ಬೇಕಾಗುವ ಸಾಮಗ್ರಿ :
ಕೊತ್ತಂಬರಿ ಸೊಪ್ಪು - 1 ಕಟ್ಟು
ಕಡಲೇಹಿಟ್ಟು - ಸುಮಾರು 2 ಕಪ್
ಜೀರಿಗೆ - 2 ಚಮಚ
ಹಸಿಮೆಣಸಿನಕಾಯಿ - 3/4
ಬೆಳ್ಳುಳ್ಳಿ - 10/15 ಎಸಳು
ಮಾಡುವ ವಿಧಾನ :
ಕೊತ್ತಂಬರಿ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಸೇರಿಸಬೇಕು.
ಬೆಳ್ಳುಳ್ಳಿಯ ಪೇಸ್ಟ್ ಮತ್ತು ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು.
ಇದಕ್ಕೆ ಅಗತ್ಯವಿರುವಷ್ಟು ಕಡಲೆಹಿಟ್ಟನ್ನು ಸೇರಿಸಿ ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಕುಕ್ಕರ್ ಟ್ರೇ ನಲ್ಲಿ ಇಟ್ಟು ಮೂರು ವಿಸಿಲ್ ಹಾಕಿಸಬೇಕು
ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ಶಾಲೋ ಫ್ರೈ ಇಲ್ಲವೇ ಡೀಪ್ ಫ್ರೈ ಮಾಡಿದರೆ ಕೊತ್ತಂಬರಿ ವಡಾ ಸವಿಯಲು ಸಿದ್ಧ.