ಶನಿವಾರ, ಮೇ 15, 2021

ದಿಢೀರ್ ಇಡ್ಲಿ


ಬೇಕಾಗುವ ಸಾಮಗ್ರಿ :
ದಪ್ಪ ಅವಲಕ್ಕಿ - 1 ಕಪ್
ರವಾ - 2 ಕಪ್
ಮೊಸರು - 1 ಕಪ್
ಇನೋ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಚಮಚ

ಮಾಡುವ ವಿಧಾನ :
ಅವಲಕ್ಕಿಯನ್ನು 20 ನಿಮಿಷ ನೀರಿನಲ್ಲಿ ನೆನೆಸಬೇಕು.
ರವೆಯನ್ನು ತೊಳೆದು ಮೊಸರು ಮತ್ತು ಉಪ್ಪು ಸೇರಿಸಿ ಇಡಬೇಕು.
20 ನಿಮಿಷದ ನಂತರ ಅವಲಕ್ಕಿಯನ್ನು ನೀರಿಲ್ಲದಂತೆ ಹಿಂಡಿ, ನೀರು ಸೇರಿಸದೇ ರುಬ್ಬಿ ರವೆಯ ಮಿಶ್ರಣಕ್ಕೆ ಸೇರಿಸಬೇಕು.
ಸರಿಯಾಗಿ ಈ ಮಿಶ್ರಣವನ್ನು ಕದಡಿಕೊಳ್ಳಬೇಕು. ಗಟ್ಟಿಯಾಗಿಯೇ ಇರಬೇಕು.
ಇನೋ ಮತ್ತು ಎಣ್ಣೆಯನ್ನು ಸೇರಿಸಿ ಕೈಯಾಡಿಸಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಹಾಕಿ 15 ನಿಮಿಷ ಬೇಯಿಸಿದರೆ ದಿಢೀರ್ ಇಡ್ಲಿ ರೆಡಿ.

ಶುಕ್ರವಾರ, ಮೇ 14, 2021

ಪಲಾವ್



ಬೇಕಾಗುವ ಸಾಮಗ್ರಿ :
ತುಪ್ಪ - 2 ಚಮಚ
ಎಣ್ಣೆ - 2 ಚಮಚ
ಬಾಸ್ಮತಿ ಅಕ್ಕಿ - 2 ಲೋಟ
ನೀರು - 4 ಲೋಟ
ಟೊಮಾಟೊ - 1
ಕ್ಯಾರೆಟ್ - 1/2 ಕಪ್
ಬೀನ್ಸ್ - 1/2 ಕಪ್
ಬಟಾಟೆ - 1/2 ಕಪ್
ಈರುಳ್ಳಿ - 1
ಬೆಳ್ಳುಳ್ಳಿ - 7/8 ಎಸಳು
ಶುಂಠಿ - 1/2 ಇಂಚು
ಚಕ್ಕೆ - ಚೂರು
ಲವಂಗ - 1
ಪಲಾವ್ ಎಲೆ - 1/2
ಜೀರಿಗೆ - 1/2 ಚಮಚ
ಕೊತ್ತಂಬರಿ - 1/4 ಚಮಚ
ಗಸಗಸೆ - 1/2 ಚಮಚ
ಉಪ್ಪು - ರುಚಿಗೆ

ಮಾಡುವ ವಿಧಾನ :

ಮೊದಲು ಕುಕ್ಕರಿಗೆ ತುಪ್ಪ ಮತ್ತು ಎಣ್ಣೆ ಹಾಕಿ ಪಲಾವ್ ಎಲೆ ಹಾಕಿ ಬಿಸಿ ಮಾಡಬೇಕು.
ಟೊಮಾಟೊ, ಈರುಳ್ಳಿ, ಬೆಳ್ಳುಳ್ಳಿ, ಗಸಗಸೆ, ಜೀರಿಗೆ, ಕೊತ್ತಂಬರಿ, ಚಕ್ಕೆ, ಲವಂಗ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಎಲ್ಲವನ್ನೂ ರುಬ್ಬಿಕೊಳ್ಳಬೇಕು.
ನಂತರ ತರಕಾರಿ ಹೋಳುಗಳನ್ನು ಸೇರಿಸಿ ಕೈಯಾಡಿಸಿ, ಅಕ್ಕಿ ಹಾಕಬೇಕು.
ಉಪ್ಪು ಮತ್ತು ನೀರು ಸೇರಿಸಿ ರುಬ್ಬಿದ ಮಿಶ್ರಣ ಸೇರಿಸಿ ಮುಚ್ಚಳ ಹಾಕಿ ಮೂರು ಸೀಟಿ ಹೊಡೆಸಬೇಕು.

