - 1/2 ಚಮಚ
ಎಳ್ಳು - 1/2 ಚಮಚ
ಸಾಸಿವೆ - 1/2 ಚಮಚ
ಉಪ್ಪು - 1/4 ಚಮಚ
ಸಕ್ಕರೆ - 1ಚಮಚ
ಕರಿಬೇವು - 7/8 ಎಲೆ

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಚಿರೋಟಿ ರವಾ, ಉಪ್ಪು, ಸಕ್ಕರೆ, ಅರಿಶಿಣ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಿಸಬೇಕು.
ಒಂದೇ ಬದಿಯಿಂದ ಚೆನ್ನಾಗಿ ಕಲಿಸಬೇಕು.
20 ನಿಮಿಷ ಹಾಗೆಯೇ ಬಿಡಬೇಕು.
ನಂತರ ಒಂದು ಚಮಚ ಏನೋ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಿಸಬೇಕು.
ಎಣ್ಣೆ ಸವರಿದ ಪಾತ್ರೆಗೆ ಹಾಕಿ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಬೇಕು.

ತಣ್ಣಗಾದ ಮೇಲೆ ಕತ್ತರಿಸಿ ಒಗ್ಗರಣೆ ಮೇಲೆ ಹಾಕಿ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.


ಸೋಮವಾರ, ಜುಲೈ 12, 2021

ಮುದ್ದೆ ಕಡಬು (ಕಾಯಿ ಕಡಬು)


ತೊಂಡೆಕಾಯಿ ಥೀಮ್ ನಲ್ಲಿ ಟಾಪ್ ಸ್ಥಾನ ಪಡೆದ ಖುಷಿಗೆ ನಮ್ಮ ಸಾಂಪ್ರದಾಯಿಕ ಸಿಹಿಯೊಂದಿಗೆ ಬಂದಿದ್ದೇನೆ. ಅಡುಗೆ ಅರಮನೆಯ ಅಡ್ಮಿನ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಹಾಗೂ ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು.

ಸಾಂಪ್ರದಾಯಿಕ ಸಿಹಿ ತಿಂಡಿ - ನಮ್ಮ ಮಲೆನಾಡಿನಲ್ಲಿ ಬಹಳ ಪ್ರಸಿದ್ಧವಾದ ಕಡಬು ಇದು. ಅಕ್ಕಿ, ಕಾಯಿ ಮತ್ತು ಬೆಲ್ಲದಿಂದ ಬಗೆ ಬಗೆಯ ತಿಂಡಿ ತಯಾರಿಸುವುದು ನಮ್ಮಲ್ಲಿಯ ವಿಶೇಷ. ಕೆಲವು ಹಬ್ಬದಲ್ಲಿಯೂ ದೇವರ ನೈವೇದ್ಯಕ್ಕೆ ಕಡಬು ತಯಾರಿಸುವ ಸಂಪ್ರದಾಯವಿದೆ.

ಬೇಕಾಗುವ ಸಾಮಗ್ರಿ :
ಅಕ್ಕಿ - 1 ಕಪ್
ಬೆಲ್ಲ - 1/4 ಕಪ್ + 1/4 ಕಪ್
ಏಲಕ್ಕಿ - 2
ಕಾಯಿತುರಿ - 1 ಕಪ್
ಉಪ್ಪು - 1/2 ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ಕನಿಷ್ಠ 6 ಗಂಟೆ ನೆನೆಸಿ (ಜಾಸ್ತಿ ನೆನಸಬಹುದು) ಚೆನ್ನಾಗಿ ತೊಳೆದು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣಕ್ಕೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತಲೂ ತೆಳ್ಳಗೆ ಕರಡಿಕೊಳ್ಳಬೇಕು.
ಈ ಮಿಶ್ರಣಕ್ಕೆ 1/4 ಕಪ್ ಬೆಲ್ಲ, ಉಪ್ಪು ಸೇರಿಸಿ ಸರಿಯಾಗಿ ಕೈಯಾಡಿಸಬೇಕು.
ಸಣ್ಣ ಉರಿಯಲ್ಲಿ ಹಿಟ್ಟನ್ನು ಕೈಯಾಡಿಸುತ್ತಾ ಉಂಡೆ ಕಟ್ಟುವ ಹದಕ್ಕೆ ತರಬೇಕು.
(ತಳ ಬಿಡುವವರೆಗೆ ಮಗಚುತ್ತಿರಬೇಕು)
ಇದನ್ನು ತಣ್ಣಗಾಗಲು ಬಿಡಬೇಕು.
ಅಲ್ಲಿಯವರೆಗೆ ಕಾಯಿತುರಿಗೆ ಬೆಲ್ಲ ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
ತಣ್ಣಗಾದ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಅದರೊಳಗೆ ಕಾಯಿತುರಿಯ ಮಿಶ್ರಣ ಸೇರಿಸಿ ಉಂಡೆ ಮಾಡಬೇಕು.
ಈ ಉಂಡೆಯನ್ನು ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಬೇಕು. (ಇಡ್ಲಿ ಬೇಯಿಸಿದಂತೆಯೇ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಉಗಿಯಲ್ಲಿ ಬೇಯಿಸಬೇಕು)
ತುಪ್ಪದ ಜೊತೆ ತಿನ್ನಲು ರುಚಿಯಾಗಿರುತ್ತದೆ.

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಜುಲೈ 9, 2021

ಮಾಡ ಹಾಗಿಲು ಕಾಯಿ (Spiny Gourd) ಪಲ್ಯ




ಕಂಟೋಳ

ಬಹಳ ಸರಳವಾದ ರೆಸಿಪಿ ಇದು. ಯಾವುದೇ ಮಸಾಲೆಯನ್ನು ಬಳಸದೆ ಮಾಡಿದ್ದೇನೆ. ಮಹಾರಾಷ್ಟ್ರದಲ್ಲಿ ಕಂಟೋಳ ಎಂದು ಹೇಳುತ್ತಾರೆ. ಈ ಮಳೆಗಾಲದ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಸಾಮಾನ್ಯ ನೆಗಡಿ-ಶೀತ ಬರುವುದಿಲ್ಲ ಎಂದು ಹೇಳುತ್ತಾರೆ.

ಬೇಕಾಗುವ ಸಾಮಗ್ರಿ :
ಮಾಡ ಹಾಗಿಲು ಕಾಯಿ - 20/25
ಕಾಯಿತುರಿ - 1/2 ಕಪ್
ಈರುಳ್ಳಿ - 1
ಕೊಬ್ಬರಿ ಎಣ್ಣೆ - 4 ಚಮಚ
ಸಾಸಿವೆ ಕಾಳು - 1/2 ಚಮಚ
ಅರಿಶಿಣ - 1 ಚಿಟಿಕೆ
ಇಂಗು - 1 ಚಿಟಿಕೆ
ಹಸಿಮೆಣಸಿನಕಾಯಿ - 1
ಹುಳಿಪುಡಿ - 1/2 ಚಮಚ
(ಹುಣಸೆ ರಸ ಅಥವಾ ಆಮ್ಚೂರ್ ಬಳಸಬಹುದು)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮಾಡ ಹಾಗಿಲು ಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಅರಿಶಿಣ, ಸಾಸಿವೆ ಕಾಳು, ಹಸಿ ಮೆಣಸಿನ ಕಾಯಿ ಹಾಕಿ ಸಾಸಿವೆ ಸಿಡಿಸಬೇಕು.
ನಂತರ ಹೆಚ್ಚಿದ ಮಾಡ ಹಾಗಿಲು ಕಾಯಿ ಹೋಳನ್ನು ಹಾಕಿ ಹುರಿಯಬೇಕು. ಉಪ್ಪು ಮತ್ತು ಹುಳಿ ಪುಡಿ ಸೇರಿಸಿ ಮತ್ತೂ ಸ್ವಲ್ಪ ಹುರಿಯಬೇಕು.
ನಂತರ ಕಾಯಿತುರಿ ಸೇರಿಸಿ ಸ್ವಲ್ಪ ಸಮಯದ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಹುರಿಯಬೇಕು.

ಬುಧವಾರ, ಜುಲೈ 7, 2021

ಬನಾರಸಿ ಟೊಮಾಟೊ ಚಟ್ನಿ



ಬೇಕಾಗುವ ಸಾಮಗ್ರಿ :
ಟೊಮಾಟೊ - 2 ರಿಂದ 3
ಆಲೂಗಡ್ಡೆ - 1
ಚಾಟ್ ಮಸಾಲ - 1/2 ಚಮಚ
ಗರಂ ಮಸಾಲ - 1 ಚಮಚ
ಮೆಣಸಿನ ಪುಡಿ - 1 ಚಮಚ
ತುಪ್ಪ - 2 ರಿಂದ 3 ಚಮಚ
ಗೋಡಂಬಿ ಚೂರು - 3 ಚಮಚ
ಜೀರಿಗೆ ಪುಡಿ - 1/2 ಚಮಚ
ಕೊತ್ತಂಬರಿ ಪುಡಿ - 1/2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಪುದೀನಾ ಸೊಪ್ಪು - ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 2 ಚಮಚ
ನೀರು - ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ :

ಬಾಣಲೆಯಲ್ಲಿ ತುಪ್ಪ ಹಾಕಿ ಗೊಡಂಬಿ ಚೂರುಗಳನ್ನು ಹುರಿಯಬೇಕು.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮಾಟೊ ಸಣ್ಣಗೆ ಹೆಚ್ಚಿ ಸೇರಿಸಿ ಕೈಯಾಡಿಸಬೇಕು.
ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ ಸೇರಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ಹಾಕಿ ಕುದಿಸಬೇಕು.
ಇದಕ್ಕೆ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲ, ಗರಂ ಮಸಾಲ ಸೇರಿಸಿ ಬೆಲ್ಲ ಸೇರಿಸಿ ಕುದಿಸಬೇಕು.
ನೀರು ಬೇಕಾದರೆ ಸೇರಿಸಿ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಸೇರಿಸಿ ಕುದಿಸಬೇಕು.

ಅಕ್ಕಿ ಕಡಿ (ಅಕ್ಕಿ ರವೆ) ಉಪ್ಪಿಟ್ಟು


ಬೇಕಾಗುವ ಸಾಮಗ್ರಿ :
ಅಕ್ಕಿ ಕಡಿ - 1 ಲೋಟ
ನೀರು - 4 ಲೋಟ
ಕ್ಯಾರೆಟ್ - 1
ಹಸಿಮೆಣಸಿನ ಕಾಯಿ - 1
ಕಾಯಿತುರಿ - 1/2 ಲೋಟ
ಶುಂಠಿ - 1/2 ಇಂಚು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಟೀ ಚಮಚ
ಅರಿಶಿಣ - 1 ಚಿಟಿಕೆ
ಸಕ್ಕರೆ - 1 ಚಮಚ

ಮಾಡುವ ವಿಧಾನ :

ಮೊದಲು ಅಕ್ಕಿ ಕಡಿಯನ್ನು ತೊಳೆದು ಹುರಿದು ಪಕ್ಕಕ್ಕೆ ಇಟ್ಟು ಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅರಿಶಿಣ, ಸಾಸಿವೆ ಕಾಳು, ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಕೈಯಾಡಿಸಬೇಕು.
ಜಜ್ಜಿದ ಶುಂಠಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕ್ಯಾರೆಟ್, ಕಾಯಿತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ 2 ಲೋಟ ನೀರು ಹಾಕಿ ಬೇಯಿಸಬೇಕು.
ನಂತರ ಹುರಿದಿಟ್ಟ ಅಕ್ಕಿ ಕಡಿ ಮತ್ತೆ ಎರಡು ಲೋಟ ನೀರು ಮತ್ತು ಸಕ್ಕರೆ ಸೇರಿಸಿ ನೀರು ಆರುವವವರೆಗೆ ಕೈಯಾಡಿಸದರೆ ಉಪ್ಪಿಟ್ಟು ಸಿದ್ಧವಾಯಿತು. 

