ಶುಕ್ರವಾರ, ಮೇ 14, 2021

ಪುಂಡಿಉಂಡೆ

#ಪುಂಡಿ ಉಂಡೆ # ನುಚ್ಚಿನ ಕಡಬು
ಕರಾವಳಿಯ ವಿಶೇಷತೆ
( ಅಕ್ಕಿ ರವೆಯಿಂದ ಮಾಡಿದ್ದು )

ಅಕ್ಕಿರವೆ ಪುಂಡಿ :

ಬೇಕಾಗುವ ಸಾಮಗ್ರಿಗಳು :
ಇಡ್ಲಿರವೆ - ೨ ಲೋಟ
ನೀರು - ೪.೫ ಲೋಟ
ಒಗ್ಗರಣೆಗೆ - ತೆಂಗಿನ ಎಣ್ಣೆ ೨ ಚಮಚ
ಸಾಸಿವೆ - ೧ ಚಮಚ
ಜೀರಿಗೆ - ೧ ಚಮಚ
ಕಡ್ಲೆಬೇಳೆ - ೧ಚಮಚ
ಕರಿಬೇವಿನ ಎಲೆಗಳು - ೮/೧೦
ದೊಡ್ಡದಾದ ಈರುಳ್ಳಿ - ೧ ಸಣ್ಣಗೆ ಹೆಚ್ಚಿದ್ದು.
ತೆಂಗಿನ ತುರಿ - ಸ್ವಲ್ಪ
ಉಪ್ಪು - ರುಚಿಗೆ

ಮಾಡುವ ವಿಧಾನ :
ಬಾಣಲಿಗೆ ತೆಂಗಿನ ಎಣ್ಣೆ ಹಾಕಿ ಒಗ್ಗರಣೆ ಕೊಡಿ. ನಂತರ ಇಡ್ಲಿರವೆಯನ್ನು ಹಾಕಿ ಚೆನ್ನಾಗಿ ಕಲಸಿ. ಅಳತೆಯ ನೀರನ್ನು ಹಾಕಿ ಮಿಕ್ಸ್ ಮಾಡಿರಿ. ತೆಂಗಿನ ತುರಿ ಹಾಕಿರಿ‌. ಗಟ್ಟಿಯಾಗುವ ತನಕ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಗೊಟಾಯಿಸಿರಿ.
ನಂತರ ಕೆಳಗಿಸಿ. ಸ್ವಲ್ಪ ಬಿಸಿಬಿಸಿ ಯಿರುವಾಗಲೇ ಎಲ್ಲ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿರಿ. ಅದನ್ನು ಇಡ್ಲಿ ಅಟ್ಟದಲ್ಲಿ ಇಟ್ಟು ಹದಿನೈದು ನಿಮಿಷ ಬೇಯಿಸಿರಿ. ಸಂಜೆಗೆ ಬಿಸಿಬಿಸಿಯಾದ ಕರಾವಳಿಯ ತಿಂಡಿ ಉಂಡೆ ( ಪುಂಡಿ ) ಸವಿಯಲು ಸಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