ಶನಿವಾರ, ಫೆಬ್ರವರಿ 1, 2020

ಕಾಯಿ ಹಲ್ವ (ಕೊಬ್ಬರಿ ಮಿಠಾಯಿ)

ಬೇಕಾಗುವ ಸಾಮಗ್ರಿ :
ಕಾಯಿತುರಿ - 4 ಕಪ್ 
ಸಕ್ಕರೆ - 3 ಕಪ್ 
ಏಲಕ್ಕಿ ಪುಡಿ -- 1/2 ಚಮಚ
ತುಪ್ಪ - 2/3 ಚಮಚ 
ತುಪ್ಪ ಸವರಿದ ಬಟ್ಟಲು  

ಮಾಡುವ ವಿಧಾನ :
ದಪ್ಪ ತಳದ ಪಾತ್ರೆಗೆ ಕಾಯಿತುರಿಯನ್ನು ಮಿಕ್ಸಿ ಮಾಡಿ ಹಾಕಬೇಕು.
ಇದಕ್ಕೆ ಸಕ್ಕರೆಯನ್ನೂ ಸೇರಿಸಬೇಕು.
ಈ ಮಿಶ್ರಣವನ್ನು ಸುಮಾರು ಅರ್ಧ ಗಂಟೆಗಳ ಕಾಲ ಕೈಯಾಡಿಸಬೇಕು.
ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಬೇಕು.
ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಬೇಕು.