ಮಂಗಳವಾರ, ಮಾರ್ಚ್ 14, 2023

ಬಾಳೆ ಹಣ್ಣಿನ ಬನ್ಸ್


ಬೇಕಾಗುವ ಸಾಮಗ್ರಿ :
ಬಾಳೆ ಹಣ್ಣು - 4
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
ಮೊಸರು - 1 ಸೌಟು
ಸಕ್ಕರೆ - 3 ಚಮಚ 
ಜೀರಿಗೆ - 1/2 ಚಮಚ 
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬಾಳೆಹಣ್ಣನ್ನು ಮಿಕ್ಸಿ ಮಾಡಿ ಸಕ್ಕರೆ, ಉಪ್ಪು ಮತ್ತು ಮೊಸರು ಸೇರಿಸಿ ಕಲಸಬೇಕು.
ಈ ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ಹಿಟ್ಟು ಸೇರಿಸಿ ಚಪಾತಿ ಹಿಟ್ಟಿಗಿಂತ ಮೆದುವಾಗಿ ಕಲಸಬೇಕು.
ಇದನ್ನು 5 ರಿಂದ 6 ಗಂಟೆ ಹಾಗೆಯೇ ಬಿಡಬೇಕು.
ನಂತರ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ ಕೈಯಿಂದ ಬೇಕಾದ ಆಕಾರ ಮತ್ತು ಗಾತ್ರದಲ್ಲಿ ತಟ್ಟಿ ಬಿಸಿ ಎಣ್ಣೆಯಲ್ಲಿ ತಟ್ಟಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಬೇಕು.

ವೇದಾವತಿ ಭಟ್ಟ 
ಮುಂಬೈ

ಭಾನುವಾರ, ಮಾರ್ಚ್ 5, 2023

ಹೀರೆಕಾಯಿ ಪಲ್ಯ


ಬೇಕಾಗುವ ಸಾಮಗ್ರಿ -
ಹೀರೆಕಾಯಿ - 1 (ಸಣ್ಣದು)
ತೊಗರಿ ಬೇಳೆ - 1/4 ಕಪ್
ಹಸಿ ಮೆಣಸಿನ ಕಾಯಿ - 1
ಬೆಳ್ಳುಳ್ಳಿ - 2
ಈರುಳ್ಳಿ - 1 (ಸಣ್ಣದು)
ಇಂಗು - 1 ಚಿಟಿಕೆ
ಎಣ್ಣೆ - 2 ಚಮಚ 
ಸಾಸಿವೆ - 1/2 ಚಮಚ
ಅರಿಶಿಣ - 1 ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಜೀರಿಗೆ - 1 ಚಮಚ 
ಪಾವ್ ಬಾಜಿ ಮಸಾಲ - 1/2 ಚಮಚ 
ಹುಣಸೆ ಹಣ್ಣು - ಸಣ್ಣದು
ಕೊತ್ತಂಬರಿ ಸೊಪ್ಪು - ಸ್ವಲ್ಪ 

ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ತೊಗರಿ ಬೇಳೆಯನ್ನು ನೆನೆಸಿಟ್ಟುಕೊಳ್ಳಬೇಕು.
ಹೀರೆಕಾಯಿ ಸಿಪ್ಪೆ ತೆಗೆದು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಒಂದು ಬಾಣಲೆಗೆ ಎಣ್ಣೆ ಹಾಕಿ ಅರಿಶಿಣ, ಸಾಸಿವೆ, ಹಸಿ ಮೆಣಸಿನ ಕಾಯಿ ಹಾಕಿ ಕೈಯಾಡಿಸಿ ಬೆಳ್ಳುಳ್ಳಿ, ಜೀರಿಗೆ ಸೇರಿಸಿ ಕೈಯಾಡಿಸಬೇಕು.
ನಂತರ ನೆನೆಸಿದ ತೊಗರಿ ಬೇಳೆ ಸೇರಿಸಿ ಬೇಕಾದಷ್ಟು ನೀರು ಸೇರಿಸಿ ಬೇಯಿಸಬೇಕು.
ಹೆಚ್ಚಿದ ಹೀರೆಕಾಯಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಳಿ ಸೇರಿಸಿ ಬೇಯಿಸಬೇಕು.
ಕೊನೆಯಲ್ಲಿ ಪಾವ್ ಬಾಜಿ ಮಸಾಲ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಇಳಿಸಿದರೆ ಪಲ್ಯ ಸಿದ್ಧವಾಯಿತು.
ಚಪಾತಿಯ ಜೊತೆಗೆ ಬಹಳ ಒಳ್ಳೆಯ ಕಾಂಬಿನೇಷನ್.

ವೇದಾವತಿ ಭಟ್ಟ 
ಮುಂಬೈ