ಬುಧವಾರ, ಜೂನ್ 30, 2021

ಸಬ್ಬಸಿಕೆ ಸೊಪ್ಪಿನ ಪಲ್ಯ





ಬೇಕಾಗುವ ಸಾಮಗ್ರಿ :
ಸಬ್ಬಸಿಕೆ ಸೊಪ್ಪು - 1 ಕಟ್ಟು
ಹೆಸರು ಬೇಳೆ - 1/4 ಕಪ್
ಮಸೂರ ಬೇಳೆ - 1/4 ಕಪ್
ಮೊಳಕೆ ಹೆಸರು ಕಾಳು - 1/4 ಕಪ್
ಕಾಯಿತುರಿ - 1/4 ಕಪ್
ಹಸಿಮೆಣಸಿನಕಾಯಿ - 1
ಎಣ್ಣೆ - 2 ಚಮಚ
ಸಾಸಿವೆ ಕಾಳು - 1/2 ಚಮಚ
ಅರಿಶಿಣ - 1 ಚಿಟಿಕೆ
ಜೀರಿಗೆ - 1 ಚಮಚ
ಹಿಂಗು - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಹುಳಿಪುಡಿ - 1/2 ಚಮಚc
(ಹುಳಿಗೆ ಹುಣಸೇಹಣ್ಣಿನ ರಸ ಬಳಸಬಹುದು)

ಮಾಡುವ ವಿಧಾನ :
ಮೊದಲು ಮೊಳಕೆ ಹೆಸರು ಕಾಳು ಸಿದ್ಧವಾಗಿಟ್ಟುಕೊಳ್ಳಬೇಕು.
ಹೆಸರು ಮತ್ತು ಮಸೂರ ಬೇಳೆಗಳನ್ನು ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಬೇಕು.
ಸಬ್ಬಸಿಕೆ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅರಿಶಿಣ ಹಾಕಿ ಸಾಸಿವೆ ಕಾಳು ಸಿಡಿಸಿ ಹಸಿಮೆಣಸಿನಕಾಯಿ ಹಾಕಬೇಕು.
ನಂತರ ನೆನೆಸಿದ ಕಾಳು ಮತ್ತು ಬೇಳೆ ಸೇರಿಸಿ ಸ್ವಲ್ಪ ನೀರು ಹಾಕಿ ಉಪ್ಪು ಮತ್ತು ಹುಳಿಪುಡಿ ಸೇರಿಸಬೇಕು.
ಕಾಯಿತುರಿಯನ್ನು ಸೇರಿಸಿ ಬೇಯಿಸಬೇಕು.
ಕೊನೆಯಲ್ಲಿ ಸಬ್ಬಸಿಕೆ ಸೊಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.
ಸೊಪ್ಪು ಬೆಂದ ನಂತರ ಸ್ಟೋವ್ ಆಫ್ ಮಾಡಬೇಕು. ಪಲ್ಯ ಸಿದ್ಧವಾಯಿತು.


ಬುಧವಾರ, ಜೂನ್ 23, 2021

ಎಲವರಿಗೆ ಕಟ್ನೆ

ರೆಸಿಪಿ - 1
ಎಲವರಿಗೆ ಕಟ್ನೆ
ಸಾಂಪ್ರದಾಯಿಕ ಅಡುಗೆ
ಇದು ಮಲೆನಾಡಿನ ಹವ್ಯಕರ ಸಾಂಪ್ರದಾಯಿಕ ಅಡುಗೆ. ಹೆಚ್ಚಾಗಿ ಮಳೆಗಾಲದಲ್ಲಿ ಇದನ್ನು ಮಾಡುತ್ತಾರೆ. ಮಳೆಯಲ್ಲಿ ನೆನೆದಾಗ ಆಗುವ ಶೀತ-ಕೆಮ್ಮಿಗೂ ಇದು ಔಷಧ. ಅಲ್ಲದೇ ಬಿಸಿಯಾದ, ರುಚಿಯಾದ ಈ ಕಟ್ನೆ ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿಕೊಂಡು ಊಟ ಮಾಡಿದರೆ ಅದರ ರುಚಿಯೇ ಬೇರೆ.

