ಭಾನುವಾರ, ಆಗಸ್ಟ್ 29, 2021

ಹೋಳಿಗೆ

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು

#ಗೌರಿ_ಗಣೇಶ_ಹಬ್ಬದ_ಸ್ಪೆಷಲ್_ಥೀಮ್_ಬೆಲ್ಲ

#ರೆಸಿಪಿ_20

#ಹೆಸರು_ಬೇಳೆ_ಮತ್ತು_ಕಡಲು_ಬೇಳೆ_ಹೋಳಿಗೆ

ಬೇಕಾಗುವ ಸಾಮಗ್ರಿ :
💐ಹೆಸರು ಬೇಳೆ - 1 ಕಪ್
💐ಕಡಲೆ ಬೇಳೆ - 1 ಕಪ್
💐ಬೆಲ್ಲ - 1 1/2 ಕಪ್
💐ರವಾ - 1 ಕಪ್
💐ಗೋಧಿ ಹಿಟ್ಟು - 1 ಕಪ್ (ಸುಮಾರು)
💐ಅರಿಶಿಣ - 1 ಚೀಟಿ
💐ನೀರು - ಅಗತ್ಯಕ್ಕೆ ತಕ್ಕಷ್ಟು
💐ಉಪ್ಪು - 1/4 ಚಮಚ
💐ಎಣ್ಣೆ - 1/2 ಲೋಟ

ಮಾಡುವ ವಿಧಾನ :
💐ಮೊದಲು ಕಡಲೆ ಬೇಳೆ ಮತ್ತು ಹೆಸರು ಬೇಳೆಯನ್ನು ಅರ್ಧ ಗಂಟೆ ನೆನೆಸಿ ಕುಕ್ಕರ್ ನಲ್ಲಿ ಹಾಕಿ 5 ಲೋಟ ನೀರು ಹಾಕಿ 5 ರಿಂದ 6 ಸೀಟಿ ಹಾಕಿಸಬೇಕು.
💐ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಬೆಲ್ಲ ಸೇರಿಸಿ ಎಳೆಪಾಕ ಮಾಡಿ ತಣ್ಣಗಾದ ನಂತರ ಉಂಡೆ ಮಾಡಿಕೊಳ್ಳಬೇಕು. ಇದು ಹೋಳಿಗೆಯ ಹೂರ್ಣ.
💐ರವಾವನ್ನು ಸ್ವಲ್ಪ ನೀರು ಹಾಕಿ ನೆನೆಸಿ ನೀರು ಹಾಕದೇ ರುಬ್ಬಿಕೊಳ್ಳಬೇಕು.
💐ಇದಕ್ಕೆ ಒಂದು ಚಿಟಿಕೆ ಅರಿಶಿಣ, ಉಪ್ಪು ಸೇರಿಸಿ ಕಲಸಿ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಮೆತ್ತಗೆ ಕಲಸಿಕೊಳ್ಳಬೇಕು.
ಇದರ ಮೇಲೆ ಎಣ್ಣೆ ಹಾಕಿ ಒಂದು ಗಂಟೆ ಬಿಡಬೇಕು. ಇದು ಕಣಕ.
💐ನಂತರ ಕಣಕದ ಒಳಗೆ ಹೂರ್ಣದ ಉಂಡೆ ಹಾಕಿ ಲಟ್ಟಿಸಿ ಬೇಯಿಸಬೇಕು.

ತುಪ್ಪ ಹಾಗೂ ಸಕ್ಕರೆ ಪಾಕದ ಜೊತೆಗೆ ಸವಿಯಬೇಕು.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