ಗುರುವಾರ, ಸೆಪ್ಟೆಂಬರ್ 16, 2021

ಹಾಗಿಲಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ :
ಹಾಗಿಲಕಾಯಿ - 1
ಉಪ್ಪು - 1/2 ಚಮಚ & ರುಚಿಗೆ ತಕ್ಕಷ್ಟು
ಸಾಸಿವೆ ಕಾಳು - 1 ಚಮಚ
ಕಾಯಿ ತುರಿ - 1/2 ಕಪ್
ಮೊಸರು - 1/2 ಕಪ್ (ಹುಳಿಯಾಗಿದ್ದರೆ ಒಳ್ಳೆಯದು)
ಸೂಜಿಮೆಣಸು - 5/6
(ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಕೊಬ್ಬರಿ ಎಣ್ಣೆ - 2 ಚಮಚ

ಮಾಡುವ ವಿಧಾನ :
ಹಾಗಿಲಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ ಉಪ್ಪು ಸೇರಿಸಿ ಸ್ವಲ್ಪ ಸಮಯ ಬಿಡಬೇಕು.
ನಂತರ ಗಟ್ಟಿಯಾಗಿ ಹಿಂಡಿ ನೀರು ತೆಗೆದು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಎಣ್ಣೆ ಹಾಕಿ ಚೆನ್ನಾಗಿ ಹುರಿಯಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಸಾಸಿವೆ ಕಾಳು ಮತ್ತು ಸೂಜಿಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಹುರಿದ ಹಾಗಿಲಕಾಯಿ ಹೋಳಿಗೆ ರುಬ್ಬಿದ ಮಿಶ್ರಣ ಮತ್ತು ಮೊಸರು ಸೇರಿಸಬೇಕು.
ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
ಅನ್ನದ ಜೊತೆಗೆ ಸವಿಯಲು ಸಾಸಿವೆ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