ಬುಧವಾರ, ಜೂನ್ 23, 2021

ಎಲವರಿಗೆ ಕಟ್ನೆ

ರೆಸಿಪಿ - 1
ಎಲವರಿಗೆ ಕಟ್ನೆ
ಸಾಂಪ್ರದಾಯಿಕ ಅಡುಗೆ
ಇದು ಮಲೆನಾಡಿನ ಹವ್ಯಕರ ಸಾಂಪ್ರದಾಯಿಕ ಅಡುಗೆ. ಹೆಚ್ಚಾಗಿ ಮಳೆಗಾಲದಲ್ಲಿ ಇದನ್ನು ಮಾಡುತ್ತಾರೆ. ಮಳೆಯಲ್ಲಿ ನೆನೆದಾಗ ಆಗುವ ಶೀತ-ಕೆಮ್ಮಿಗೂ ಇದು ಔಷಧ. ಅಲ್ಲದೇ ಬಿಸಿಯಾದ, ರುಚಿಯಾದ ಈ ಕಟ್ನೆ ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿಕೊಂಡು ಊಟ ಮಾಡಿದರೆ ಅದರ ರುಚಿಯೇ ಬೇರೆ.

ಬೇಕಾಗುವ ಸಾಮಗ್ರಿ :
ಎಲವರಿಗೆ ಸೊಪ್ಪು - 1 ಕಟ್ಟು
ಕಾಯಿ ತುರಿ - 1 ಕಪ್
ಜೀರಿಗೆ - 1 ಟೀ ಚಮಚ
ಕಾಳು ಮೆಣಸು - 1/2 ಚಮಚ
ಸೂಜಿ ಮೆಣಸು - 4 ರಿಂದ 5
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ಸ್ವಲ್ಪ
ಬೆಳ್ಳುಳ್ಳಿ - 7 ರಿಂದ 8 ಎಸಳು
ಸಾಸಿವೆ ಕಾಳು - 1 ಚಮಚ
ಕೊಬ್ಬರಿ ಎಣ್ಣೆ - 4 ರಿಂದ 5 ಚಮಚ

ಮಾಡುವ ವಿಧಾನ :
ಮೊದಲು ಎಲವರಿಗೆ ಸೊಪ್ಪನ್ನು ಬಿಡಿಸಿ ತೊಳೆದುಕೊಳ್ಳಬೇಕು.
2 ಚಮಚ ಎಣ್ಣೆ ಹಾಕಿ ಸೊಪ್ಪನ್ನು ಹುರಿಯಬೇಕು. ಸ್ವಲ್ಪ ಹುರಿದ ಮೇಲೆ ಕಾಳು ಮೆಣಸನ್ನು ಸೇರಿಸಬೇಕು.
ಕೊನೆಯಲ್ಲಿ ಜೀರಿಗೆ ಸೇರಿಸಿ ಕೈಯಾಡಿಸಿ ಕೆಳಗಿಳಿಸಬೇಕು.
ಕಾಯಿತುರಿಯ ಜೊತೆಗೆ ಹುರಿದ ಸೊಪ್ಪು, ಹುಣಸೆ ಹಣ್ಣು ಹಾಗೂ ಸೂಜಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆಕಾಳು ಹಾಕಿ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಹಾಕಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