ಘೀರೈಸ್



ಬೇಕಾಗುವ ಸಾಮಗ್ರಿ :
ಗೋಡಂಬಿ - 8/10
ದ್ರಾಕ್ಷಿ - 10/15
ಅಕ್ಕಿ - 1 ಕಪ್ (ನೆನೆಸಿದ ಬಾಸ್ಮತಿ ಅಕ್ಕಿ)
ನೀರು - 1.5 ಕಪ್
ತುಪ್ಪ - 4 ಚಮಚ
ಲವಂಗ - 1
ಚಕ್ಕೆ - ಚೂರು
ಏಲಕ್ಕಿ - 1
ಉಪ್ಪು - ರುಚಿಗೆ ತಕ್ಕಷ್ಟು
ಈರುಳ್ಳಿ - 1 (ಸಣ್ಣಗೆ ಹೆಚ್ಚಿದ್ದು)
ಪಲಾವ್ ಎಲೆ - 1/2 ಇಂಚು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಹಸಿಮೆಣಸಿನಕಾಯಿ - 1

ಮಾಡುವ ವಿಧಾನ :

ಮೊದಲು ಬಾಣಲೆಯಲ್ಲಿ 1 ಚಮಚ ಹಾಕಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದಿಟ್ಟುಕೊಳ್ಳಬೇಕು.
ಕುಕ್ಕರಿನಲ್ಲಿ ಮೂರು ಚಮಚ ತುಪ್ಪ ಹಾಕಿ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ ಹಾಕಿ ಕೈಯಾಡಿಸಬೇಕು.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಕೈಯಾಡಿಸಬೇಕು.
ನೆನೆಸಿದ ಅಕ್ಕಿ, ನೀರು ಮತ್ತು ಉಪ್ಪು ಸೇರಿಸಿ ಎರಡು ವಿಸಿಲ್ ಹೊಡೆಸಬೇಕು.
ನಂತರ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಘೀರೈಸ್ ಸವಿಯಲು ಸಿದ್ಧ.

ಪುಂಡಿಉಂಡೆ

#ಪುಂಡಿ ಉಂಡೆ # ನುಚ್ಚಿನ ಕಡಬು
ಕರಾವಳಿಯ ವಿಶೇಷತೆ
( ಅಕ್ಕಿ ರವೆಯಿಂದ ಮಾಡಿದ್ದು )

ಅಕ್ಕಿರವೆ ಪುಂಡಿ :

ಬೇಕಾಗುವ ಸಾಮಗ್ರಿಗಳು :
ಇಡ್ಲಿರವೆ - ೨ ಲೋಟ
ನೀರು - ೪.೫ ಲೋಟ
ಒಗ್ಗರಣೆಗೆ - ತೆಂಗಿನ ಎಣ್ಣೆ ೨ ಚಮಚ
ಸಾಸಿವೆ - ೧ ಚಮಚ
ಜೀರಿಗೆ - ೧ ಚಮಚ
ಕಡ್ಲೆಬೇಳೆ - ೧ಚಮಚ
ಕರಿಬೇವಿನ ಎಲೆಗಳು - ೮/೧೦
ದೊಡ್ಡದಾದ ಈರುಳ್ಳಿ - ೧ ಸಣ್ಣಗೆ ಹೆಚ್ಚಿದ್ದು.
ತೆಂಗಿನ ತುರಿ - ಸ್ವಲ್ಪ
ಉಪ್ಪು - ರುಚಿಗೆ

ಮಾಡುವ ವಿಧಾನ :
ಬಾಣಲಿಗೆ ತೆಂಗಿನ ಎಣ್ಣೆ ಹಾಕಿ ಒಗ್ಗರಣೆ ಕೊಡಿ. ನಂತರ ಇಡ್ಲಿರವೆಯನ್ನು ಹಾಕಿ ಚೆನ್ನಾಗಿ ಕಲಸಿ. ಅಳತೆಯ ನೀರನ್ನು ಹಾಕಿ ಮಿಕ್ಸ್ ಮಾಡಿರಿ. ತೆಂಗಿನ ತುರಿ ಹಾಕಿರಿ‌. ಗಟ್ಟಿಯಾಗುವ ತನಕ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಗೊಟಾಯಿಸಿರಿ.
ನಂತರ ಕೆಳಗಿಸಿ. ಸ್ವಲ್ಪ ಬಿಸಿಬಿಸಿ ಯಿರುವಾಗಲೇ ಎಲ್ಲ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿರಿ. ಅದನ್ನು ಇಡ್ಲಿ ಅಟ್ಟದಲ್ಲಿ ಇಟ್ಟು ಹದಿನೈದು ನಿಮಿಷ ಬೇಯಿಸಿರಿ. ಸಂಜೆಗೆ ಬಿಸಿಬಿಸಿಯಾದ ಕರಾವಳಿಯ ತಿಂಡಿ ಉಂಡೆ ( ಪುಂಡಿ ) ಸವಿಯಲು ಸಿದ್ದ.