ಶುಕ್ರವಾರ, ಸೆಪ್ಟೆಂಬರ್ 17, 2021

ಒಂದೆಲಗ (ಬ್ರಾಹ್ಮಿ) ತಂಬುಳಿ




ಬೇಕಾಗುವ ಸಾಮಗ್ರಿ :
ಒಂದೆಲಗ (ಬ್ರಾಹ್ಮಿ) ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್
ಬೆಲ್ಲ - 1 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಒಂದೆಲಗ (ಬ್ರಾಹ್ಮಿ) ಸೊಪ್ಪನ್ನು ತೊಳೆದು ಹಾಕಿ ಚೆನ್ನಾಗಿ ಹುರಿಯಬೇಕು.
ಇದನ್ನು ಮಿಕ್ಸಿ ಮಾಡಿ ಸೋಸಿಕೊಳ್ಳಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಸೋಸಿದ ಮಿಶ್ರಣ ಮತ್ತು ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಮುಟ್ಟಿದರೆ ಮುನಿ ಸೊಪ್ಪಿನ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಮುಟ್ಟಿದರೆ ಮುನಿ ತಂಬುಳಿ


ಬೇಕಾಗುವ ಸಾಮಗ್ರಿ :
ಮುಟ್ಟಿದರೆ ಮುನಿ ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್
ಬೆಲ್ಲ - 1 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಮುಟ್ಟಿದರೆ ಮುನಿ ಸೊಪ್ಪನ್ನು ತೊಳೆದು ಹಾಕಿ ಚೆನ್ನಾಗಿ ಹುರಿಯಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಮುಟ್ಟಿದರೆ ಮುನಿ ಸೊಪ್ಪಿನ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ
 

ಗುರುವಾರ, ಸೆಪ್ಟೆಂಬರ್ 16, 2021

ಹಾಗಿಲಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ :
ಹಾಗಿಲಕಾಯಿ - 1
ಉಪ್ಪು - 1/2 ಚಮಚ & ರುಚಿಗೆ ತಕ್ಕಷ್ಟು
ಸಾಸಿವೆ ಕಾಳು - 1 ಚಮಚ
ಕಾಯಿ ತುರಿ - 1/2 ಕಪ್
ಮೊಸರು - 1/2 ಕಪ್ (ಹುಳಿಯಾಗಿದ್ದರೆ ಒಳ್ಳೆಯದು)
ಸೂಜಿಮೆಣಸು - 5/6
(ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಬಳಸಬಹುದು)
ಕೊಬ್ಬರಿ ಎಣ್ಣೆ - 2 ಚಮಚ

ಮಾಡುವ ವಿಧಾನ :
ಹಾಗಿಲಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ ಉಪ್ಪು ಸೇರಿಸಿ ಸ್ವಲ್ಪ ಸಮಯ ಬಿಡಬೇಕು.
ನಂತರ ಗಟ್ಟಿಯಾಗಿ ಹಿಂಡಿ ನೀರು ತೆಗೆದು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಎಣ್ಣೆ ಹಾಕಿ ಚೆನ್ನಾಗಿ ಹುರಿಯಬೇಕು.
ಮಿಕ್ಸಿ ಜಾರಿಗೆ ಕಾಯಿತುರಿ, ಸಾಸಿವೆ ಕಾಳು ಮತ್ತು ಸೂಜಿಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಹುರಿದ ಹಾಗಿಲಕಾಯಿ ಹೋಳಿಗೆ ರುಬ್ಬಿದ ಮಿಶ್ರಣ ಮತ್ತು ಮೊಸರು ಸೇರಿಸಬೇಕು.
ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು.
ಅನ್ನದ ಜೊತೆಗೆ ಸವಿಯಲು ಸಾಸಿವೆ ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಬಾಳೆ ಹಣ್ಣಿನ ಬನ್ಸ್



ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು - ಬಾಳೆ ಹಣ್ಣಿನ ರಸ ಹಿಡಿಯುವಷ್ಟು
ಬಾಳೆಹಣ್ಣು - 4
ಸಕ್ಕರೆ - 4 ರಿಂದ 5 ಚಮಚ
ಜೀರಿಗೆ - 1 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಮೊಸರು - 2 ಸೌಟು ( ಹುಳಿ ಮೊಸರು ಉತ್ತಮ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :

🍌ಬಾಳೆ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಬೇಕು.
🍌ಇದಕ್ಕೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಿಸಬೇಕು.
🍌ಈ ಮಿಶ್ರಣಕ್ಕೆ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿಗಿಂತ ಮೆದುವಾಗಿರಲಿ.
🍌ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಬೇಕು.
🍌ಬಾಜಿ / ಸಾಂಬಾರು / ಕಾಯಿಚಟ್ನಿಯ ಜೊತೆಗೆ ಸವಿಯಿರಿ.

