ಶನಿವಾರ, ಮಾರ್ಚ್ 20, 2021

ಅಲಸಂದೆ ಮತ್ತು ಕುಂಬಳಕಾಯಿ ಪಲ್ಯ



ಬೇಕಾಗುವ ಸಾಮಗ್ರಿ :
ಅಲಸಂದೆ ಕಾಳು - 1 ಕಪ್
ಕರಿಕುಂಬಳ ಕಾಯಿ ಹೋಳು - 1/2 ಕಪ್
ಕಾಯಿತುರಿ - 1/2 ಕಪ್
ಟೊಮಾಟೊ - 1
ಬೆಳ್ಳುಳ್ಳಿ - 4/5
ಶುಂಠಿ - 1/2 ಇಂಚು
ಈರುಳ್ಳಿ - 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಗೋಡಂಬಿ - 2/4
ಜೀರಿಗೆ - 1/2 ಚಮಚ
ಕೊತ್ತಂಬರಿ ಬೀಜ - 1/2 ಚಮಚ
ಹಸಿ ಮೆಣಸಿನ ಕಾಯಿ - 1
ಸಾಸಿವೆ - 1/2 ಚಮಚ
ಎಣ್ಣೆ - 2 ಚಮಚ
ಬೆಲ್ಲ - 1 ಚಮಚ

ಮಾಡುವ ವಿಧಾನ :
ಮೊದಲು ಅಲಸಂದೆ ಕಾಳನ್ನು ತೊಳೆದು ಬೇಯಿಸಿಕೊಳ್ಳಬೇಕು.
ಕುಂಬಳಕಾಯಿ ಹೋಳನ್ನು ಸಿದ್ಧಪಡಿಸಿ ಇಟ್ಟು ಕೊಳ್ಳಬೇಕು.
ಕಾಯಿತುರಿ, ಟೊಮಾಟೊ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕೊತ್ತಂಬರಿ ಬೀಜ, ಹಸಿ ಮೆಣಸಿನ ಕಾಯಿ ಸೇರಿಸಬೇಕು.
ಗೋಡಂಬಿಯನ್ನು ಹುರಿದು ಸೇರಿಸಬೇಕು.
ಇದೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಇದಕ್ಕೆ ಬೇಯಿಸಿದ ಅಲಸಂದೆ ಕಾಳು ಮತ್ತು ಕುಂಬಳಕಾಯಿ ಹೋಳು ಸೇರಿಸಿ ಬೇಯಿಸಬೇಕು.
ನಂತರ ರುಬ್ಬಿದ ಮಿಶ್ರಣ ಸೇರಿಸಿ ಉಪ್ಪು ಮತ್ತು ಬೆಲ್ಲ ಸೇರಿಸಬೇಕು.
ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಬೇಯಿಸಬೇಕು.

ಬುಧವಾರ, ಮಾರ್ಚ್ 10, 2021

ಕುಲ್ಫೀ

ಕುಲ್ಫೀ

ಬೇಕಾಗುವ ಸಾಮಗ್ರಿ :

ಹಾಲು - 1/2 ಲೀಟರ್
ಕಸ್ಟರ್ಡ್ ಪೌಡರ್ - 2 ಚಮಚ
ಸಕ್ಕರೆ - 1/2 ಕಪ್
ನಟ್ಸ್ (ಗೋಡಂಬಿ,ಪಿಸ್ತಾ) - ಸ್ವಲ್ಪ

ಮಾಡುವ ವಿಧಾನ :
ಹಾಲನ್ನು ದಪ್ಪ ತಳದ ಪಾತ್ರೆಗೆ ಹಾಕಿ ಚೆನ್ನಾಗಿ ಕಾಯಿಸಬೇಕು.
ತಳ ಹಿಡಿಯದಂತೆ ಹಾಗೂ ಕೆನೆ ಗಟ್ಟದಂತೆ ಕೈಯಾಡಿಸುತ್ತಿರಬೇಕು.
ನಂತರ ಸಕ್ಕರೆ ಸೇರಿಸಬೇಕು.
ಕಸ್ಟರ್ಡ್ ಪೌಡರ್ ಗೆ ಹಾಲು ಸೇರಿಸಿ ಗಂಟಿಲ್ಲದಂತೆ ಕರಡಿ ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಬೇಕು.
ಮತ್ತ 10 ನಿಮಿಷ ಕುದಿಸಿದಾಗ ಹಾಲು ದಪ್ಪವಾಗುತ್ತದೆ.
ಬಾದಾಮಿ, ಗೋಡಂಬಿ ಚೂರುಗಳನ್ನು ಸೇರಿಸಬೇಕು.
ಒಲೆಯ ಮೇಲಿಂದ ಇಳಿಸಿ, ತಣ್ಣಗಾದ ನಂತರ ಕುಲ್ಫೀ ಮೌಲ್ಡ್ ಗೆ ಹಾಕಿ ಡೀಪ್ ಫ್ರೀಜರ್ ನಲ್ಲಿ 8 ರಿಂದ 10 ಗಂಟೆ ಬಿಡಬೇಕು.