ಬೇಕಾಗುವ ಸಾಮಗ್ರಿ :
ಎಲವರಿಗೆ ಸೊಪ್ಪು - 1 ಕಟ್ಟು
ಕಾಯಿ ತುರಿ - 1 ಕಪ್
ಜೀರಿಗೆ - 1 ಟೀ ಚಮಚ
ಕಾಳು ಮೆಣಸು - 1/2 ಚಮಚ
ಸೂಜಿ ಮೆಣಸು - 4 ರಿಂದ 5
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ಸ್ವಲ್ಪ
ಬೆಳ್ಳುಳ್ಳಿ - 7 ರಿಂದ 8 ಎಸಳು
ಸಾಸಿವೆ ಕಾಳು - 1 ಚಮಚ
ಕೊಬ್ಬರಿ ಎಣ್ಣೆ - 4 ರಿಂದ 5 ಚಮಚ

ಮಾಡುವ ವಿಧಾನ :
ಮೊದಲು ಎಲವರಿಗೆ ಸೊಪ್ಪನ್ನು ಬಿಡಿಸಿ ತೊಳೆದುಕೊಳ್ಳಬೇಕು.
2 ಚಮಚ ಎಣ್ಣೆ ಹಾಕಿ ಸೊಪ್ಪನ್ನು ಹುರಿಯಬೇಕು. ಸ್ವಲ್ಪ ಹುರಿದ ಮೇಲೆ ಕಾಳು ಮೆಣಸನ್ನು ಸೇರಿಸಬೇಕು.
ಕೊನೆಯಲ್ಲಿ ಜೀರಿಗೆ ಸೇರಿಸಿ ಕೈಯಾಡಿಸಿ ಕೆಳಗಿಳಿಸಬೇಕು.
ಕಾಯಿತುರಿಯ ಜೊತೆಗೆ ಹುರಿದ ಸೊಪ್ಪು, ಹುಣಸೆ ಹಣ್ಣು ಹಾಗೂ ಸೂಜಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆಕಾಳು ಹಾಕಿ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಹಾಕಬೇಕು.

ಭಾನುವಾರ, ಜೂನ್ 20, 2021

ಬೀಟ್ರೂಟ್ ಚಟ್ನಿ

 
ಬೇಕಾಗುವ ಸಾಮಗ್ರಿ :
ಬೀಟ್ರೂಟ್ - 1
ಕಾಯಿತುರಿ - 1/2 ಕಪ್
ಜೀರಿಗೆ - 1/2 ಚಮಚ
ಉದ್ದಿನಬೇಳೆ - 1 ಚಮಚ
ಒಣಮೆಣಸಿನಕಾಯಿ - 2 ರಿಂದ 3
ಹಸಿಮೆಣಸಿನಕಾಯಿ - 1 (ಬೇಕಾದರೆ)
ಬೆಳ್ಳುಳ್ಳಿ - 4 ಎಸಳು
ಸಾಸಿವೆ - 1 ಚಮಚ
ಎಣ್ಣೆ - 2 ಚಮಚ
ಹುಣಸೆ ಹಣ್ಣು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವಿನ ಎಲೆ - 4 ರಿಂದ 6

ಮಾಡುವ ವಿಧಾನ :
ಬೀಟ್ರೂಟ್ ಅನ್ನು ತುರಿದು ಬಾಣಲೆಯಲ್ಲಿ ಎಣ್ಣೆ ಹಾಕಿ ಸರಿಯಾಗಿ ಹುರಿದುಕೊಳ್ಳಬೇಕು.
ಒಣಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು ಜೀರಿಗೆಯನ್ನು ಡ್ರೈ ರೋಸ್ಟ್ ಮಾಡಿಕೊಳ್ಳಬೇಕು. ಬೇಕಾದಲ್ಲಿ ಹಸಿಮೆಣಸಿನಕಾಯಿ ಸೇರಿಸಬಹುದು.
ಕಾಯಿತುರಿ, ಹುರಿದ ಬೀಟ್ರೂಟ್, ಬೆಳ್ಳುಳ್ಳಿ, ಹುಣಸೆ ಹಣ್ಣು ಮತ್ತು ಡ್ರೈ ರೋಸ್ಟ್ ಮಾಡಿದ ಎಲ್ಲವನ್ನು ಸೇರಿಸಿ ರುಬ್ಬಬೇಕು.
ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿ ಬೇವಿನ ಎಲೆಯಿಂದ ಒಗ್ಗರಣೆ ಹಾಕಬೇಕು.

ಬಾಳೆ ಹಣ್ಣಿನ ಬನ್ಸ್

ಬಾಳೆ ಹಣ್ಣಿನ ಬನ್ಸ್

ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು - ಬಾಳೆ ಹಣ್ಣಿನ ರಸ ಹಿಡಿಯುವಷ್ಟು
ಬಾಳೆಹಣ್ಣು - 4
ಸಕ್ಕರೆ - 4 ರಿಂದ 5 ಚಮಚ
ಜೀರಿಗೆ - 1 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಮೊಸರು - 2 ಸೌಟು ( ಹುಳಿ ಮೊಸರು ಉತ್ತಮ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :

🍌ಬಾಳೆ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಬೇಕು.
🍌ಇದಕ್ಕೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಿಸಬೇಕು.
🍌ಈ ಮಿಶ್ರಣಕ್ಕೆ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಮೆದುವಾಗಿರಲಿ.
🍌ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಬೇಕು.
🍌ಬಾಜಿ / ಸಾಂಬಾರು / ಕಾಯಿಚಟ್ನಿಯ ಜೊತೆಗೆ ಸವಿಯಿರಿ.

