ಶನಿವಾರ, ಜುಲೈ 30, 2022

ಕಿತ್ತಳೆ ಹಣ್ಣಿನ ಸಿಪ್ಪೆ ಗೊಜ್ಜು


ಬೇಕಾಗುವ ಸಾಮಗ್ರಿ :
ಕಿತ್ತಳೆ ಹಣ್ಣಿನ ಸಿಪ್ಪೆ - 1 ಹಣ್ಣಿನ ಸಿಪ್ಪೆ
ಕಾಯಿತುರಿ - 1 ಕಡಿ (ಕಾಯಿಯ ಒಂದು ಭಾಗ)
ಕೊತ್ತಂಬರಿ ಬೀಜ - 1 ಟೀ ಚಮಚ
ಬೆಲ್ಲ - 4/5 ಸೌಟು (ಸಿಹಿಯಾಗುವಷ್ಟು ಬೇಕು)
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ನೆಲ್ಲಿ ಗಾತ್ರದ್ದು
ಕೊಬ್ಬರಿ ಎಣ್ಣೆ - 2 ಚಮಚ
ಒಣ ಮೆಣಸಿನ ಕಾಯಿ - 4/5

ಮಾಡುವ ವಿಧಾನ :
ಮೊದಲು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬೇಯಿಸಿ ತಣ್ಣಗಾದ ನಂತರ ನೀರು ಬಸಿದು ಹಿಂಡಿ ಪೂರ್ತಿಯಾಗಿ ನೀರು ತೆಗೆಯಬೇಕು. ಜೊತೆಗೆ ಕಟುವಾದ ಅಂಶ ಕೂಡ ಹೋಗುತ್ತದೆ.
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕೊತ್ತಂಬರಿ ಹಾಗೂ ಒಣ ಮೆಣಸಿನ ಕಾಯಿ ಹುರಿದುಕೊಳ್ಳಬೇಕು.
ಕಾಯಿತುರಿ, ಹುಣಸೆ ಹಣ್ಣು, ಬೇಯಿಸಿದ ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಹುರಿದ ಮಿಶ್ರಣ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಬೇಕಾದಷ್ಟು ನೀರು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಉಳಿದ ಗೊಜ್ಜುಗಳಿಗಿಂತ ಸ್ವಲ್ಪ ತೆಳುವಾಗಿಯೇ ಇರಲಿ.
ಈಗ ಆರೋಗ್ಯಕರವಾದ ಘಮಘಮಿಸುವ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ಸಿದ್ಧವಾಯಿತು.
ಬಿಸಿ ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್.

ವೇದಾವತಿ ಭಟ್ಟ
ಮುಂಬೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