ಮಾವಿನಕಾಯಿ ಬೂತಗೊಜ್ಜು



ಬೇಕಾಗುವ ಸಾಮಗ್ರಿ :
ಮಾವಿನಕಾಯಿ - 1 (ಮಧ್ಯಮ ಗಾತ್ರದ್ದು)
ಕಾಯಿತುರಿ - 1 ಕಪ್
ಬೆಳ್ಳುಳ್ಳಿ - 6/8
ಉದ್ದಿನ ಬೇಳೆ - 1 ಚಮಚ
ಒಣಮೆಣಸಿನಕಾಯಿ -1
ಸೂಜಿ ಮೆಣಸು - 5/6
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ
ಜೀರಿಗೆ - 1/2 ಚಮಚ
ಸಕ್ಕರೆ - 1/4 ಚಮಚ

ಮಾಡುವ ವಿಧಾನ :
ಮಾವಿನ ಕಾಯಿಯನ್ನು ಬೇಯಿಸಿ ತಣ್ಣಗಾಗಲು ಬಿಡಬೇಕು.
ಬಾಣಲೆಯಲ್ಲಿ ಉದ್ದಿನ ಬೇಳೆ, ಒಣಮೆಣಸನ್ನು ಹುರಿದು ನಂತರ ಜೀರಿಗೆ ಸೇರಿಸಿ ಮತ್ತೆ ಹುರಿಯಬೇಕು. (ಎಣ್ಣೆ ಹಾಕಬಾರದು)
ನಂತರ ಕಾಯಿತುರಿ, ಎರಡು ಬೆಳ್ಳುಳ್ಳಿ ಎಸಳು, ಬೇಯಿಸಿದ ಮಾವಿನಕಾಯಿ ಕಿವುಚಿ ಹಾಕಿ ರುಬ್ಬಬೇಕು.
ಇದಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಬೇಕು.
ನಂತರ ಎಣ್ಣೆ, ಸಾಸಿವೆ ಕಾಳು ಮತ್ತು ಬೆಳ್ಳುಳ್ಳಿಯ ಒಗ್ಗರಣೆ ಕೊಡಬೇಕು.

ಗೋಳಿ ಸೊಪ್ಪಿನ ಹಿಂಡಿ

ಗೋಳಿ ಸೊಪ್ಪಿನ ಹಿಂಡಿ

ಬೇಕಾಗುವ ಸಾಮಗ್ರಿ :
ಗೋಳಿ ಸೊಪ್ಪು - 1 ಕಟ್ಟು
ಈರುಳ್ಳಿ - 1
ಕಾಯಿತುರಿ - 1/2 ಕಪ್
ಒಣಮೆಣಸಿನಕಾಯಿ - 2
ಹುಳಿಪುಡಿ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 2 ಚಮಚ
ಸಾಸಿವೆ ಕಾಳು - 1 ಚಮಚ
ಬೆಲ್ಲ - 1 ಚಮಚ

ಮಾಡುವ ವಿಧಾನ :
ಗೋಳಿ ಸೊಪ್ಪನ್ನು ಹೆಚ್ಚಿ ಉಪ್ಪು ಮತ್ತು ಹುಳಿಪುಡಿ ಹಾಕಿ ಬೇಯಿಸಿಕೊಳ್ಳಬೇಕು.
ನಂತರ ನೀರನ್ನು ಬಸಿದು ಹಿಂಡಿ ಇಟ್ಟುಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಒಣಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು. ಪಕ್ಕದಲ್ಲಿ ಇಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ಕಾಯಿತುರಿ ಸೇರಿಸಿ ಹುರಿಯಬೇಕು.
ನಂತರ ಸಿದ್ಧ ಪಡಿಸಿದ ಗೋಳಿ ಸೊಪ್ಪಿನ ಹೋಳಿಗೆ ಬೇಕಾದಷ್ಟು ಉಪ್ಪು, ಹುಳಿ, ಬೆಲ್ಲ ಮತ್ತು ಹುರಿದ ಒಣಮೆಣಸಿನಕಾಯಿಯನ್ನು ನುರಿದು ಸೇರಿಸಿ ಚೆನ್ನಾಗಿ ಕಲಸಬೇಕು.
ಒಲೆಯ ಮೇಲಿನ ಬಾಣಲೆಗೆ ಈ ಮಿಶ್ರಣವನ್ನು ಸೇರಿಸಿ ಕೈಯಾಡಿಸಬೇಕು.