ಭಾನುವಾರ, ಜುಲೈ 31, 2022

ಗೋಧಿ ಹಿಟ್ಟಿನ ಲಾಡು

ಗೋಧಿ ಹಿಟ್ಟಿನ ಲಾಡು

ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು - 1 ಕಪ್
ತುಪ್ಪ - 3/4 ಕಪ್
ಸಕ್ಕರೆ - 1 ಕಪ್ (ಪುಡಿ ಮಾಡಿಕೊಳ್ಳಬೇಕು)
ಏಲಕ್ಕಿ ಪುಡಿ - 1/4 ಚಮಚ

ಮಾಡುವ ವಿಧಾನ :
ದಪ್ಪ ತಳದ ಪಾತ್ರೆಯಲ್ಲಿ ಗೋಧಿ ಹಿಟ್ಟು ಹಾಕಿ ಐದು ನಿಮಿಷ ಹರಿಯಬೇಕು.
ಇದಕ್ಕೆ ತುಪ್ಪ ಸೇರಿಸಿ ಘಮ ಬರುವವರೆಗೆ ಅಂದರೆ ಇಪ್ಪತ್ತು ನಿಮಿಷಗಳವರೆಗೆ ಹುರಿಯಬೇಕು.
ಆಗ ತುಪ್ಪ ಉಗುಳಲು ಪ್ರಾರಂಭವಾಗುತ್ತದೆ.
ಆಗ ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿ ಸೇರಿಸಿ ಸರಿಯಾಗಿ ಕೈಯಾಡಿಸಿ ಒಲೆಯ ಉರಿ ಆರಿಸಿ ಸ್ವಲ್ಪ ತಣ್ಣಗಾಗಲು ಬಿಡಬೇಕು.
ನಂತರ ಬೇಕಾದಷ್ಟು ದೊಡ್ಡದಾದ ಉಂಡೆ ಮಾಡಬೇಕು. ಮಧ್ಯದಲ್ಲಿ ಒಣ ದ್ರಾಕ್ಷಿ ಬೇಕಾದಲ್ಲಿ ಸೇರಿಸಬಹುದು.

ವೇದಾವತಿ ಭಟ್ಟ
ಮುಂಬೈ

ಕೋಸಂಬರಿ


Chef Name : Shivank Joshi, Mumbai
5 years

Recipe no: 33

#ಮಕ್ಕಳ_ದಿನಾಚಾರಣೆಯ_ವಿಶೇಷ_ಥೀಮ್
 
ಕ್ಯಾರೆಟ್_ಮತ್ತು_ಹೆಸರುಬೇಳೆ_ಕೋಸಂಬರಿ


ಬೇಕಾಗುವ ಸಾಮಗ್ರಿ :
ಹೆಸರು ಬೇಳೆ (1 ಗಂಟೆ ನೆನೆಸಿದ್ದು) - 1 ಬೌಲ್
ಕ್ಯಾರೆಟ್ ತುರಿ - 1 ಬೌಲ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಹಸಿ ಮೆಣಸಿನ ಕಾಯಿ - 1
ಕಾಯಿತುರಿ - 1/2 ಬೌಲ್
ಉಪ್ಪು - ರುಚಿಗೆ ತಕ್ಕಷ್ಟು
ನಿಂಬೆರಸ - ಸ್ವಲ್ಪ

ಮಾಡುವ ವಿಧಾನ :
ಹೆಸರು ಬೇಳೆಯನ್ನು ಒಂದು ಗಂಟೆಯ ಕಾಲ ನೆನೆಸಿಟ್ಟುಕೊಳ್ಳಬೇಕು.
ಕ್ಯಾರೆಟ್ ತೊಳೆದು ಸಣ್ಣಗೆ ತುರಿದುಕೊಳ್ಳಬೇಕು.
ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹೆಚ್ಚಿಕೊಂಡಿರಬೇಕು.
ಕಾಯಿತುರಿ ಸಿದ್ಧವಾಗಿಟ್ಟುಕೊಳ್ಳಬೇಕು.
ಒಂದು ಬೌಲ್ ತೆಗೆದುಕೊಂಡು ಹೆಸರು ಬೇಳೆ, ಕ್ಯಾರೆಟ್ ತುರಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಬೇಕು.
ನಂತರ ಉಪ್ಪು ಮತ್ತು ನಿಂಬೆರಸ ಸೇರಿಸಿದರೆ ರುಚಿಕರ ಮತ್ತು ಆರೋಗ್ಯಕರವಾದ ಕೋಸಂಬರಿ ಸವಿಯಲು ಸಿದ್ಧ.