ಗ್ಲಾಸ್_ಸ್ಯಾಂಡ್_ವಿಚ್



ಬೇಕಾಗುವ ಸಾಮಗ್ರಿ :
ಕುಂಬಳಕಾಯಿ - 1/4 ಕೆ ಜಿ
ಸಕ್ಕರೆ - 1 ಕಪ್
ನೀರು - 1 1/2 ಕಪ್
ಸುಣ್ಣ - 1 ಚಮಚ
ಬಾದಾಮಿ - 15/20
ಹಾಲಿನ ಪುಡಿ - 5 ಟೀ ಚಮಚ
ಏಲಕ್ಕಿ - 1 ಚಿಟಿಕೆ
ಫುಡ್ ಕಲರ್ - 1 ಚಿಟಿಕೆ

ಮಾಡುವ ವಿಧಾನ :
ಮೊದಲು ಕುಂಬಳಕಾಯಿಯ ಸಿಪ್ಪೆ ತೆಗೆದು ಬೇಕಾದ ಆಕಾರದಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
ಈ ಹೋಳುಗಳನ್ನು ಸುಣ್ಣದ ನೀರಿನಲ್ಲಿ 8-10 ಗಂಟೆ ನೆನೆಸಿಡಬೇಕು.
ನಂತರ ಸುಣ್ಣ ಹೋಗುವಂತೆ ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಬೇಕು.
ಸಕ್ಕರೆ ಫುಡ್ ಕಲರ್ ಮತ್ತು ನೀರು ಸೇರಿಸಿ ಕರಗಿಸಿಕೊಂಡು ಬೇಯಿಸಿದ ಕುಂಬಳಕಾಯಿ ಹೋಳು ಸೇರಿಸಿ ಎಳೆಪಾಕ ಮಾಡಿಕೊಳ್ಳಬೇಕು.
ಪಾಕದಿಂದ ತೆಗೆದು ಎರಡು ಗಂಟೆ ಒಣಗಲು ಬಿಡಬೇಕು.
ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಹಾಲು ಸೇರಿಸಿ ರುಬ್ಬಿಕೊಳ್ಳಬೇಕು.
ಈ ಮಿಶ್ರಣಕ್ಕೆ ಹಾಲಿನಪುಡಿ ಸೇರಿಸಿ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕೈಯಾಡಿಸಬೇಕು.
ಉಂಡೆಯ ಹದಕ್ಕೆ ಬಂದಾಗ ಒಲೆ ಆರಿಸಿ ತಣ್ಣಗಾಗಲು ಬಿಡಬೇಕು.
ನಂತರ ಸಿದ್ಧ ಮಾಡಿಕೊಂಡ ಕುಂಬಳಕಾಯಿ ಹೋಳಿನ ಮೇಲೆ ಈ ಮಿಶ್ರಣ ತುಂಬಿ ಮತ್ತೊಂದು ಹೋಳಿನಿಂದ ಮುಟ್ಟಿದರೆ ಸ್ಯಾಂಡ್ ವಿಚ್ ಸವಿಯಲು ಸಿದ್ಧ.

ನಾನು ಡೆಸಿಕೆಟೆಡ್ ಕೊಕೊನಟ್ ನಿಂದ ಅಲಂಕರಿಸಿದ್ದೇನೆ.

ವೇದಾವತಿ ಭಟ್ಟ
ಮುಂಬೈ 

ಭಾನುವಾರ, ಸೆಪ್ಟೆಂಬರ್ 5, 2021

ಬಿಲ್ವಪತ್ರೆ ತಂಬುಳಿ



ಬೇಕಾಗುವ ಸಾಮಗ್ರಿ :
ಬಿಲ್ವಪತ್ರೆ - 15 ರಿಂದ 20 ಎಲೆ
ಜೀರಿಗೆ - 1 ಚಮಚ
ಕಾಳು ಮೆಣಸು - 8/10
ಕಾಯಿ ತುರಿ - 1/2 ಕಪ್
ಮಜ್ಜಿಗೆ - 1/2 ಲೋಟ
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯಕ್ಕೆ ತಕ್ಕಷ್ಟು
ಕೊಬ್ಬರಿ ಎಣ್ಣೆ - 1 ಚಮಚ

ಮಾಡುವ ವಿಧಾನ :
ಪತ್ರೆ ಎಲೆಗಳನ್ನು ತೊಳೆದು ಎಣ್ಣೆ ಹಾಕಿ ಹುರಿಯಬೇಕು.
ಸರಿಯಾಗಿ ಹುರಿದ ನಂತರ ಕಾಳಮೆಣಸು ಮತ್ತು ಜೀರಿಗೆ ಸೇರಿಸಿ ಮತ್ತೆ ಸ್ವಲ್ಪ ಹುರಿದು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಮಜ್ಜಿಗೆ ಮತ್ತು ಬೇಕಾದಷ್ಟು ನೀರು ಸೇರಿಸಬೇಕು.
ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ.

