ಗುರುವಾರ, ಸೆಪ್ಟೆಂಬರ್ 16, 2021

ಗ್ಲಾಸ್_ಸ್ಯಾಂಡ್_ವಿಚ್



ಬೇಕಾಗುವ ಸಾಮಗ್ರಿ :
ಕುಂಬಳಕಾಯಿ - 1/4 ಕೆ ಜಿ
ಸಕ್ಕರೆ - 1 ಕಪ್
ನೀರು - 1 1/2 ಕಪ್
ಸುಣ್ಣ - 1 ಚಮಚ
ಬಾದಾಮಿ - 15/20
ಹಾಲಿನ ಪುಡಿ - 5 ಟೀ ಚಮಚ
ಏಲಕ್ಕಿ - 1 ಚಿಟಿಕೆ
ಫುಡ್ ಕಲರ್ - 1 ಚಿಟಿಕೆ

ಮಾಡುವ ವಿಧಾನ :
ಮೊದಲು ಕುಂಬಳಕಾಯಿಯ ಸಿಪ್ಪೆ ತೆಗೆದು ಬೇಕಾದ ಆಕಾರದಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
ಈ ಹೋಳುಗಳನ್ನು ಸುಣ್ಣದ ನೀರಿನಲ್ಲಿ 8-10 ಗಂಟೆ ನೆನೆಸಿಡಬೇಕು.
ನಂತರ ಸುಣ್ಣ ಹೋಗುವಂತೆ ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಬೇಕು.
ಸಕ್ಕರೆ ಫುಡ್ ಕಲರ್ ಮತ್ತು ನೀರು ಸೇರಿಸಿ ಕರಗಿಸಿಕೊಂಡು ಬೇಯಿಸಿದ ಕುಂಬಳಕಾಯಿ ಹೋಳು ಸೇರಿಸಿ ಎಳೆಪಾಕ ಮಾಡಿಕೊಳ್ಳಬೇಕು.
ಪಾಕದಿಂದ ತೆಗೆದು ಎರಡು ಗಂಟೆ ಒಣಗಲು ಬಿಡಬೇಕು.
ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಹಾಲು ಸೇರಿಸಿ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಹಾಲಿನಪುಡಿ ಸೇರಿಸಿ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕೈಯಾಡಿಸಬೇಕು.
ಉಂಡೆಯ ಹದಕ್ಕೆ ಬಂದಾಗ ಒಲೆ ಆರಿಸಿ ತಣ್ಣಗಾಗಲು ಬಿಡಬೇಕು.
ನಂತರ ಸಿದ್ಧ ಮಾಡಿಕೊಂಡ ಕುಂಬಳಕಾಯಿ ಹೋಳಿನ ಮೇಲೆ ಈ ಮಿಶ್ರಣ ತುಂಬಿ ಮತ್ತೊಂದು ಹೋಳಿನಿಂದ ಮುಟ್ಟಿದರೆ ಸ್ಯಾಂಡ್ ವಿಚ್ ಸವಿಯಲು ಸಿದ್ಧ.

ನಾನು ಡೆಸಿಕೆಟೆಡ್ ಕೊಕೊನಟ್ ನಿಂದ ಅಲಂಕರಿಸಿದ್ದೇನೆ.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