ಭಾನುವಾರ, ಆಗಸ್ಟ್ 29, 2021

ಹೋಳಿಗೆ

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು

#ಗೌರಿ_ಗಣೇಶ_ಹಬ್ಬದ_ಸ್ಪೆಷಲ್_ಥೀಮ್_ಬೆಲ್ಲ

#ರೆಸಿಪಿ_20

#ಹೆಸರು_ಬೇಳೆ_ಮತ್ತು_ಕಡಲು_ಬೇಳೆ_ಹೋಳಿಗೆ

ಬೇಕಾಗುವ ಸಾಮಗ್ರಿ :
💐ಹೆಸರು ಬೇಳೆ - 1 ಕಪ್
💐ಕಡಲೆ ಬೇಳೆ - 1 ಕಪ್
💐ಬೆಲ್ಲ - 1 1/2 ಕಪ್
💐ರವಾ - 1 ಕಪ್
💐ಗೋಧಿ ಹಿಟ್ಟು - 1 ಕಪ್ (ಸುಮಾರು)
💐ಅರಿಶಿಣ - 1 ಚೀಟಿ
💐ನೀರು - ಅಗತ್ಯಕ್ಕೆ ತಕ್ಕಷ್ಟು
💐ಉಪ್ಪು - 1/4 ಚಮಚ
💐ಎಣ್ಣೆ - 1/2 ಲೋಟ

ಮಾಡುವ ವಿಧಾನ :
💐ಮೊದಲು ಕಡಲೆ ಬೇಳೆ ಮತ್ತು ಹೆಸರು ಬೇಳೆಯನ್ನು ಅರ್ಧ ಗಂಟೆ ನೆನೆಸಿ ಕುಕ್ಕರ್ ನಲ್ಲಿ ಹಾಕಿ 5 ಲೋಟ ನೀರು ಹಾಕಿ 5 ರಿಂದ 6 ಸೀಟಿ ಹಾಕಿಸಬೇಕು.
💐ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದಕ್ಕೆ ಬೆಲ್ಲ ಸೇರಿಸಿ ಎಳೆಪಾಕ ಮಾಡಿ ತಣ್ಣಗಾದ ನಂತರ ಉಂಡೆ ಮಾಡಿಕೊಳ್ಳಬೇಕು. ಇದು ಹೋಳಿಗೆಯ ಹೂರ್ಣ.
💐ರವಾವನ್ನು ಸ್ವಲ್ಪ ನೀರು ಹಾಕಿ ನೆನೆಸಿ ನೀರು ಹಾಕದೇ ರುಬ್ಬಿಕೊಳ್ಳಬೇಕು.
💐ಇದಕ್ಕೆ ಒಂದು ಚಿಟಿಕೆ ಅರಿಶಿಣ, ಉಪ್ಪು ಸೇರಿಸಿ ಕಲಸಿ ಹಿಡಿಯುವಷ್ಟು ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಮೆತ್ತಗೆ ಕಲಸಿಕೊಳ್ಳಬೇಕು.
ಇದರ ಮೇಲೆ ಎಣ್ಣೆ ಹಾಕಿ ಒಂದು ಗಂಟೆ ಬಿಡಬೇಕು. ಇದು ಕಣಕ.
💐ನಂತರ ಕಣಕದ ಒಳಗೆ ಹೂರ್ಣದ ಉಂಡೆ ಹಾಕಿ ಲಟ್ಟಿಸಿ ಬೇಯಿಸಬೇಕು.

ತುಪ್ಪ ಹಾಗೂ ಸಕ್ಕರೆ ಪಾಕದ ಜೊತೆಗೆ ಸವಿಯಬೇಕು.

ವೇದಾವತಿ ಭಟ್ಟ
ಮುಂಬೈ 

ಬುಧವಾರ, ಆಗಸ್ಟ್ 25, 2021

ಅಕ್ಕಿತರಿ (ಅಕ್ಕಿ ಕಡಿ) ಉಪ್ಪಿಟ್ಟು

ಅಕ್ಕಿತರಿ (ಅಕ್ಕಿ ಕಡಿ) ಉಪ್ಪಿಟ್ಟು

ಬೇಕಾಗುವ ಸಾಮಗ್ರಿ :
ಅಕ್ಕಿತರಿ - 1 1/2 ಕಪ್
ಈರುಳ್ಳಿ - 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿಬೇವಿನ ಸೊಪ್ಪು - 6/7
ಹಸಿಮೆಣಸಿನಕಾಯಿ - 2
ಸಾಸಿವೆ - 1 ಚಮಚ
ಕೊಬ್ಬರಿ ಎಣ್ಣೆ - 2 ಚಮಚ
ಕ್ಯಾರೆಟ್ - 1
ಬೀನ್ಸ್ - 10/15
ಕಾಯಿತುರಿ - 1/2 ಕಪ್
ಸಾಸಿವೆ - 1 ಚಮಚ
ಅರಿಶಿಣ - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ನೀರು - 4 ಲೋಟ