ಆಪಲ್ ಕೇಕ್



ಬೇಕಾಗುವ ಸಾಮಗ್ರಿ :
ಬ್ರೆಡ್ ಪುಡಿ - 1 ಕಪ್
ಕೊಕೊ ಪೌಡರ್ - 1 ಚಮಚ
ಹಾಲಿನ ಪುಡಿ - 2 ಚಮಚ
ಸಕ್ಕರೆ ಪುಡಿ - 1/4 ಕಪ್
ನೀರು - 1/2 ಕಪ್
ತುಪ್ಪ - 1 ಚಮಚ
ಡೆಸಿಕೆಟೆಡ್ ಕೊಕೊನಟ್ - 1 ಕಪ್

ಮಾಡುವ ವಿಧಾನ :
ಮೊದಲು ಬಾಣಲೆಯಲ್ಲಿ ಸಕ್ಕರೆ ಪುಡಿ ಮತ್ತು ನೀರು ಹಾಕಿ ಎಳೆಯ ಪಾಕ ಮಾಡಿಕೊಳ್ಳಬೇಕು.
ಇದಕ್ಕೆ ಕೊಕೊ ಪೌಡರ್, ಹಾಲಿನ ಪುಡಿ ಹಾಕಿ ಕೈಯಾಡಿಸಬೇಕು.
ನಂತರ ಡೆಸಿಕೆಟೆಡ್ ಕೊಕೊನಟ್, ಬ್ರೆಡ್ ಪುಡಿ ಹಾಕಿ ತುಪ್ಪ ಹಾಕಿ ತಳ ಬಿಡುವವರೆಗೆ ಕೈಯಾಡಿಸಬೇಕು.
ಒಲೆ ಆರಿಸಿ ತಣ್ಣಗಾದ ಮೇಲೆ ಉಂಡೆ ಮಾಡಿ ಉಳಿದ ಡೆಸಿಕೆಟೆಡ್ ಕೊಕೊನಟ್ ನಲ್ಲಿ ಹೊರಳಿಸಬೇಕು.

ಮಾವಿನ ಹಣ್ಣಿನ ನೀರ್ಗೊಜ್ಜು




ಬೇಕಾಗುವ ಸಾಮಗ್ರಿ :
ಮಾವಿನ ಹಣ್ಣು - 5 ರಿಂದ 6
(ಹುಳಿ ಇರುವ ಮಾವಿನ ಹಣ್ಣಾದರೆ ಒಳ್ಳೆಯದು)
ಬೆಳ್ಳುಳ್ಳಿ - 7/8 ಎಸಳು
ಕೊಬ್ಬರಿ ಎಣ್ಣೆ - 3 ಚಮಚ
ಸಾಸಿವೆ ಕಾಳು - 1 ಚಮಚ
ಒಣಮೆಣಸಿನಕಾಯಿ - 3 ರಿಂದ 4
ಬೆಲ್ಲ - 1 ಸೌಟು
(ಹುಳಿ ಇದ್ದರೆ ಜಾಸ್ತಿ ಬಳಸಬಹುದು)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಬೇಕು.
ಇದಕ್ಕೆ ಉಪ್ಪು ಮತ್ತು ಬೆಲ್ಲ ಸೇರಿಸಿ ಕಿವುಚಿಕೊಳ್ಳಬೇಕು.
(ಸ್ವಲ್ಪ ನೀರನ್ನು ಸೇರಿಸಬಹುದು)
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣಮೆಣಸಿನಕಾಯಿ ಮತ್ತು ಸಾಸಿವೆ ಕಾಳು ಹಾಕಬೇಕು.
ಸಾಸಿವೆ ಹಿಡಿದ ನಂತರ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಹುರಿಯಬೇಕು. ಸ್ವಲ್ಪ ತಣಿಯಲು ಬಿಡಬೇಕು.
ನಂತರ ಮೊದಲು ಸಿದ್ಧಪಡಿಸಿದ ಮಿಶ್ರಣಕ್ಕೆ ಒಗ್ಗರಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.

(ಉಪ್ಪು ಅಥವಾ ಬೆಲ್ಲ ಇಲ್ಲವೇ ನೀರು ಬೇಕಾದಲ್ಲಿ ಸೇರಿಸಬಹುದು)

ಸಾಂಬಾರ ಸೊಪ್ಪಿನ (ದೊಡ್ಡ ಪತ್ರೆ ಸೊಪ್ಪು) ತಂಬುಳಿ(Maxican mint)


ಈ ಸೊಪ್ಪು ನೆಗಡಿಯಂತಹ ಸಮಸ್ಯೆಗೆ ರಾಮಬಾಣ. ಹಾಗೆಯೇ ಆಮ್ಲೀಯತೆ ಅಥವಾ ಪಿತ್ತ ಹೆಚ್ಚಾದಾಗ ಇದನ್ನು ಮಜ್ಜಿಗೆಯ ಜೊತೆಗೆ ರುಬ್ಬಿಕೊಂಡು ಕಡಿದರೆ ನಿವಾರಣೆಯಾಗುತ್ತದೆ.

