ಬುಧವಾರ, ಸೆಪ್ಟೆಂಬರ್ 21, 2022

ಕೊಬ್ಬರಿ_ಬಿಸ್ಕತ್




ಬೇಕಾಗುವ ಸಾಮಗ್ರಿ :
ಕಾಯಿ ತುರಿ - 1 ಕಾಯಿಯದ್ದು (3 ಕಪ್ ಸಿಗುತ್ತದೆ)
ಸಕ್ಕರೆ - 1 ರಿಂದ ಒಂದು ಕಾಲು ಕಪ್
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
ಉಪ್ಪು - 1/2 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ :
ಮೊದಲಿಗೆ ಕಾಯಿತುರಿಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ ಒಂದು ಗಂಟೆಗಳ ಕಾಲ ಬಿಡಬೇಕು.
ಆಗ ಸಕ್ಕರೆ ಕರಗಿ ನೀರೊಡೆದಿರುತ್ತದೆ.
ಇದಕ್ಕೆ ಅಗತ್ಯಕ್ಕೆ ತಕ್ಕಂತೆ ಗೋಧಿ ಹಿಟ್ಟು ಸೇರಿಸಿ ಚಪಾತಿಗಿಂತ ಸ್ವಲ್ಪ ತೆಳುವಾಗಿ ಕಲಸಿ ಅರ್ಧ ಗಂಟೆಗಳ ಕಾಲ ಬಿಡಬೇಕು.
ನಂತರ ಅತ್ರಾಸ (ಕಜ್ಜಾಯ) ದಂತೆ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕೆಂಪಗಾಗುವವರೆಗೆ ಕರಿಯಬೇಕು.
ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕು.

ವೇದಾವತಿ ಭಟ್ಟ
ಮುಂಬೈ 

ಬಾದಾಮ್ ಪುರಿ



ಬೇಕಾಗುವ ಸಾಮಗ್ರಿ :
ಮೈದಾ ಹಿಟ್ಟು - 1 1/2 ಕಪ್
ರವಾ - 2 ಚಮಚ
ಬೇಕಿಂಗ್ ಸೋಡಾ - 1 ಚಿಟಿಕೆ
ತುಪ್ಪ - 1 ಚಮಚ
ಎಣ್ಣೆ - 1 ಚಮಚ
ಹಾಲು - 1/4 ಕಪ್
ನೀರು - ಸ್ವಲ್ಪ
ಉಪ್ಪು - 1/4 ಚಮಚ
ಸಕ್ಕರೆ - 1 ಚಮಚ
ಎಣ್ಣೆ - ಕರಿಯಲು

ಸಕ್ಕರೆ ಪಾಕ
ಸಕ್ಕರೆ - 1 1/2 ಕಪ್
ನೀರು - 1 ಕಪ್
ಏಲಕ್ಕಿ ಪುಡಿ - 1 ಚಿಟಿಕೆ

ಸಕ್ಕರೆ ಮತ್ತು ನೀರು ಹಾಕಿ ಎಳೆಪಾಕ ಬರುವವರೆಗೆ ಕುದಿಸಿ ಏಲಕ್ಕಿ ಪುಡಿ ಸೇರಿಸಿದರೆ ಸಕ್ಕರೆ ಪಾಕ ಸಿದ್ಧವಾಯಿತು.

ಮಾಡುವ ವಿಧಾನ :
ಮೈದಾಹಿಟ್ಟು, ರವಾ, ಉಪ್ಪು, ಸಕ್ಕರೆ, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಕಲಸಬೇಕು.
ನಂತರ ತುಪ್ಪ ಮತ್ತು ಎಣ್ಣೆಯನ್ನು ಬಿಸಿ ಮಾಡಿ ಹಾಕಿ, ಹಾಲು ಸೇರಿಸಿ ಕಲಸಬೇಕು.
ಅಗತ್ಯವಿದ್ದಷ್ಟು ನೀರು ಸ್ವಲ್ಪ ಸ್ವಲ್ಪ ಸೇರಿಸಿ ಚೆನ್ನಾಗಿ ನಾದಿ ಕಲಸಬೇಕು.
ಕೊನೆಗೆ ಒಂದೆರಡು ಚಮಚ ಎಣ್ಣೆ ಹಾಕಿ 1 ಗಂಟೆಗಳ ಕಾಲ ಬಿಡಬೇಕು.
ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಲಟ್ಟಿಸಿ ತ್ರಿಕೋನವಾಗಿ ಮಡಚಬೇಕು.
ಮತ್ತೆ ಮೇಲಿನಿಂದ ನಿಧಾನಕ್ಕೆ ಲಟ್ಟಿಸಿ ಬಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು.
ಸಕ್ಕರೆ ಪಾಕಕ್ಕೆ ಹಾಕಿ ಐದು ನಿಮಿಷ ನೆನೆಸಿ ಡಬ್ಬದಲ್ಲಿ ತುಂಬಿಡಬೇಕು.

ವೇದಾವತಿ ಭಟ್ಟ
ಮುಂಬೈ