ಸೋಮವಾರ, ಜೂನ್ 14, 2021

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

(ಇದು ಮಲೆನಾಡಿನ ಭಾಗವಾದ ಸಾಗರದ ಹವ್ಯಕರ ಸಾಂಪ್ರದಾಯಿಕ ಅಡಿಗೆ)

ಬೇಕಾಗುವ ಸಾಮಗ್ರಿ :
ಮಾವಿನಕಾಯಿ - 1
ಕಾಯಿತುರಿ - 1/2 ಕಪ್
ಮೆಂತ್ಯ - 1/2 ಚಮಚ
ಜೀರಿಗೆ - 1 ಚಮಚ
ಒಣಮೆಣಸಿನಕಾಯಿ - 1 ರಿಂದ 2
ಸೂಜಿಮೆಣಸು/ಹಸಿಮೆಣಸಿನಕಾಯಿ - 3 ರಿಂದ 4
ಉಪ್ಪು - ರುಚಿಗೆ
ಬೆಲ್ಲ - 1 ಸೌಟು
ಬೆಳ್ಳುಳ್ಳಿ - 7/8 ಎಸಳು
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ

ಮಾಡುವ ವಿಧಾನ
ಮಾವಿನಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಮೆಂತ್ಯ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು. ನಂತರ ಒಣಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಹೆಚ್ಚಿದ ಮಾವಿನಕಾಯಿ ಮತ್ತು ಹುರಿದ ಪದಾರ್ಥ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕುದಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು.
ಹುಳಿಸಿಹಿಯಾಗಿ ಅನ್ನದ ಜೊತೆಗೆ ಚೆನ್ನಾಗಿರುತ್ತದೆ.

ಚೆನ್ನಾಗಿ ಕುದಿಸಿದರೆ ವಾರದವರೆಗೂ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