ಮಸಾಲಾ ಬಾತ್


ಬೇಕಾಗುವ ಸಾಮಗ್ರಿ :
ಎಣ್ಣೆ - 2 ಚಮಚ
ತುಪ್ಪ -
ಬಾಸುಮತಿ ಅಕ್ಕಿ - 1 ಲೋಟ
ಚಕ್ಕೆ - 1 ಇಂಚು
ಲವಂಗ - 4
ಪಲಾವ್ ಎಲೆ - 1
ಏಲಕ್ಕಿ - 2
ಕಾಳು ಮೆಣಸು - 7/8
ಜೀರಿಗೆ - 1 ಚಮಚ
ಈರುಳ್ಳಿ - 1
ಬೆಳ್ಳುಳ್ಳಿ - 4/5
ಶುಂಠಿ - 1/4 ಇಂಚು
ಕೊತ್ತಂಬರಿ ಪುಡಿ - 1/2 ಚಮಚ
ಮೆಣಸಿನ ಪುಡಿ - 1/2 ಚಮಚ
ಪಾವ್ ಬಾಜಿ ಪುಡಿ - 1 ಚಮಚ
ಅರಿಶಿಣ - 1/4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ನೀರು - 2 ಲೋಟ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಟೊಮಾಟೋ - 1

ಮಾಡುವ ವಿಧಾನ :
ಕುಕ್ಕರಿಗೆ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿಯಾಗುವವರೆಗೆ ಬಿಡಬೇಕು.
ನಂತರ ಇದಕ್ಕೆ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ, ಪಲಾವ್ ಎಲೆ ಹಾಕಿ ಕೈಯಾಡಿಸಬೇಕು.
ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಕೈಯಾಡಿಸಬೇಕು.
ನಂತರ ಸಣ್ಣಗೆ ಹೆಚ್ಚಿದ ಟೊಮಾಟೋ ಸೇರಿಸಿ ಮೆತ್ತಗಾಗುವವರೆಗೆ ಹುರಿಯಬೇಕು.
ಅರಿಶಿಣ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಪಾವ್ ಬಾಜಿ ಮಸಾಲಾ ಪುಡಿ ಸೇರಿಸಿ ಕೈಯಾಡಿಸಬೇಕು.
ನಂತರ ಅಕ್ಕಿ ಸೇರಿಸಿ ನೀರು, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ 2 / 3 ಸಿಟಿ ಹಾಕಿಸಬೇಕು.

ಶನಿವಾರ, ಜುಲೈ 30, 2022

ಕಿತ್ತಳೆ ಹಣ್ಣಿನ ಸಿಪ್ಪೆ ಗೊಜ್ಜು


ಬೇಕಾಗುವ ಸಾಮಗ್ರಿ :
ಕಿತ್ತಳೆ ಹಣ್ಣಿನ ಸಿಪ್ಪೆ - 1 ಹಣ್ಣಿನ ಸಿಪ್ಪೆ
ಕಾಯಿತುರಿ - 1 ಕಡಿ (ಕಾಯಿಯ ಒಂದು ಭಾಗ)
ಕೊತ್ತಂಬರಿ ಬೀಜ - 1 ಟೀ ಚಮಚ
ಬೆಲ್ಲ - 4/5 ಸೌಟು (ಸಿಹಿಯಾಗುವಷ್ಟು ಬೇಕು)
ಉಪ್ಪು - ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ನೆಲ್ಲಿ ಗಾತ್ರದ್ದು
ಕೊಬ್ಬರಿ ಎಣ್ಣೆ - 2 ಚಮಚ
ಒಣ ಮೆಣಸಿನ ಕಾಯಿ - 4/5

ಮಾಡುವ ವಿಧಾನ :
ಮೊದಲು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬೇಯಿಸಿ ತಣ್ಣಗಾದ ನಂತರ ನೀರು ಬಸಿದು ಹಿಂಡಿ ಪೂರ್ತಿಯಾಗಿ ನೀರು ತೆಗೆಯಬೇಕು. ಜೊತೆಗೆ ಕಟುವಾದ ಅಂಶ ಕೂಡ ಹೋಗುತ್ತದೆ.
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕೊತ್ತಂಬರಿ ಹಾಗೂ ಒಣ ಮೆಣಸಿನ ಕಾಯಿ ಹುರಿದುಕೊಳ್ಳಬೇಕು.
ಕಾಯಿತುರಿ, ಹುಣಸೆ ಹಣ್ಣು, ಬೇಯಿಸಿದ ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಹುರಿದ ಮಿಶ್ರಣ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಬೇಕಾದಷ್ಟು ನೀರು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಉಳಿದ ಗೊಜ್ಜುಗಳಿಗಿಂತ ಸ್ವಲ್ಪ ತೆಳುವಾಗಿಯೇ ಇರಲಿ.
ಈಗ ಆರೋಗ್ಯಕರವಾದ ಘಮಘಮಿಸುವ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ಸಿದ್ಧವಾಯಿತು.
ಬಿಸಿ ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್.

ವೇದಾವತಿ ಭಟ್ಟ
ಮುಂಬೈ