ಮಾಡುವ ವಿಧಾನ :
ಮೊದಲು ಅಕ್ಕಿತರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಅರಿಶಿಣ ಹಾಕಿ ಸಾಸಿವೆ ಸಿಡಿಸಿ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಕೈಯಾಡಿಸಿ ಹೆಚ್ಚಿದ ಕ್ಯಾರೆಟ್, ಬೀನ್ಸ್ ಮತ್ತು ಕಾಯಿತುರಿ ಹಾಕಿ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 4 ಲೋಟ ನೀರು ಹಾಕಿ ಬೇಯಿಸಬೇಕು.
ನೀರು ಬೇಕಾದಲ್ಲಿ ಸೇರಿಸಿ ಸರಿಯಾಗಿ ಬೇಯಿಸಿ ಸಕ್ಕರೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಬೇಕು.

ಹಸಿಬಟಾಣಿ ಅಥವಾ ನಿಮ್ಮ ಇಷ್ಟದ ಬೇರೆ ತರಕಾರಿ ಸೇರಿಸಬಹುದು.

ವೇದಾವತಿ ಭಟ್ಟ
ಮುಂಬೈ 

ಮಂಗಳವಾರ, ಆಗಸ್ಟ್ 24, 2021

ಕ್ಯಾಪ್ಸಿಕಂ ಗ್ರೇವಿ


ಬೇಕಾಗುವ ಸಾಮಗ್ರಿ :
ಕ್ಯಾಪ್ಸಿಕಂ - 4/5
ಕಾಯಿತುರಿ - 1/4 ಕಪ್
ಶೇಂಗಾ - 2 ಚಮಚ
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ + 1 ಚಮಚ
ಕೊತ್ತಂಬರಿ - 1 ಚಮಚ
ಮೆಂತ್ಯ - 1/4 ಚಮಚ
ಒಣ ಮೆಣಸಿನ ಕಾಯಿ - 3/4
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಈರುಳ್ಳಿ - 1 (ದೊಡ್ಡದು)
ಟೊಮಾಟೊ - 1
ಕರಿ ಬೇವಿನ ಸೊಪ್ಪು - 6/7
ಎಣ್ಣೆ - 1 ಚಮಚ + 2 ಚಮಚ

ಮಾಡುವ ವಿಧಾನ :
ಬಾಣಲೆಯಲ್ಲಿ ಶೇಂಗಾವನ್ನು ಹುರಿದುಕೊಳ್ಳುಬೇಕು.
ನಂತರ ಎಳ್ಳನ್ನು ಸಹ ಎಣ್ಣೆ ಹಾಕದೇ ಹುರಿದುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಕೊತ್ತಂಬರಿ, 1/2 ಚಮಚ ಜೀರಿಗೆ, ಮೆಂತ್ಯ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಬೇಕು.
ಈ ಎಲ್ಲವನ್ನೂ ಮಿಕ್ಸಿ ಮಾಡಿಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಹಾಕಿ ಹುರಿದು ಸಣ್ಣಗೆ ಹೆಚ್ಚಿದ ಅರ್ಧ ಭಾಗ ಈರುಳ್ಳಿ ಹಾಕಿ ಹುರಿಯಬೇಕು.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ ಹೆಚ್ಚಿದ ಕ್ಯಾಪ್ಸಿಕಂ ಮತ್ತು ಟೊಮಾಟೊ ಹೋಳು ಹಾಕಿ ಹುರಿಯಬೇಕು.
ಉಪ್ಪು ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಕುದಿಸಬೇಕು.
ಉಳಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಬೇಕು.

ಸೋಮವಾರ, ಆಗಸ್ಟ್ 23, 2021

ತಾಳಿಪೀಟು

ತಾಳಿಪೀಟು (ಅಕ್ಕಿ ರೊಟ್ಟಿ)

ಬೇಕಾಗುವ ಸಾಮಗ್ರಿ :
ಅಕ್ಕಿ ಹಿಟ್ಟು - ಸುಮಾರು 2 ಕಪ್
ಈರುಳ್ಳಿ - 2
ಕರಿ ಬೇವಿನ ಸೊಪ್ಪು - 7/8
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ - 1/2 ಇಂಚ್
ಹಸಿಮೆಣಸಿನಕಾಯಿ - 2
ಕಾಯಿ ತುರಿ - 1 ಹಿಡಿ
ಬೀಟ್ರೂಟ್ ತುರಿ - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಈರುಳ್ಳಿ, ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಒಂದು ಪಾತ್ರೆಗೆ ಹಾಕಬೇಕು.
ಕಾಯಿ ತುರಿ ಮತ್ತು ಬಿಟ್ರೂಟ್ ತುರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಬೇಕು.
ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು ಹಾಕಿ ಕೈಯಾಡಿಸಬೇಕು.
ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಬೇಕು.

ಬೆಳಗಿನ ಉಪಹಾರಕ್ಕೆ ಬಹಳ ಚೆನ್ನಾಗಿರುತ್ತದೆ.