ಶುಕ್ರವಾರ, ಸೆಪ್ಟೆಂಬರ್ 3, 2021

ಗೋಧಿ ಹಾಲುಬಾಯಿ (ಮಣ್ಣಿ)



ಬೇಕಾಗುವ ಸಾಮಗ್ರಿ :
ಗೋಧಿ - 1 ಕಪ್
ಬೆಲ್ಲ - 1/2 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಉಪ್ಪು - 1/4 ಚಮಚ

ಮಾಡುವ ವಿಧಾನ :
ಗೋಧಿಯನ್ನು ರಾತ್ರಿಯೇ ನೆನಸಿಡಬೇಕು.
ನಂತರ ರುಬ್ಬಿ ಸೋಸಿ ಹಾಲು ತೆಗೆದುಕೊಳ್ಳಬೇಕು.
ಸ್ವಲ್ಪ ಸಮಯ ಬಿಟ್ಟರೆ ಗಟ್ಟಿಯಾದ ಹಾಲು ತಳದಲ್ಲಿ ಇರುತ್ತದೆ.
ಮೇಲಿನ ನೀರನ್ನು ಬಸಿದುಕೊಳ್ಳಬೇಕು.
ದಪ್ಪ ತಳದ ಪಾತ್ರೆಗೆ ಹಾಕಿ ಬೆಲ್ಲ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಗಂಟಿಲ್ಲದಂತೆ ಕೊಡಬೇಕು.
ಸಣ್ಣ ಉರಿಯಲ್ಲಿ ಬಿಡದಂತೆ ಕೈಯಾಡಿಸಬೇಕು.
ತಳ ಬಿಡುತ್ತ ಬಂದಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಬೇಕು.
ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ತುಪ್ಪ ಅಥವಾ ಕಾಯಿಹಾಲಿನ ಜೊತೆ ಸವಿಯಬೇಕು.


ವೇದಾವತಿ ಭಟ್ಟ 

ಗುರುವಾರ, ಸೆಪ್ಟೆಂಬರ್ 2, 2021

ಜಿಲೇಬಿ

ಜಿಲೆಬಿ

ಬೇಕಾಗುವ ಸಾಮಗ್ರಿ :
ಮೈದಾ ಹಿಟ್ಟು - 1 ಕಪ್
ಮೊಸರು - 4 ಚಮಚ
ಬೇಕಿಂಗ್ ಸೋಡಾ - 1 ಚಿಟಿಕೆ
ಕಾರ್ನ್ ಫ್ಲೋರ್ - 4 ಚಮಚ
ಉಪ್ಪು - 1 ಚಿಟಿಕೆ
ನೀರು - 100 ಎಂ ಎಲ್
ಸಕ್ಕರೆ - 3 ಕಪ್ (ನೀರು 1 1/2 ಕಪ್)
ನಿಂಬೆ ರಸ - 2 ಚಮಚ
ಫುಡ್ ಕಲರ್ - 1 ಚಿಟಿಕೆ

ಮಾಡುವ ವಿಧಾನ :
ಒಂದು ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಮೊಸರು, ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಿಸಬೇಕು.
ಕಲಿಸಿದ ಮಿಶ್ರಣವನ್ನು ಎರಡು ಗಂಟೆ ಹಾಗೆಯೇ ಬಿಡಬೇಕು.
ಮತ್ತೊಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆ ಸೇರಿಸಿ ಎಳೆ ಪಾಕ ಮಾಡಿಕೊಳ್ಳಬೇಕು. ಈ ಪಾಕಕ್ಕೆ ನಿಂಬೆ ರಸ ಮತ್ತು ಫುಡ್ ಕಲರ್ ಸೇರಿಸಬೇಕು.
ಸಿದ್ಧವಾದ ಹಿಟ್ಟನ್ನು ಜಿಲೇಬಿ ಮೇಕರ್ ಅಥವಾ ಕೊಟ್ಟೆಗೆ
ಹಾಕಿ ಬಿಸಿ ಎಣ್ಣೆಯಲ್ಲಿ ಕರಿಯಬೇಕು.
ಇದನ್ನು ಸಕ್ಕರೆ ಪಾಕಕ್ಕೆ ಹಾಕಿ ಸ್ವಲ್ಪ ಸಮಯದ ನಂತರ ಡಬ್ಬದಲ್ಲಿ ತುಂಬಿಡಬೇಕು.

ಸಕ್ಕರೆ ಪಾಕ ತಯಾರಿಸಲು 3 ಕಪ್ ಸಕ್ಕರೆಗೆ 1 1/2 ಕಪ್ ನೀರು ಸೇರಿಸಿ ನಿಂಬೆ ರಸ ಮತ್ತು ಫುಡ್ ಕಲರ್ ಹಾಕ ಎಳೆಪಾಕ ಮಾಡಿಕೊಳ್ಳುಬೇಕು.

ವೇದಾವತಿ ಭಟ್ಟ
ಮುಂಬೈ