ಬೇಕಾಗುವ ಸಾಮಗ್ರಿ :
ಸಾಂಬಾರ ಸೊಪಸೊಪ್ಪು - 10 ರಿಂದ 15
ಕಾಳು ಮೆಣಸು - 8 ರಿಂದ 10
ಸೂಜಿ ಮೆಣಸು - 2
(ಬೇಕಾದರೆ ಮಾತ್ರ ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿತುರಿ - 1/2 ಕಪ್
ಮಜ್ಜಿಗೆ - 1 ಕಪ್
ನೀರು - ಬೇಕಾದಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
🍀 ಸೊಪ್ಪನ್ನು ತೊಳೆದು ಕೊಬ್ಬರಿ ಎಣ್ಣೆಯಲ್ಲಿ ಕಾಳು ಮೆಣಸಿನ ಜೊತೆಗೆ ಹುರಿಯಬೇಕು.
🍀 ಇದಕ್ಕೆ ಕಾಯಿತುರಿ ಮತ್ತು ಸೂಜಿ ಮೆಣಸು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು.
🍀 ರುಬ್ಬಿದ ಮಿಶ್ರಣಕ್ಕೆ ಉಪ್ಪು, ಮಜ್ಜಿಗೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಬೇಕು. ಈಗ ಅನ್ನದ ಜೊತೆಗೆ ತಂಬುಳಿ ಸಿದ್ಧವಾಯಿತು
🍀 ತೆಳವಾಗಿಯೇ ಇದ್ದರೆ ಒಳ್ಳೆಯದು.

ವೇದಾವತಿ ಭಟ್ಟ
ಮುಂಬೈ 

ಎಳ್ಳು ಮತ್ತು ಅಗಸೆ ಬೀಜದ ಉಂಡೆ

ಎಳ್ಳು ಮತ್ತು ಅಗಸೆ ಬೀಜದ ಉಂಡೆ

ಬೇಕಾಗುವ ಸಾಮಗ್ರಿ :
ಎಳ್ಳು (ಬಿಳಿಯದು) - 1 ಕಪ್
ಅಗಸೆ ಬೀಜ - 1/2 ಕಪ್
ಬೆಲ್ಲ - 1 ಕಪ್
ಗೋಡಂಬಿ ಮತ್ತು ಬಾದಾಮಿ - ಸ್ವಲ್ಪ

ಮಾಡುವ ವಿಧಾನ :
ಎಳ್ಳನ್ನು ಮತ್ತು ಅಗಸೆ ಬೀಜವನ್ನು ಬೇರೆ ಬೇರೆಯಾಗಿ ಹುರಿದು ಕೊಳ್ಳಬೇಕು. ತಣಿಯಲು ಬಿಡಬೇಕು.
ನಂತರ ಬೆಲ್ಲಕ್ಕೆ ಎರಡು ಚಮಚ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಬೆಲ್ಲ ಕರಗುತ್ತದೆ. ಉಂಡೆ ಕಟ್ಟುವ ಹದಕ್ಕೆ ಪಾಕ ತರಿಸಿಕೊಳ್ಳಬೇಕು.
ಹುರಿದ ಎಳ್ಳು ಮತ್ತು ಅಗಸೆ ಬೀಜ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಸೇರಿಸಿ ಕೈಯಾಡಿಸಿ ಗ್ಯಾಸ್ ಆರಿಸಬೇಕು.
ಸ್ವಲ್ಪ ತಣ್ಣಗಾದ ನಂತರ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಬೇಕು.

ದಿನವೂ ಒಂದು ಉಂಡೆ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಅಗಸೆ ಬೀಜದ ನಿಯಮಿತವಾದ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ವೇದಾವತಿ ಭಟ್ಟ
ಮುಂಬೈ