ಸೋಮವಾರ, ಜೂನ್ 14, 2021

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

ಮಾವಿನಕಾಯಿ ಗೊಜ್ಜು (ಮಂದನ ಗೊಜ್ಜು)

(ಇದು ಮಲೆನಾಡಿನ ಭಾಗವಾದ ಸಾಗರದ ಹವ್ಯಕರ ಸಾಂಪ್ರದಾಯಿಕ ಅಡಿಗೆ)

ಬೇಕಾಗುವ ಸಾಮಗ್ರಿ :
ಮಾವಿನಕಾಯಿ - 1
ಕಾಯಿತುರಿ - 1/2 ಕಪ್
ಮೆಂತ್ಯ - 1/2 ಚಮಚ
ಜೀರಿಗೆ - 1 ಚಮಚ
ಒಣಮೆಣಸಿನಕಾಯಿ - 1 ರಿಂದ 2
ಸೂಜಿಮೆಣಸು/ಹಸಿಮೆಣಸಿನಕಾಯಿ - 3 ರಿಂದ 4
ಉಪ್ಪು - ರುಚಿಗೆ
ಬೆಲ್ಲ - 1 ಸೌಟು
ಬೆಳ್ಳುಳ್ಳಿ - 7/8 ಎಸಳು
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ

ಮಾಡುವ ವಿಧಾನ
ಮಾವಿನಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಮೆಂತ್ಯ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು. ನಂತರ ಒಣಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಹೆಚ್ಚಿದ ಮಾವಿನಕಾಯಿ ಮತ್ತು ಹುರಿದ ಪದಾರ್ಥ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಕುದಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು.
ಹುಳಿಸಿಹಿಯಾಗಿ ಅನ್ನದ ಜೊತೆಗೆ ಚೆನ್ನಾಗಿರುತ್ತದೆ.

ಚೆನ್ನಾಗಿ ಕುದಿಸಿದರೆ ವಾರದವರೆಗೂ ಇರುತ್ತದೆ.

ಶುಕ್ರವಾರ, ಜೂನ್ 4, 2021

ಮಾವಿನ ಕಾಯಿ ಬೀಸಪ್ಪೆಹುಳಿ



ಬೇಕಾಗುವ ಸಾಮಗ್ರಿ : 

ಮಾವಿನ ಕಾಯಿ - 1 (ದೊಡ್ಡದಾದರೆ ಅರ್ಧ)
ಬೆಲ್ಲ - 1 ಸೌಟು (ಸಿಹಿಗೆ ತಕ್ಕಂತೆ ಸ್ವಲ್ಪ ಹೆಚ್ಚು ಕಡಿಮೆ)
ಎಣ್ಣೆ - 2 ಚಮಚ
ಸಾಸಿವೆ ಕಾಳು - 2 ಚಮಚ
ಒಣ ಮೆಣಸಿನ ಕಾಯಿ - 3 ರಿಂದ 4
ಬೆಳ್ಳುಳ್ಳಿ - 8 ರಿಂದ 10 ಎಸಳು
ಉಪ್ಪು - ರುಚಿಗೆ ತಕ್ಕಷ್ಟು 

ಮಾಡುವ ವಿಧಾನ : 

ಮೊದಲು ಮಾವಿನಕಾಯಿ ತೊಳೆದು, ಕತ್ತರಿಸಿ ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೇಯಿಸಿದ ನೀರಿನ್ನು ಚಲ್ಲಿ ತಣಿಯಲು ಬಿಡಬೇಕು.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣ ಮೆಣಸಿನಕಾಯಿ ಮತ್ತು 1/2 ಚಮಚ ಸಾಸಿವೆ ಕಾಳು ಹಾಕಿ ಹುರಿದುಕೊಳ್ಳಬೇಕು.

ನಂತರ ಈ ಹುರಿದ ಮಿಶ್ರಣ, ಬೇಯಿಸಿದ ಮಾವಿನಕಾಯಿ ಮತ್ತು ಎರಡು ಬೆಳ್ಳುಳ್ಳಿ ಎಸಳು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು ಸೇರಿಸಬೇಕು.

ಸಾಸಿವೆ ಕಾಳು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿದರೆ ಮಾವಿನ ಕಾಯಿ ಬೀಸಪ್ಪೆಹುಳಿ ರೆಡಿ.